ಕರ್ನಾಟಕ

karnataka

ETV Bharat / state

ಬೆಂಗಳೂರಲ್ಲಿ ಮತ್ತೊಂದು ಕಟ್ಟಡ ಕುಸಿಯುವ ಭೀತಿ: ಒಂದು ಅಡಿಯಷ್ಟು ವಾಲಿದ ಪೊಲೀಸ್ ಕ್ವಾಟರ್ಸ್ - Police quaters

ಕಾಟನ್‌ಪೇಟೆಯ ಬಿನ್ನಿಮಿಲ್ ಸಮೀಪದ ಪೊಲೀಸ್ ವಸತಿ ಗೃಹದ ಬಿ ಬ್ಲಾಕ್​ನ ವಸತಿ ಸಮುಚ್ಚಯ ಒಂದು ಅಡಿಯಷ್ಟು ಎಡಕ್ಕೆ ವಾಲಿದೆ. ನಗರದಲ್ಲಿ ಕಟ್ಟಡಗಳು ಕುಸಿಯುತ್ತಿರುವ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಕಟ್ಟಡದಲ್ಲಿ ವಾಸವಾಗಿರುವ ಕುಟುಂಬಗಳನ್ನು ತೆರವುಗೊಳಿಸಲು ಪೊಲೀಸ್ ಇಲಾಖೆ ನಿರ್ಧರಿಸಿದೆ.

Another building in the city in fear of collapsing
ಕುಸಿಯುವ ಭೀತಿಯಲ್ಲಿ ನಗರದ ಮತ್ತೊಂದು ಕಟ್ಟಡ

By

Published : Oct 16, 2021, 11:47 AM IST

ಬೆಂಗಳೂರು:ನಗರದಲ್ಲಿ ಮತ್ತೊಂದು ಕಟ್ಟಡ ಕುಸಿಯುವ ಭೀತಿ ಎದುರಾಗಿದ್ದು, 7 ಮಹಡಿಯ ಬೃಹತ್ ಕಟ್ಟಡದಲ್ಲಿ ವಾಸವಾಗಿರುವ ಕುಟುಂಬಗಳನ್ನು ತೆರವುಗೊಳಿಸಲು ಪೊಲೀಸ್ ಇಲಾಖೆ ಮುಂದಾಗಿದೆ.

ಕಾಟನ್‌ಪೇಟೆಯ ಬಿನ್ನಿಮಿಲ್ ಸಮೀಪದ ಪೊಲೀಸ್ ವಸತಿ ಗೃಹದ ಬಿ ಬ್ಲಾಕ್​ನ ವಸತಿ ಸಮುಚ್ಚಯ ಒಂದು ಅಡಿಯಷ್ಟು ಎಡಕ್ಕೆ ವಾಲಿದೆ. ಸಮುಚ್ಚಯದಲ್ಲಿ ನಗರ ಸಶಸ್ತ್ರ ಮೀಸಲು ಪಡೆ, ಸಿವಿಲ್ ಪೊಲೀಸ್ ಸೇರಿದಂತೆ ಪೊಲೀಸ್ ಇಲಾಖೆಯ ವಿವಿಧ ವಿಭಾಗಗಳ 32ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿವೆ. ಸುಮಾರು 30 ವರ್ಷಕ್ಕೂ ಹಳೆಯದಾದ ಈ ಕಟ್ಟಡ ಒಂದು ಅಡಿಯಷ್ಟು ವಾಲಿಕೊಂಡಿದೆ.

ಕುಸಿಯುವ ಭೀತಿಯಲ್ಲಿ ನಗರದ ಮತ್ತೊಂದು ಕಟ್ಟಡ

ನಗರದಲ್ಲಿ ಕಟ್ಟಡಗಳು ಕುಸಿಯುತ್ತಿರುವ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಕಟ್ಟಡದಲ್ಲಿ ವಾಸವಾಗಿರುವ ಕುಟುಂಬಗಳನ್ನು ತೆರವುಗೊಳಿಸಲು ಪೊಲೀಸ್ ಇಲಾಖೆ ನಿರ್ಧರಿಸಿದೆ. ನಂತರ ಇದೇ ಜಾಗದಲ್ಲಿ ನೂತನ ಕಟ್ಟಡ ನಿರ್ಮಿಸಲಾಗುತ್ತದೆ ಎಂದು ತಿಳಿಸಿದೆ.

ಕಟ್ಟಡದಲ್ಲಿ ಬಿರುಕು

ಇದನ್ನೂ ಓದಿ:ಉಪ ಚುನಾವಣೆಗಳಲ್ಲಿ ಗೆಲ್ಲುವ ವಿಶ್ವಾಸವಿದೆ: ಸಿಎಂ ಬಸವರಾಜ ಬೊಮ್ಮಾಯಿ

ABOUT THE AUTHOR

...view details