ಕರ್ನಾಟಕ

karnataka

ETV Bharat / state

ಡಿಸಿಪಿ ಇಶಾ ಪಂತ್‌ 'ಜೊತೆ ಜೊತೆಯಲಿ' ಹಾಡಿಗೆ ಅಣ್ಣಾಮಲೈ'ಶಹಬ್ಬಾಸ್'​ಗಿರಿ.. - ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ

ಹಲವು ವರ್ಷಗಳಿಂದ ಕರ್ನಾಟಕದಲ್ಲಿ ನೆಲೆ ಕಂಡು ಕೊಂಡಿದ್ದರೂ ಕನ್ನಡ ಮಾತನಾಡಲು ಹಿಂದೇಟು ಹಾಕುವವರಿದ್ದಾರೆ. ಆದರೆ, ಇಂತಹ ಜನರ ನಡುವೆ ಅನ್ಯ ರಾಜ್ಯದಿಂದ ಬಂದ ಈ ಐಪಿಎಸ್ ಅಧಿಕಾರಿ ಇಶಾ ಪಂತ್ ಅವರು‌ ಕೆಲವೇ ವರ್ಷಗಳಲ್ಲಿ ಕನ್ನಡ ಕಲಿತು, ಕನ್ನಡ ಹಾಡು ಹಾಡುವ ಮೂಲಕ‌‌ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Annamalai and DCP Isha Pant
ಅಣ್ಣಾಮಲೈ ಮತ್ತು ಡಿಸಿಪಿ ಇಶಾ ಪಂತ್‌

By

Published : Jan 20, 2020, 6:11 PM IST

Updated : Jan 20, 2020, 7:30 PM IST

ಬೆಂಗಳೂರು: ದಿ. ಶಂಕರ್‌‌ನಾಗ್ ಅಭಿನಯದ ಗೀತಾ ಚಿತ್ರದ ಸೂಪರ್ ಹಿಟ್ 'ಜೊತೆ ಜೊತೆಯಲಿ' ಹಾಡನ್ನು ಹಾಡುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ನಗರ ಆಗ್ನೇಯ ವಿಭಾಗದ ಡಿಸಿಪಿ ಇಶಾ ಪಂತ್ ಪಾತ್ರವಾಗಿದ್ದಾರೆ. ಅವರ ಮಧುರ ಧ್ವನಿಗೆ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಫಿದಾ ಆಗಿದ್ದಾರೆ. ನಿನ್ನೆಯಿಂದ ವೈರಲ್ ಆಗಿರುವ ಸಾಂಗ್ ಕುರಿತಂತೆ ಅಣ್ಣಾಮಲೈ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಅವರು ಏನೇ‌ ಮಾಡಿದರೂ ಚೆನ್ನಾಗಿ ಮಾಡುತ್ತಾರೆ. ನಮ್ಮ ಐಪಿಎಸ್ ಬ್ಯಾಚ್​​ನಲ್ಲಿ ಅವರು ಟಾಪರ್ ಆಗಿದ್ದರು ಎಂದು ಶಹಬಾಸ್​ಗಿರಿ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಇಶಾ ಪಂತ್ ಅವರು, ನಿಮ್ಮ ಹೊಗಳಿಕೆ ಅಪರಿಮಿತವಾದದ್ದು ಎಂದು ಹೇಳಿ ಧನ್ಯವಾದ ಅರ್ಪಿಸಿದ್ದಾರೆ.

ಹಲವು ವರ್ಷಗಳಿಂದ ಕರ್ನಾಟಕದಲ್ಲಿ ನೆಲೆ ಕಂಡು ಕೊಂಡಿದ್ದರೂ ಕನ್ನಡ ಮಾತನಾಡಲು ಹಿಂದೇಟು ಹಾಕುವವರಿದ್ದಾರೆ. ಆದರೆ, ಇಂತಹ ಜನರ ನಡುವೆ ಅನ್ಯ ರಾಜ್ಯದಿಂದ ಬಂದ ಈ ಐಪಿಎಸ್ ಅಧಿಕಾರಿ ಇಶಾ ಪಂತ್ ಅವರು‌ ಕೆಲವೇ ವರ್ಷಗಳಲ್ಲಿ ಕನ್ನಡ ಕಲಿತು, ಕನ್ನಡ ಹಾಡು ಹಾಡುವ ಮೂಲಕ‌‌ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Last Updated : Jan 20, 2020, 7:30 PM IST

ABOUT THE AUTHOR

...view details