ಬೆಂಗಳೂರು :ಸ್ಯಾಂಡಲ್‌ವುಡ್ ಡ್ರಗ್ಸ್ ಡೀಲ್ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ನೈಜೀರಿಯಾ ಮೂಲದ ಮತ್ತೋರ್ವ ಡ್ರಗ್ ಪೆಡ್ಲರ್‌ನ ವಶಕ್ಕೆ ಪಡೆದಿದ್ದಾರೆ. ಈಗಾಗಲೇ ಬಂಧಿತ ಲೂಯಿಸ್ ಪೆಪ್ಪರ್ ಹಾಗೂ ಓಸಿ ಪಿಲಿಫ್ಸ್ ಸಂಪರ್ಕದಲ್ಲಿದ್ದ ನೈಜೀರಿಯಾ ಪ್ರಜೆ ಕ್ಯಾಂಟೆಯನ್ನು ಸಿಸಿಬಿ ಪೊಲೀಸರು ತಡರಾತ್ರಿ ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ.
ಡ್ರಗ್ಸ್ ಡೀಲ್ ಸಂಬಂಧ ಮತ್ತೋರ್ವ ನೈಜೀರಿಯಾ ಪ್ರಜೆ ಸಿಸಿಬಿ ವಶಕ್ಕೆ - ನೈಜೀರಿಯಾ ಪ್ರಜೆ ಸಿಸಿಬಿ ವಶಕ್ಕೆ
ಎಷ್ಟು ವರ್ಷಗಳಿಂದ ಡ್ರಗ್ಸ್ ಸಪ್ಲೈ ಮಾಡುತ್ತಿದ್ದ ಮತ್ತು ಯಾರಿಗೆಲ್ಲ ಸಪ್ಲೈ ಮಾಡ್ತಿದ್ದ ಎಂಬುದುರ ಬಗ್ಗೆ ಸಿಸಿಬಿ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ..
ಸಿಸಿಬಿ ಕಚೇರಿ ಬೆಂಗಳೂರು
ಡ್ರಗ್ಸ್ ಡೀಲರ್ಗಳ ಜೊತೆ ಸಂಪರ್ಕದಲ್ಲಿದ್ದ ಕ್ಯಾಂಟೆ ಸ್ವತಃ ಡ್ರಗ್ ಪೆಡ್ಲರ್ ಆಗಿದ್ದ. ಎಷ್ಟು ವರ್ಷಗಳಿಂದ ಡ್ರಗ್ಸ್ ಸಪ್ಲೈ ಮಾಡುತ್ತಿದ್ದ ಮತ್ತು ಯಾರಿಗೆಲ್ಲ ಸಪ್ಲೈ ಮಾಡ್ತಿದ್ದ ಎಂಬುದುರ ಬಗ್ಗೆ ಸಿಸಿಬಿ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಸದ್ಯ ಕ್ಯಾಂಟೆ ವಶಕ್ಕೆ ಪಡೆದಿರುವ ಸಿಸಿಬಿ ಪೊಲೀಸರು ಡ್ರಗ್ಸ್ ಡೀಲಿಂಗ್ ನೆಟ್ವರ್ಕ್ನಲ್ಲಿರುವ ಮತ್ತಿತರೆ ಪೆಡ್ಲರ್ಗಳು ಯಾರು ಎಂಬುದರ ಕುರಿತು ವಿಚಾರಣೆ ಮುಂದುವರೆಸಿದ್ದಾರೆ.