ಕರ್ನಾಟಕ

karnataka

ETV Bharat / state

ಪೀಣ್ಯ ಫ್ಲೈ ಓವರ್​ನಲ್ಲಿ ಭಾರೀ ವಾಹನಗಳ ಸಂಚಾರ ಇನ್ನೂ 6 ತಿಂಗಳು ವಿಳಂಬ..! - ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮಂಡಳಿ ಸಭೆ

ಫ್ಲೈ ಓವರ್ ಸದೃಢತೆ ಹಾಗೂ ವಾಹನ ಸಂಚಾರ ಕುರಿತು ತೀರ್ಮಾನ ಕೈಗೊಳ್ಳಲು ನೇಮಿಸಿರುವ ಪರಿಣಿತರ ಸಮಿತಿ ಸದಸ್ಯರು ಪಾಲ್ಗೊಂಡಿದ್ದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮಂಡಳಿ ಸಭೆಯಲ್ಲಿ ಭಾರೀ ವಾಹನಗಳ ಸಂಚಾರ ಬಗ್ಗೆ ಚರ್ಚೆ ನಡೆದಿದೆ.

movement of heavy vehicles in Peenya Flyover
ಪೀಣ್ಯ ಫ್ಲೈ ಓವರ್​ನಲ್ಲಿ ಭಾರೀ ವಾಹನಗಳ ಸಂಚಾರ

By

Published : Jul 26, 2023, 11:04 PM IST

ಬೆಂಗಳೂರು: ನಗರವನ್ನು ಹಲವು ಜಿಲ್ಲೆಗಳೊಂದಿಗೆ ಬೆಸೆಯುವ ಪೀಣ್ಯ ಫ್ಲೈ ಓವರ್​ನಲ್ಲಿ (ಡಾ ಶಿವಕುಮಾರ ಸ್ವಾಮೀಜಿ ಮೇಲ್ಸೇತುವೆ) ಕೇಬಲ್ ಅಳವಡಿಕೆ ಕಾರ್ಯ ಆರಂಭವಾಗಿದ್ದು, ಭಾರೀ ವಾಹನಗಳ ಸಂಚಾರ ಇನ್ನೂ 6 ತಿಂಗಳು ವಿಳಂಬವಾಗಲಿದೆ ಎಂದು ತಿಳಿದು ಬಂದಿದೆ. ರಾಜ್ಯದ ಅರ್ಧ ಜಿಲ್ಲೆಗಳು, ಹೊರ ರಾಜ್ಯಗಳಿಗೆ ಇದೇ ಫ್ಲೈಓವರ್ ಮೂಲಕವಾಗಿಯೇ ಭಾರೀ ಗಾತ್ರದ ವಾಹನಗಳು ಸಂಚರಿಸಬೇಕು. ಆದರೆ ಪೀಕ್ ಅವರ್​ನಲ್ಲಿ ಸಂಚಾರಕ್ಕೆ ನಿರ್ಬಂಧ ಇರುವುದರಿಂದ ಗಾತ್ರದ ವಾಹನ ಸವಾರರು ನಿತ್ಯ ಪರದಾಡುತ್ತಿದ್ದು, ಈ ಪರದಾಟ ಮುಂದಿನ ವರ್ಷದ ತನಕವೂ ಮುಂದುವರೆಯುವ ಸಾಧ್ಯತೆಯಿದೆ.

