ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಹವಾಲ ಜಾಲ ಬಯಲಾಗಿದೆ. ಸುಮಾರು 74 ಲಕ್ಷ ರೂ. ಹಣವನ್ನು ಹಲಸೂರು ಗೇಟ್ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಮತ್ತೊಂದು ಹವಾಲ ಜಾಲ ಬಯಲು: 74 ಲಕ್ಷ ರೂ. ಹಣ ಜಪ್ತಿ - Hawala network in Bangalore
ಕುಂಬಾರ್ ಪೇಟೆ ಮುಖ್ಯ ರಸ್ತೆ ಅಂಗಡಿ ಕಚೇರಿಯಲ್ಲಿ ಅಧಿಕ ಹಣ ಇಟ್ಟುಕೊಂಡು ಆರೋಪಿಗಳು ಹಣದ ವ್ಯವಹಾರ ಮಾಡುತ್ತಿರುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದಾಗ ಯಾವುದೇ ದಾಖಲೆಗಳು ಇಲ್ಲದ 74 ಲಕ್ಷ ರೂ. ಹಣ ಲಭ್ಯವಾಗಿದ್ದು, ವಿಚಾರಣೆ ವೇಳೆ ಹವಾಲ ವಿಚಾರ ಬಯಲಾಗಿದೆ.

ಬೆಂಗಳೂರಿನಲ್ಲಿ ಮತ್ತೊಂದು ಹವಾಲ ಜಾಲ ಬಯಲು
ಹವಾಲ ದಂಧೆ ನಡೆಸುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ವಿಪುಲ್, ಮೋಹನ್ ಲಾಲ್, ಗಣೇಶ್ ಬಂಧಿತ ಆರೋಪಿಗಳು. ಕುಂಬಾರ್ ಪೇಟೆ ಮುಖ್ಯ ರಸ್ತೆ ಅಂಗಡಿ ಕಚೇರಿಯಲ್ಲಿ ಅಧಿಕ ಹಣ ಇಟ್ಟುಕೊಂಡು ಆರೋಪಿಗಳು ಹಣದ ವ್ಯವಹಾರ ಮಾಡುತ್ತಿರುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು.
ಖಚಿತ ಮಾಹಿತಿ ಮೇರೆಗೆ ಎಸಿಪಿ ನಜ್ಮಾ ಫಾರೂಕ್, ಪಿಎಸ್ಐ ಮಲ್ಲಿಕಾರ್ಜುನ್ ದಾಳಿ ನಡೆಸಿದ್ದಾರೆ. ಈ ವೇಳೆ ಯಾವುದೇ ದಾಖಲೆಗಳು ಇಲ್ಲದ 74 ಲಕ್ಷ ರೂ. ಹಣ ಲಭ್ಯವಾಗಿದ್ದು, ವಿಚಾರಣೆ ವೇಳೆ ಹವಾಲ ವಿಚಾರ ಬಯಲಾಗಿದೆ. ಸದ್ಯ ಆರೋಪಿಗಳನ್ನ ಪೊಲೀಸರು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