ಕರ್ನಾಟಕ

karnataka

ETV Bharat / state

ಶಾಸಕರ ಹನಿಟ್ರ್ಯಾಪ್​ ಪ್ರಕರಣದಲ್ಲಿ ಮತ್ತೋರ್ವ ಅರೆಸ್ಟ್​: ಶೀಘ್ರದಲ್ಲೇ ಕೋರ್ಟ್​ಗೆ ಚಾರ್ಜ್​ ಶೀಟ್​ - Honeytrap latest news

ಹನಿಟ್ರ್ಯಾಪ್ ಪ್ರಕರಣದ ಬೆನ್ನತ್ತಿರುವ ಸಿಸಿಬಿ ಪೊಲೀಸರು ಪ್ರಕರಣದಲ್ಲಿ ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದಾರೆ

ಹನಿಟ್ರ್ಯಾಪ್​ ಪ್ರಕರಣ,  another one accused arrested over Honey Trap case
ಹನಿಟ್ರ್ಯಾಪ್​ ಪ್ರಕರಣ

By

Published : Dec 4, 2019, 12:07 PM IST

Updated : Dec 4, 2019, 12:13 PM IST

ಬೆಂಗಳೂರು: ರಾಜ್ಯದ ಕೆಲ ಶಾಸಕರ ಹನಿಟ್ರ್ಯಾಪ್ ಪ್ರಕರಣದ ಬೆನ್ನತ್ತಿರುವ ಸಿಸಿಬಿ ಪೊಲೀಸರು ಪ್ರಕರಣದಲ್ಲಿ ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದಾರೆ. ವಾಗೀಶ್​ ಬಂಧಿತ ಆರೋಪಿ. ಸದ್ಯ ಪ್ರಕರಣದಲ್ಲಿ ಒಟ್ಟು ಆರೋಪಿಗಳ ಸಂಖ್ಯೆ 6 ಕ್ಕೇರಿದೆ.

ಶಾಸಕರ ಹನಿಟ್ರ್ಯಾಪ್​ ಪ್ರಕರಣದಲ್ಲಿ ಈಗಾಗ್ಲೇ ಬಂಧಿತನಾಗಿರುವ ಕಿಂಗ್​ ​ಪಿನ್​ ರಾಘವೇಂದ್ರ ಜೊತೆ ಸೇರಿಕೊಂಡು ವಾಗೀಶ್​ ಹುಡುಗಿಯರನ್ನ ಮುಂದೆ ಬಿಟ್ಟು ಹನಿಟ್ರ್ಯಾಪ್​ ನಡೆಸುತ್ತಿದ್ದ. ನಂತರ ಹುಡುಗಿಯರು ಹಾಗೂ ಶಾಸಕರು ಜೊತೆಗಿರುವ ದೃಶ್ಯಗಳನ್ನ ಶಾಸಕರಿಗೆ ಕಳುಹಿಸಿ ಕೋಟಿ ಕೋಟಿ ಹಣಕ್ಕೆ ಬೇಡಿಕೆ ಇಡುತ್ತಿದ್ದ. ಸದ್ಯ ಈ ಕಾರಣಕ್ಕೆ ವಾಗೀಶ್​ನನ್ನ ಬಂಧಿಸಿರುವ ಸಿಸಿಬಿ, ಹೆಚ್ಚಿನ ವಿಚಾರಣೆಗೆ ಒಳಪಡಿಸಿದೆ.

ಮತ್ತೊಂದೆಡೆ ಸಿಸಿಬಿ ಅಧಿಕಾರಿಗಳು ಇಲ್ಲಿಯವರೆಗೆ ನಡೆಸಿದ ತನಿಖೆಯ ಮಾಹಿತಿ ಕುರಿತಂತೆ ನ್ಯಾಯಾಲಯಕ್ಕೆ ಪ್ರಾಥಮಿಕ ಚಾರ್ಜ್ ಶೀಟ್ ಸಲ್ಲಿಸಲು ನಿರ್ಧರಿಸಿದ್ದಾರೆ. ಇಲ್ಲಿಯವರೆಗೆ ಹನಿಟ್ರ್ಯಾಪ್​ ಪ್ರಕರಣದಲ್ಲಿ ಕೇವಲ ಓರ್ವ ಶಾಸಕ ಮಾತ್ರ ದೂರು ನಿಡಿದ್ದಾರೆ. ಆದರೆ ಆರೋಪಿಗಳನ್ನು ತನಿಖೆ ನಡೆಸಿದಾಗ, ಹಲವು ಶಾಸಕರ ಹನಿಟ್ರ್ಯಾಪ್​ ವಿಡಿಯೋಗಳು ಸಿಕ್ಕಿವೆ. ಉಳಿದ‌ ಶಾಸಕರ‌ ವಿಡಿಯೋ ಸಂಬಂಧ ಯಾವುದೇ ಪ್ರತ್ಯೇಕ‌ ದೂರು ನೀಡದ ಹಿನ್ನೆಲೆ ‌ತನಿಖೆಯಲ್ಲಿ‌ ಸಿಕ್ಕಿರುವ ಶಾಸಕರ ವಿಡಿಯೋ ದಾಖಲೆಗಳನ್ನು ಚಾರ್ಜ್ ಶೀಟ್​ನಲ್ಲಿ‌ ಸೇರಿಸಲು‌ ಸಿಸಿಬಿ ತಂಡ ತೀರ್ಮಾನಿಸಿದೆ.

ಈಗಾಗಲೇ ಹನಿಟ್ರ್ಯಾಪ್​ಗೆ​ ಒಳಗಾದ ಶಾಸಕ ಹಾಗೂ ಆರೋಪಿಗಳ ವಿಡಿಯೋ‌ ದಾಖಲೆ ಆಧರಿಸಿ ತನಿಖಾಧಿಕಾರಿಗಳು ಕೆಲವೇ ದಿನಗಳಲ್ಲಿ ಕೋರ್ಟ್ ಗೆ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸದ್ದಾರೆ ಎಂದು ತಿಳಿದುಬಂದಿದೆ.

Last Updated : Dec 4, 2019, 12:13 PM IST

ABOUT THE AUTHOR

...view details