ಕರ್ನಾಟಕ

karnataka

ETV Bharat / state

ಫುಡ್​ ಡೆಲಿವರಿ ಸೋಗಿನಲ್ಲಿ ಡ್ರಗ್ಸ್ ಸರಬರಾಜು.. ಆರ್ಡರ್​ಗೆ ವಾಟ್ಸ್​ಆ್ಯಪ್​ ಸ್ಮೈಲಿ ಕೋಡ್ ವರ್ಡ್.. - Another arrest in Govindapur Drugs case latest news

ಡ್ರಗ್ಸ್​ ಸರಬರಾಜು ಮಾಡಲು ಯಾರಿಗೂ ತಿಳಿಯಬಾರದೆಂಬ ಉದ್ದೇಶಕ್ಕೆ ಇವರು, ವಾಟ್ಸ್​ಆ್ಯಪ್​ನಲ್ಲಿ ಸ್ಮೈಲಿಗಳನ್ನು ಕೋಡ್​ವರ್ಡ್​ಗಳಾಗಿ ಬಳಸಿಕೊಳ್ಳುತ್ತಿದ್ದರು. ಹೀಗೆ ಡ್ರಗ್ಸ್ ಬೇಕಿರುವವರು ಈತನಿಗೆ ವಾಟ್ಸ್​ಆ್ಯಪ್​ನಲ್ಲಿ ಸ್ಮೈಲಿ ಕಳುಹಿಸಿದರೆ ಅವರರಿಗೆ ಮಾದಕ ವಸ್ತುಗಳನ್ನು ಡೆಲಿವರಿ ಮಾಡುತ್ತಿದ್ದ..

Another arrest in Govindapur Drugs case
ಫುಡ್​ ಡೆಲಿವರಿ ಸೋಗಿನಲ್ಲಿ ಡ್ರಗ್ಸ್ ಸರಬರಾಜು

By

Published : Sep 3, 2021, 3:21 PM IST

ಬೆಂಗಳೂರು :ನೈಜೀರಿಯಾ ಪ್ರಜೆಯೊಂದಿಗೆ ನಿಕಟ ಸಂಪರ್ಕ ಹೊಂದಿದ ಆರೋಪ ಪ್ರಕರಣದಲ್ಲಿ ಇತ್ತೀಚೆಗಷ್ಟೆ ರೂಪದರ್ಶಿ ಸೇರಿ ಇಬ್ಬರನ್ನು ಬಂಧಿಸಲಾಗಿತ್ತು. ಬಂಧಿತರು ನೀಡಿದ್ದ ಸುಳಿವಿನ ಮೇರೆಗೆ ಮತ್ತೋರ್ವ ಆರೋಪಿಯನ್ನು ಗೋವಿಂದಪುರ ಪೊಲೀಸರು ಇಂದು ಬಂಧಿಸಿದ್ದಾರೆ.

ಫುಡ್​ ಡೆಲಿವರಿ ಸೋಗಿನಲ್ಲಿ ಡ್ರಗ್ಸ್ ಸರಬರಾಜು

ಬಂಧಿತರಿಂದ ಸಿಕ್ಕ ಸುಳಿವು :ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿರುವ ಆರೋಪದಡಿ ಇತ್ತೀಚೆಗೆ ಮೂವರ ಮನೆಗಳ ಮೇಲೆ ದಾಳಿ ನಡೆಸಿ ರೂಪದರ್ಶಿ ಸೋನಿಯಾ ಅಗರವಾಲ್, ಈಕೆಯ ಸ್ನೇಹಿತ ದಿಲೀಪ್ ಎಂಬುವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿತ್ತು.

ಈ ವೇಳೆ ಸಿಕ್ಕ ಸುಳಿವಿನ ಆಧಾರದ ಮೇಲೆ ಇಂದು ಬಿಟಿಎಂ ಲೇಔಟ್​ನಲ್ಲಿ ವಾಸವಾಗಿದ್ದ ಖಾದರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ಈತನ ಬಳಿ ದೊರೆತ ಎಕ್ಸ್​ಟೆನ್ಸಿ ಮಾತ್ರೆಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ‌.

