ಕರ್ನಾಟಕ

karnataka

ETV Bharat / state

ಉದ್ಯೋಗಾಕಾಂಕ್ಷಿಗಳಿಗೆ ಕಹಿ ಸುದ್ದಿ: ವಾರ್ಷಿಕ ಪೊಲೀಸ್ ನೇಮಕಾತಿ ರದ್ದು - Bangalore Lockdown

ಕೊರೊನಾ ಕಂಟಕ ಮುಗಿಯುತ್ತಿದ್ದಂತೆ ಪೊಲೀಸ್​ ನೇಮಕಾತಿಯಲ್ಲಿ ಉದ್ಯೋಗ ಗಿಟ್ಟಿಸುವ ಆಸೆಯಲ್ಲಿದ್ದ ಅಭ್ಯರ್ಥಿಗಳಿಗೆ ನಿರಾಸೆಯಾಗಿದೆ. ಏಕೆಂದರೆ, ಪೊಲೀಸ್ ನೇಮಕಾತಿ ರದ್ದು ಮಾಡಿ ಆದೇಶ ಹೊರಡಿಸಲಾಗಿದೆ. ಆರ್ಥಿಕ ಪರಿಸ್ಥಿತಿಯ ಕಾರಣದಿಂದಾಗಿ ಈ ಕ್ರಮಕ್ಕೆ ಬರಲಾಗಿದೆ.

Annual police recruitment canceled for economic crisis in state
ಪೊಲೀಸ್ ಉದ್ಯೋಗಾಂಕ್ಷಿಗಳಿಗೆ ಕಹಿ ಸುದ್ದಿ: ವಾರ್ಷಿಕ ಪೊಲೀಸ್ ನೇಮಕಾತಿ ರದ್ದು

By

Published : Jul 23, 2020, 8:33 PM IST

Updated : Jul 23, 2020, 9:48 PM IST

ಬೆಂಗಳೂರು: ಸಿಬ್ಬಂದಿ‌‌ ಕೊರತೆ ನಡುವೆಯೂ ಪೊಲೀಸ್ ಇಲಾಖೆಗೆ ಹೊಸದಾಗಿ ಈ ವರ್ಷ ನೇಮಕಾತಿಯಾಗಬೇಕಿದ್ದ 6 ಸಾವಿರ ಪೊಲೀಸ್ ಆಕಾಂಕ್ಷಿಗಳಿಗೆ ಕೊರೊನಾ ವೈರಸ್ ಬರೆ ಎಳೆದಿದೆ.

ಆರ್ಥಿಕ ಸಂಪನ್ಮೂಲ ಕ್ರೋಡೀಕರಣಕ್ಕಾಗಿ ಈ ವರ್ಷ ನಡೆಸಬೇಕಿದ್ದ ಪೊಲೀಸ್ ನೇಮಕಾತಿ ರದ್ದುಗೊಳಿಸುವಂತೆ ರಾಜ್ಯ ಸರ್ಕಾರ ಆದೇಶಿಸಿದೆ. ಇದರಿಂದ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಲು ಹಾತೊರೆಯುತ್ತಿದ್ದ 6 ಸಾವಿರ ಉದ್ಯೋಗಾಕಾಂಕ್ಷಿಗಳಿಗೆ ತೀವ್ರ ನಿರಾಸೆ‌ ಮೂಡಿಸಿದೆ.

ಕೊರೊನಾ ಹಿನ್ನೆಲೆ ಲಾಕ್​ಡೌನ್ ಜಾರಿಯಾದ ಪರಿಣಾಮ ರಾಜ್ಯದ ಬೊಕ್ಕಸ ಬರಿದಾಗಿದೆ. ಮುಂದಿನ ದಿನಗಳಲ್ಲಿ ಆರ್ಥಿಕ ಸ್ಥಿತಿಯನ್ನು ಸುಸ್ಥಿತಿಗೆ ತರುವ ನಿಟ್ಟಿನಲ್ಲಿ‌ ಸಂಪನ್ಮೂಲ ಕ್ರೋಡೀಕರಿಸುವುದು ಅಗತ್ಯವಾಗಿದೆ.

ಹೀಗಾಗಿ 2020-21ರಲ್ಲಿ‌ ನಡೆಯಬೇಕಿದ್ದ ಪೊಲೀಸ್ ಸಿಬ್ಬಂದಿ, ಎಲ್ಲಾ ವೃಂಧದ ಹುದ್ದೆ ಹಾಗೂ ಬ್ಯಾಗ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳದಂತೆ ಆರ್ಥಿಕ ಇಲಾಖೆಯು ಆದೇಶ ಹೊರಡಿಸಿದೆ.‌ ಸದ್ಯ ರಾಜ್ಯದಲ್ಲಿ 1.08 ಲಕ್ಷ ಪೊಲೀಸ್‌ ಮಂಜೂರಾತಿ ಹುದ್ದೆಗಳ ಪೈಕಿ ಸುಮಾರು 85 ಸಾವಿರ ಪೊಲೀಸರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ.

