ಕರ್ನಾಟಕ

karnataka

ETV Bharat / state

ವಿದ್ಯುತ್ ಸ್ಪರ್ಶದಿಂದ ಮತ್ತೊಂದು ಸಾವು :  5 ಲಕ್ಷ ರೂ. ಪರಿಹಾರ ನೀಡಿದ ಮೇಯರ್ - kannada news

ನಿನ್ನೆ ಸುರಿದ ಮಳೆಯಿಂದಾಗಿ, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರೋಬ್ಬರಿ 56 ಮರಗಳು, 596 ಕೊಂಬೆಗಳು ಧರೆಗುರುಳಿದ್ದು, ಮಹಾನಗರ ಪಾಲಿಕೆ ತೆರವುಗೊಳಿಸುವ ಕಾರ್ಯ ನಡೆಸುತ್ತಿದೆ.

ವಿದ್ಯುತ್ ಸ್ಪರ್ಶದಿಂದ ಮೃತಪಟ್ಟ ವ್ಯಕ್ತಿಯ ಮನೆಗೆ ಭೇಟಿ ನೀಡಿದ ಮೇಯರ್

By

Published : May 26, 2019, 8:00 PM IST

ಬೆಂಗಳೂರು : ರಾತ್ರಿ ಸುರಿದ ಗಾಳಿ ಮಳೆಗೆ ತೆಂಗಿನ ಮರದ ಕೊಂಬೆ ಮುರಿದು ಬಿದ್ದ ಪರಿಣಾಮ ಮನೆಯ ವಿದ್ಯುತ್ ಸಂಪರ್ಕದ ತಂತಿ ಕೆಳಗೆ ಬಿದ್ದಿದ್ದು‌ ಅದನ್ನು ಗಮನಿಸದೆ ಸತೀಶ್ (35) ಎಂಬುವರು ತುಳಿದಿದ್ದರಿಂದ ಕರೆಂಟ್ ಶಾಕ್ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದರು.

ವಾಡ್೯ 79, ಕಾಕ್ಸ್ ಟೌನ್‌ ನ, ರಾಮಚಂದ್ರಪ್ಪ ಗಾರ್ಡನ್ 9 ರಲ್ಲಿ ರಾತ್ರಿ 11-30 ರ ಸಮಯದಲ್ಲಿ ಈ ಘಟನೆ ನಡೆದಿತ್ತು. ಇಂದು ಸ್ಥಳಕ್ಕೆ ಭೇಟಿ ನೀಡಿದ ಮೇಯರ್​ ಗಂಗಾಂಭಿಕೆ ಕುಟುಂಬಸ್ಥರಿಗೆಸ್ವಾಂತನ ಹೇಳಿ, ಬಿಬಿಎಂಪಿ ವತಿಯಿಂದ 5 ಲಕ್ಷದ ಅರ್ಥಿಕ ಸಹಾಯವನ್ನು ನೀಡಲಾಗುವುದು ಎಂದು ತಿಳಿಸಿದರು.

ವಿದ್ಯುತ್ ಸ್ಪರ್ಶದಿಂದ ಮೃತಪಟ್ಟ ವ್ಯಕ್ತಿಯ ಮನೆಗೆ ಭೇಟಿ ನೀಡಿದ ಮೇಯರ್

ಇನ್ನು‌ ನಿನ್ನೆ‌ ಸುರಿದ ಮಳೆಯಿಂದಾಗಿ, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರೋಬ್ಬರಿ 56 ಮರಗಳು, 596 ಕೊಂಬೆಗಳು ಧರೆಗುರುಳಿವೆ. ದಕ್ಷಿಣ ವಲಯದಲ್ಲಿ 21 ಮರಗಳು, 350 ಕೊಂಬೆಗಳು, ಪೂರ್ವ ವಲಯದಲ್ಲಿ 14 ಮರಗಳು,109 ಕೊಂಬೆಗಳು, ಪಶ್ಚಿಮದಲ್ಲಿ 05 ಮರಗಳು, 110 ಕೊಂಬೆಗಳು, ಆರ್ ಆರ್ ನಗರ 3 ಮರಗಳು, 17 ಕೊಂಬೆಗಳು, ಬೊಮ್ಮನಹಳ್ಳಿ 4 ಮರ 5 ಕೊಂಬೆಗಳು, ಯಲಹಂಕದಲ್ಲಿ 2 ಮರಗಳು, ದಾಸರಹಳ್ಳಿ 02, ಮಹದೇವಪುರ 7 ಮರ ಮತ್ತು 03 ಕೊಂಬೆಗಳು ಬಿದ್ದಿವೆ.

ಇದರಿಂದಾಗಿ ಅನೇಕ ವಾಹನಗಳು ಜಖಂಗೊಂಡಿದ್ದು, ಘಟನೆ ನಡೆದ ಸ್ಥಳಗಳಿಗೆ ಮೇಯರ್ ಗಂಗಾಂಭಿಕೆ ಜೊತೆಗೆ ಆಯುಕ್ತ ಮಂಜುನಾಥ್ ಪ್ರಸಾದ್ ಭೇಟಿ ನೀಡಿ ತಪಾಸಣೆ ನಡೆಸಿದರು.‌ ಇನ್ನು ಅದಷ್ಟು ಬೇಗೆ ತೆರವುಗೊಳಿಸುವಂತೆ ವಲಯ ಅಧಿಕಾರಿಗಳಿಗೆ ನಿದೇರ್ಶನ ನೀಡಿದರು.‌ ಅದರಂತೆ ಮಧ್ಯಾಹ್ನ 2-00 ಗಂಟೆಗೆ 44 ಮರಗಳು, 359 ಕೊಂಬೆಗಳನ್ನು ತೆರವುಗೊಳಿಸಲಾಗಿದ್ದು, ಇನ್ನುಳಿದ ಮರ ಕೊಂಬೆಗಳು ತೆರವು ಗೊಳಿಸುವ ಕಾರ್ಯ ಮುಂದುವರೆದಿದೆ.

For All Latest Updates

ABOUT THE AUTHOR

...view details