ಫುಡ್​ ಡೆಲಿವರಿ ಸೋಗಿನಲ್ಲಿ ಡ್ರಗ್ಸ್ ಸರಬರಾಜು :ಕಾಸ್ಮೆಟಿಕ್ ವ್ಯವಹಾರ ನಡೆಸುತ್ತಿದ್ದ ರೂಪದರ್ಶಿ ಸೋನಿಯಾ ಮತ್ತು ಈಕೆಯ ಗೆಳೆಯ ದಿಲೀಪ್ ಎಂಬುವರು ಕೇರಳ ಮೂಲದ ಅಬ್ದುಲ್‌ ಖಾದರ್​ನಿಂದ ಡ್ರಗ್ಸ್ ತರಿಸಿಕೊಳ್ಳುತ್ತಿದ್ದರು. ಯಾರಿಗೂ ಅನುಮಾನ ಬರದಿರಲು ಖಾದರ್, ಡೆನ್ಜೋ ಫುಡ್​ ಡೆಲಿವರಿ ಮಾಡುವ ಸೋಗಿನಲ್ಲಿ‌ ಡ್ರಗ್ಸ್ ಸರಬರಾಜು ಮಾಡುತ್ತಿದ್ದ.

ಡ್ರಗ್ಸ್​ ಆರ್ಡರ್​ಗೆ ವಾಟ್ಸ್​ಆ್ಯಪ್​ ಸ್ಮೈಲಿ ಬಳಕೆ :ಡ್ರಗ್ಸ್​ ಸರಬರಾಜು ಮಾಡಲು ಯಾರಿಗೂ ತಿಳಿಯಬಾರದೆಂಬ ಉದ್ದೇಶಕ್ಕೆ ಇವರು, ವಾಟ್ಸ್​ಆ್ಯಪ್​ನಲ್ಲಿ ಸ್ಮೈಲಿಗಳನ್ನು ಕೋಡ್​ವರ್ಡ್​ಗಳಾಗಿ ಬಳಸಿಕೊಳ್ಳುತ್ತಿದ್ದರು. ಹೀಗೆ ಡ್ರಗ್ಸ್ ಬೇಕಿರುವವರು ಈತನಿಗೆ ವಾಟ್ಸ್​ಆ್ಯಪ್​ನಲ್ಲಿ ಸ್ಮೈಲಿ ಕಳುಹಿಸಿದರೆ ಅವರರಿಗೆ ಮಾದಕ ವಸ್ತುಗಳನ್ನು ಡೆಲಿವರಿ ಮಾಡುತ್ತಿದ್ದ.

ಶರ್ಟ್, ಪ್ಯಾಂಟ್​ಗಳಲ್ಲಿ ಮಾದಕವಸ್ತು ಸಾಗಾಟ :ಜೊತೆಗೆ ಬಟ್ಟೆ ಅಂಗಡಿಗಳಿಗೆ ಹೋಗಿ ಕಡಿಮೆ ದರದಲ್ಲಿ ಶರ್ಟ್ ಮತ್ತು ಪ್ಯಾಂಟ್ ಖರೀದಿಸಿ ಇದನ್ನು ಸಾಗಾಟ ಮಾಡುವ ಸೋಗಿನಲ್ಲಿ ಶರ್ಟ್​ನ ತೋಳಿನ ಭಾಗ, ಪ್ಯಾಂಟ್​ನ ಕಾಲಿನ ಭಾಗದಲ್ಲಿ ಡ್ರಗ್ಸ್ ಇಟ್ಟು ಕಳುಹಿಸುತ್ತಿದ್ದ.

High end ಪಾರ್ಟಿಗಳಲ್ಲಿ ಡ್ರಗ್ಸ್ ಸರಬರಾಜು :ಖಾದರ್, ಅಪರಿಚಿತರಿಂದ ಡ್ರಗ್ಸ್ ಖರೀದಿಸಿ High end ಪಾರ್ಟಿಗಳಲ್ಲಿ ಸರಬರಾಜು ಮಾಡುತ್ತಿದ್ದ ಎಂದು ನಗರ ಪೂರ್ವ ವಿಭಾಗದ ಡಿಸಿಪಿ‌ ಶರಣಪ್ಪ ತಿಳಿಸಿದ್ದಾರೆ.

ಓದಿ:ಡ್ರಗ್ಸ್ ದಂಧೆಕೋರರ ಜೊತೆ ಸಂಪರ್ಕ ಆರೋಪ: ರೂಪದರ್ಶಿ ಸೇರಿ ಇಬ್ಬರು ಅರೆಸ್ಟ್

ABOUT THE AUTHOR

...view details