ಈ ಪೈಕಿ 23 ಸಾವಿರ ಹುದ್ದೆಗಳು ಭರ್ತಿಯಾಗದ ಖಾಲಿ‌ ಉಳಿದಿವೆ. ಈ ನಿಟ್ಟಿನಲ್ಲಿ ಸಿವಿಲ್ ಪೊಲೀಸ್ ಹುದ್ದೆ, ಕರ್ನಾಟಕ ರಾಜ್ಯ ಪೊಲೀಸ್ ಮೀಸಲು ಪಡೆ (ಕೆಎಸ್ ಆರ್​​ಪಿ) ರಾಜ್ಯ ಕೈಗಾರಿಕಾ‌ ಭದ್ರತಾ ಪಡೆ (ಕೆಎಸ್​​ಐಎಸ್​​​ಎಫ್) ನಗರ ಸಶಸ್ತ್ರ ಮೀಸಲು ಪಡೆ (ಸಿಎಆರ್) ಸೇರಿದಂತೆ ಎಲ್ಲಾ ವಿಭಾಗದ 6 ಸಾವಿರ ಪುರುಷ ಹಾಗೂ‌ ಮಹಿಳಾ ಪೊಲೀಸ್ ಕಾನ್ಸ್​ಟೇಬಲ್​​ ಹುದ್ದೆಗಳಿಗೆ ನೇಮಕಾತಿ‌ ನಡೆಸಲು‌ ಸಿದ್ಧತೆ ಮಾಡಿಕೊಂಡಿತ್ತು.

ಅಲ್ಲದೆ ನೇಮಕಾತಿ‌ ಕುರಿತಂತೆ ಪೊಲೀಸ್ ಇಲಾಖೆಯು ಈ ಹಿಂದೆ ನೋಟಿಫಿಕೇಷನ್ ಹೊರಡಿಸಿತ್ತು. ಇದರಂತೆ ಸಾವಿರಾರು ಉದ್ಯೋಗಾಂಕ್ಷಿಗಳು ಅರ್ಜಿ ಸಲ್ಲಿಸಿದ್ದರು. ಕೊರೊನಾ ಹೆಮ್ಮಾರಿಯು ಇವರ ಆಕಾಂಕ್ಷೆಗಳಿಗೆ ಬ್ರೇಕ್ ಹಾಕಿದೆ. ಪೊಲೀಸ್ ಇಲಾಖೆಯಲ್ಲಿ ಪ್ರತಿ ತಿಂಗಳು ಸುಮಾರು 300 ಮಂದಿ‌‌ ಪೊಲೀಸ್ ಸಿಬ್ಬಂದಿ‌ ನಿವೃತ್ತರಾಗುತ್ತಿದ್ದಾರೆ.

ವರ್ಷಕ್ಕೆ ಅಂದಾಜು 3ರಿಂದ 4 ಸಾವಿರ ಪೊಲೀಸರು ನಿವೃತ್ತರಾಗುತ್ತಾರೆ. ನಿವೃತ್ತಿಯಾಗುವ ಪೊಲೀಸರಿಗಿಂತ ಹೊಸದಾಗಿ ಪೊಲೀಸ್ ನೇಮಕಾತಿ ಪ್ರಮಾಣ ಕಡಿಮೆಯಿದೆ. ಹೀಗಾಗಿ ವರ್ಷಕ್ಕೆ‌ ಕನಿಷ್ಠ 6 ಸಾವಿರ ಹುದ್ದೆಗಳು ನೇಮಕಾತಿಯಾಗುವಂತೆ‌ ನೋಡಿಕೊಳ್ಳಬೇಕು. ಇದರಿಂದ ಕೆಲವೇ ವರ್ಷಗಳಲ್ಲಿ‌‌ ಖಾಲಿಯಿರುವ 23 ಸಾವಿರ ಪೋಸ್ಟ್​​ಗಳನ್ನು ತುಂಬಲು ಸಾಧ್ಯವಾಗಲಿದೆ.

ದೈಹಿಕ‌ ಹಾಗೂ ಲಿಖಿತ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿರುವ ನೇಮಕಾತಿಯಾಗಿ ಪೊಲೀಸ್ ತರಭೇತಿ‌ ಪಡೆಯುತ್ತಿರುವ ಪೊಲೀಸರಿಗೆ ಈ ಆದೇಶ ಅನ್ವಯವಾಗುವುದಿಲ್ಲ ಎಂದು ಐಪಿಎಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Last Updated : Jul 23, 2020, 9:48 PM IST

ABOUT THE AUTHOR

...view details