ಕಾಮಗಾರಿ ಡಿಸೆಂಬರ್ ಕೊನೆಯವರೆಗೆ ಮುಂದುವರೆಯಲಿದ್ದು, ಆನಂತರ ಪರೀಕ್ಷಾರ್ಥ ಸಂಚಾರ ನಡೆಸಿ ಬಳಿಕವೇ ಬಸ್, ಟ್ರಕ್ ಇನ್ನಿತರ ಭಾರೀ ವಾಹನಗಳ ಸಂಚಾರಕ್ಕೆ ಅವಕಾಶ ಸಿಗಲಿದೆ. ಇದರಿಂದ ಮುಂದಿನ ವರ್ಷದ ಜನವರಿಯಲ್ಲಿ ಭಾರೀ ವಾಹನಗಳ ಸಂಚಾರ ಆರಂಭಗೊಳ್ಳುವ ಸೂಚನೆ ಇದೆ. ಫ್ಲೈ ಓವರ್ ಸದೃಢತೆ ಹಾಗೂ ವಾಹನ ಸಂಚಾರ ಕುರಿತು ತೀರ್ಮಾನ ಕೈಗೊಳ್ಳಲು ನೇಮಿಸಿರುವ ಪರಿಣಿತರ ಸಮಿತಿ ಸದಸ್ಯರು ಪಾಲ್ಗೊಂಡಿದ್ದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮಂಡಳಿ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿದೆ.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್​ನ ತಾಂತ್ರಿಕ ತಜ್ಞರ ತಂಡದ ಶಿಫಾರಸ್ಸಿನ ಮೇರೆಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಫ್ಲೈಓವರ್ ವ್ಯಾಪ್ತಿಯಲ್ಲಿರುವ ಹಳೆಯ ಕೇಬಲ್‌ಗಳನ್ನು ಹೊಸ ಪ್ರಿಸ್ಟ್ರೇಸ್ಡ್ ಕೇಬಲ್‌ಗಳೊಂದಿಗೆ ಬದಲಾಯಿಸಲು ಪ್ರಾರಂಭಿಸಿದೆ. ಬೆಂಗಳೂರು- ತುಮಕೂರು ಫ್ಲೈಓವರ್ ಭಾರೀ ಗಾತ್ರದ ವಾಹನಗಳಿಗೆ ಮುಂದಿನ ವರ್ಷ ಮುಕ್ತವಾಗಲಿದೆ. ಕೇಬಲ್ ಅಳವಡಿಕೆ ಕಾರ್ಯ ಆರಂಭ ಆಗಿದ್ದು, ಪೂರ್ಣಗೊಳ್ಳಲು ಇನ್ನೂ ಐದಾರು ತಿಂಗಳು ಬೇಕಾಗಬಹುದು. ಭಾರೀ ವಾಹನಗಳ ಓಡಾಟಕ್ಕೆ ಪ್ರವೇಶ ನಿರ್ಬಂಧ ಮುಂದುವರಿಯಲಿದ್ದು, ಮುಂದಿನ ವರ್ಷ ಜನವರಿಗೆ ಮುಕ್ತವಾಗುವ ಸಾಧ್ಯತೆಗಳಿವೆ ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.

ಕಾಮಗಾರಿ ಮುಗಿಯಲು ಇನ್ನೂ 5-6 ತಿಂಗಳು ಬೇಕಾಗಬಹುದು. 4 ಕಿ.ಮೀ ಉದ್ದದ ಮೇಲ್ಸೇತುವೆಯ ಉದ್ದಕ್ಕೂ ಹಳೆಯ ಕೇಬಲ್‌ಗಳು ಮತ್ತು ಅದಕ್ಕೆ ಸಂಬಂಧಿಸಿದ ಕಾಮಗಾರಿಗಳನ್ನು ಮುಗಿಸಲು 30 ಕೋಟಿ ವೆಚ್ಚ ತಗುಲಬಹುದು. ಕೇಬಲ್ ಅಳವಡಿಕೆ ಕಾರ್ಯ ಕಳೆದ 4-5 ತಿಂಗಳಿನಿಂದ ನಡೆಯುತ್ತಿದೆ. ಹಳೆಯ ಕೇಬಲ್‌ಗಳ ಬದಲಾಗಿ ಅತ್ಯಾಧುನಿಕ ಕೇಬಲ್ ಅಳವಡಿಕೆ ಕಾರ್ಯ ನಡೆಯುತ್ತಿದೆ ಎಂದಿದ್ದಾರೆ.

ಹಿನ್ನೆಲೆ:ಈ ಮೇಲ್ಸೇತುವೆಯ 102 ಮತ್ತು 103ನೇ ಕಂಬಗಳ ನಡುವೆ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಈ ಮೇಲ್ಸೇತುವೆ ಮೇಲೆ ವಾಹನ ಸಂಚಾರವನ್ನು ನಿರ್ಭಂಧಿಸಲಾಗಿತ್ತು. ಒಂದು ಕಂಬದಿಂದ ಇನ್ನೊಂದು ಕಂಬದ ನಡುವೆ ಜೋಡಿಸುವ ಸೆಗ್ಮೆಂಟ್‌ನಲ್ಲಿ ರಂಧ್ರ ಕೊರೆದು ಕೇಬಲ್ ತೂರಿಸಿ ಎಳೆದು ಬೋಲ್ಟ್ ಹಾಕಲಾಗಿತ್ತು. ಕೇಬಲ್‌ಗಳನ್ನು ಎಳೆದು ಕಟ್ಟಿದ ಜಾಗವನ್ನು ಕಾಂಕ್ರೀಟ್‌ನಿಂದ ತುಂಬಿ ಗಟ್ಟಿಗೊಳಿಸಲಾಗಿತ್ತು.

ಇದನ್ನೂ ಓದಿ:ಟ್ರಾಫಿಕ್ ಸಮಸ್ಯೆ, ರಸ್ತೆ ಅಪಘಾತಗಳ ಬಗ್ಗೆ ನಿತಿನ್ ಗಡ್ಕರಿ ವಿರುದ್ಧ ವಾಗ್ದಾಳಿ ನಡೆಸಿದ ರಾಜ್ ಠಾಕ್ರೆ

ABOUT THE AUTHOR

...view details