ಬೆಂಗಳೂರು: ಕೊರೊನಾ ಫೀವರ್ ನಡುವೆಯೇ ಬಹು ನಿರೀಕ್ಷಿತದ್ವಿತೀಯ ಪಿಯು ಫಲಿತಾಂಶ ಇಂದು ಪ್ರಕಟವಾಗಿದೆ. ಭವಿಷ್ಯದ ಕನಸು ಕಾಣುತ್ತಿದ್ದವರಿಗೆ ಫಲಿತಾಂಶ ಕೈಸೇರಿದೆ.
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಈ ಬಾರಿಯೂ ವಿದ್ಯಾರ್ಥಿನಿಯರು ತಮ್ಮ ದಾಖಲೆಯನ್ನು ಬಿಟ್ಟುಕೊಡದೇ, ಮೇಲುಗೈ ಸಾಧಿಸಿದ್ದಾರೆ. ಕಳೆದ ವರ್ಷ ಮೊದಲ ಸ್ಥಾನವನ್ನ ಉಡುಪಿ, ಕೊನೆಯ ಸ್ಥಾನವನ್ನ ಚಿತ್ರದುರ್ಗ ಪಡೆದಿತ್ತು. ಈ ವರ್ಷವೂ ಉಡುಪಿ ಮೊದಲ ಸ್ಥಾನ ಕಾಯ್ದುಕೊಂಡಿದ್ದರೆ, ಕೊನೆಯ ಸ್ಥಾನ ವಿಜಯಪುರ ಜಿಲ್ಲೆ ಪಾಲಾಗಿದೆ.
ಮಲ್ಲೇಶ್ವರಂನಲ್ಲಿರುವ ಪಿಯು ಬೋರ್ಡ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಫಲಿತಾಂಶವನ್ನು ಪ್ರಕಟಿಸಿದರು. ಪಿಯು ವೆಬ್ಸೈಟ್ನಲ್ಲಿ http://www.pue.kar.nic.in, http://www.karresults.nic.inನಲ್ಲಿ ಮಧ್ಯಾಹ್ನ 12ಗಂಟೆ ನಂತರ ಫಲಿತಾಂಶ ಲಭ್ಯವಾಗುತ್ತಿದೆ. ವಿದ್ಯಾರ್ಥಿಗಳು ತಮ್ಮ ಹಾಲ್ ಟಿಕೆಟ್ ನಂಬರ್ನ್ನು ಹಾಕಿ ಫಲಿತಾಂಶವನ್ನು ನೋಡಬಹುದು. ಈ ಬಾರಿ ಮಕ್ಕಳ ಮೊಬೈಲ್ಗೆ ನೇರವಾಗಿ ಎಸ್ ಎಂಎಸ್ ಬರುವಂತೆ ಮಾಡಿದ್ದು, ವಿದ್ಯಾರ್ಥಿಗಳು ಕಾಲೇಜಿಗೆ ಬರುವ ಅವಶ್ಯಕತೆ ಇಲ್ಲವೆಂದು ಸಚಿವರು ಹೇಳಿದ್ದಾರೆ.
ಈ ಬಾರಿ ಒಟ್ಟು 6,75, 277 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು, ಹೊಸಬರು 5,56,267 ವಿದ್ಯಾರ್ಥಿಗಳ ಪೈಕಿ 3,94,947 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಮಾರ್ಚ್ 4 ರಿಂದ 21 ರವರೆಗೆ ಹಾಗೂ ಕೊನೆಯ ಇಂಗ್ಲಿಷ್ ಪರೀಕ್ಷೆ ಜೂನ್ 18 ರಂದು ನಡೆದಿತ್ತು. 1600 ಪರೀಕ್ಷಾ ಕೇಂದ್ರಗಳಲ್ಲಿ ಇಂಗ್ಲಿಷ್ ಎಕ್ಸಾಂ ನಡೆದಿತ್ತು. 70 ಮೌಲ್ಯಮಾಪನ ಕೇಂದ್ರಗಳಲ್ಲಿ ಮೇ 16 ರಿಂದ 9 ಜುಲೈ ವರೆಗೆ ಮೌಲ್ಯಮಾಪನ ಕಾರ್ಯ ನಡೆದಿತ್ತು. 11,970 ಮೌಲ್ಯಮಾಪನಕರು ಪಾಲ್ಗೊಂಡಿದ್ದರು.
ಕಳೆದ ವರ್ಷ (2018-2019) ಒಟ್ಟಾರೆ ಶೇ 61.73 ಫಲಿತಾಂಶ ಬಂದಿತ್ತು. ಈ ವರ್ಷ 61.80 ರಷ್ಟು ಫಲಿತಾಂಶ ಬಂದಿದೆ. ಶೇ.68.24 ರಷ್ಟು ಬಾಲಕಿಯರು ಉತ್ತೀರ್ಣರಾದರೆ, ಶೇ. 55.29 ಬಾಲಕರು ಪಾಸ್ ಆಗಿದ್ದಾರೆ.
ಈ ಬಾರಿಯ ದ್ವಿತೀಯ ಪಿಯು ಫಲಿತಾಂಶದಲ್ಲಿ ಹೈಲೈಟ್ಸ್ ನೋಡೋದಾದ್ರೆ...
2020 ನೇ ಸಾಲಿನ ದ್ವಿತೀಯ ಪಿಯು ಫಲಿತಾಂಶ...