ಕರ್ನಾಟಕ

karnataka

ETV Bharat / state

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮತ್ತೊಂದು ಪ್ರಶಸ್ತಿ.. - BIAL CEO Hari Marar

ಬೆಂಗಳೂರು ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್ (ಬಿಐಎಎಲ್) ಸಿಇಒ ಹರಿ ಮರಾರ್ ಮಾತನಾಡಿ, ಈ ಪ್ರಶಸ್ತಿ ಲಭಿಸಿದ್ದು ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುವ ನಮ್ಮೆಲ್ಲರಿಗೂ ಸಂತಸ ತಂದಿದೆ. ಇಲ್ಲಿನ ಸಿಬ್ಬಂದಿಯ ಕಾರ್ಯಕ್ಷಮತೆಯಿಂದ ಈ ಪ್ರಶಸ್ತಿ ಲಭಿಸಿದೆ. ಈ ಪ್ರಶಸ್ತಿಗೆ ಮತ ಹಾಕಿದ ಎಲ್ಲಾ ಪ್ರಯಾಣಿಕರಿಗೂ ಅಭಿನಂದನೆ ತಿಳಿಸಿದ್ದಾರೆ..

another-award-for-kempegowda-international-airport
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ

By

Published : Aug 23, 2021, 7:07 PM IST

ದೇವನಹಳ್ಳಿ :ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮತ್ತೊಂದು ಪ್ರಶಸ್ತಿಯ ಗರಿ ಲಭಿಸಿದೆ. ಸ್ಕೈಟ್ರಾಕ್ಸ್ ವರ್ಲ್ಡ್ ಏರ್‌ಪೋರ್ಟ್ ಅವಾರ್ಡ್ಸ್ ನಿಂದ ಕೊಡಲಾಗುವ 'ಬೆಸ್ಟ್ ಏರ್‌ಪೋರ್ಟ್ ಸ್ಟಾಫ್ ಇನ್ ಇಂಡಿಯಾ ಆ್ಯಂಡ್ ಸೆಂಟ್ರಲ್ ಏಷ್ಯಾ' ಪ್ರಶಸ್ತಿ ಲಭಿಸಿದೆ. ಭಾರತ ಮತ್ತು ಮಧ್ಯ ಏಷ್ಯಾದಲಿಯ್ಲೇ ಅತ್ಯುತ್ತಮ ವಿಮಾನ ನಿಲ್ದಾಣ ಸಿಬ್ಬಂದಿಯ ಗೌರವಕ್ಕೆ ಕೆಐಎಎಲ್ ಪಾತ್ರವಾಗಿದೆ.

ಸ್ಕೈಟ್ರಾಕ್ಸ್ ವರ್ಲ್ಡ್ ಏರ್‌ಪೋರ್ಟ್ ಅವಾರ್ಡ್‌ ವತಿಯಿಂದ ನಡೆಸಲಾದ ಸಮೀಕ್ಷೆಯಲ್ಲಿ ಗ್ರಾಹಕರು ಕೆಐಎಎಲ್ ಗೆ ಹೆಚ್ಚು ಅಂಕ ನೀಡಿ ಪ್ರಶಸ್ತಿಗೆ ಕಾರಣವಾಗಿದ್ದಾರೆ. ಇತರೆ ವಿಮಾನ‌ ನಿಲ್ದಾಣಗಳಲ್ಲಿ‌ನ ಸಿಬ್ಬಂದಿ ನೀಡುವ ಸೇವೆಗಿಂತ ಕೆಐಎಎಲ್​ ವಿಮಾನ ನಿಲ್ದಾಣದ ಸೇವೆ ಅತ್ಯುತ್ತಮವಾಗಿದೆ ಎಂದು ಸಮೀಕ್ಷೆಯಲ್ಲಿ ಬೆಳಕಿಗೆ ಬಂದಿದೆ.

ಬೆಂಗಳೂರು ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್ (ಬಿಐಎಎಲ್) ಸಿಇಒ ಹರಿ ಮರಾರ್ ಮಾತನಾಡಿ, ಈ ಪ್ರಶಸ್ತಿ ಲಭಿಸಿದ್ದು ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುವ ನಮ್ಮೆಲ್ಲರಿಗೂ ಸಂತಸ ತಂದಿದೆ. ಇಲ್ಲಿನ ಸಿಬ್ಬಂದಿಯ ಕಾರ್ಯಕ್ಷಮತೆಯಿಂದ ಈ ಪ್ರಶಸ್ತಿ ಲಭಿಸಿದೆ. ಈ ಪ್ರಶಸ್ತಿಗೆ ಮತ ಹಾಕಿದ ಎಲ್ಲಾ ಪ್ರಯಾಣಿಕರಿಗೂ ಅಭಿನಂದನೆ ತಿಳಿಸಿದ್ದಾರೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಒಂದೇ ವರ್ಷದಲ್ಲಿ ಮೂರು ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಏರ್‌ಪೋರ್ಟ್​ ಕೌನ್ಸಿಲ್ ಇಂಟರ್‌ನ್ಯಾಷನಲ್ (ಎಸಿಐ)ನಿಂದ ವಿಶ್ವದ “ವಾಯ್ಸ್ ಆಫ್ ದಿ ಕಸ್ಟಮರ್” ಮಾನ್ಯತೆ ಮತ್ತು ಎಸಿಐ ಏರ್‌ಪೋರ್ಟ್ 'ಸರ್ವೀಸ್ ಕ್ವಾಲಿಟಿ ಅವಾರ್ಡ್' ಲಭಿಸಿತ್ತು. ಅಲ್ಲದೆ, ರೋಲ್ ಆಫ್ ಎಕ್ಸ್ ಲೆನ್ಸ್ ಫಾರ್ ದಿ ಇಯರ್ ಪ್ರಶಸ್ತಿಯನ್ನೂ ಪಡೆದಿದೆ.

ಓದಿ:ನನ್ನ ತಾಯಿಗೂ ಮಾರಕ ಕ್ಯಾನ್ಸರ್ ಇತ್ತು.. ಆದರೆ, ಆಗ ಟೆಕ್ನಾಲಜಿ ಇರಲಿಲ್ಲ.. ಸಿಎಂ ಬಸವರಾಜ ಬೊಮ್ಮಾಯಿ

For All Latest Updates

TAGGED:

ABOUT THE AUTHOR

...view details