ಬೆಂಗಳೂರು: ಇಂದು ಸಂಜೆಯೊಳಗೆ ಬಹುಮತ ಸಾಬೀತುಪಡಿಸುವಂತೆ ರಾಜ್ಯಪಾಲರಿಂದ ಸಿಎಂಗೆ ಮತ್ತೊಂದು ಪತ್ರ ರವಾನೆಯಾಗಿದೆ.
ಸಿಎಂಗೆ ಮತ್ತೊಂದು ಪತ್ರ... ಸಂಜೆಯೊಳಗೆ ಬಹುಮತ ಸಾಬೀತು ಪಡಿಸಲು ಸೂಚನೆ
ನಿನ್ನೆ ಸಂಜೆ ಸಹ ಪತ್ರ ಬರೆದಿದ್ದ ರಾಜ್ಯಪಾಲರು ಇಂದು ಮಧ್ಯಾಹ್ನ 1.30 ರ ಒಳಗೆ ಬಹುಮತ ಸಾಬೀತುಪಡಿಸುವಂತೆ ಸೂಚಿಸಿದ್ದರು. ಆದ್ರೆ ಇದನ್ನು ಪರಿಗಣಿಸದ ಸರ್ಕಾರ ಸದನದಲ್ಲಿ ಚರ್ಚೆ ಮುಂದುವರಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯಪಾಲರು ಇಂದು ಮತ್ತೊಂದು ಪತ್ರವನ್ನು ಸಿಎಂಗೆ ರವಾನಿಸಿದ್ದಾರೆ.
ಸಿಎಂಗೆ ಮತ್ತೊಂದು ಪತ್ರ.
ನಿನ್ನೆ ಸಂಜೆ ರಾಜ್ಯಪಾಲರ ವಿಶೇಷ ಅಧಿಕಾರಿ ರಮೇಶ್ ಆಗಮಿಸಿ ಸ್ಪೀಕರ್ ಜತೆ ಮಾತುಕತೆ ನಡೆಸಿ ಅಲ್ಲಿಂದ ತೆರಳಿದ್ದರು. ನಿನ್ನೆ ಸಂಜೆ ಸಹ ಪತ್ರ ಬರೆದಿದ್ದ ರಾಜ್ಯಪಾಲರು ಶುಕ್ರವಾರ(ಇಂದು) ಮಧ್ಯಾಹ್ನ 1.30 ರ ಒಳಗೆ ಬಹುಮತ ಸಾಬೀತುಪಡಿಸುವಂತೆ ಸೂಚಿಸಿದ್ದರು.
ಇದೆಲ್ಲವನ್ನು ಉಲ್ಲಂಘನೆ ಮಾಡಿದ ಹಿನ್ನೆಲೆ ರಾಜ್ಯಪಾಲರು ಇನ್ನೊಂದು ಪತ್ರ ಬರೆದಿದ್ದಾರೆ. ಪತ್ರದಲ್ಲಿ ಇಂದು ಸಂಜೆಯೊಳಗೆ ಬಹುಮತ ಸಾಬೀತಿಗೆ ಗವರ್ನರ್ ಸೂಚಿಸಿದ್ದಾರೆ. ಸಿಎಂ ಕಚೇರಿಗೆ ನೀಡಿರುವ ಸೂಚನೆಯ ಪತ್ರವನ್ನು ರಾಜ್ಯಪಾಲರ ವಿಶೇಷಾಧಿಕಾರಿ ರಮೇಶ್ ತಲುಪಿಸಿದ್ದಾರೆ.