ಬೆಂಗಳೂರು: ರಾಜ್ಯದ ಎಲ್ಲೆಡೆ ಪೌರತ್ವ ಕಿಚ್ಚು ದಿನೇ ದಿನೇ ಹೆಚ್ಚಾಗ್ತಿದೆ. ಇದರ ನಡುವೆ ಅಣ್ಣಾಮಲೈ ಅವರ ಹೇಳಿಕೆಯನ್ನು ತಿರುಚಿ, ರಾಜಕೀಯ ಬಣ್ಣ ಬಳಿಯಲಾಗಿದೆ. ಅಣ್ಣಾಮಲೈ ಅವರು ಖಾಸಗಿ ಕಾರ್ಯಕ್ರಮವೊಂದಕ್ಕೆ ತೆರಳಿದ್ದರು. ಈ ವೇಳೆ ಕಾರ್ಯಕ್ರಮದಲ್ಲಿದ್ದ ಒಬ್ಬ ವ್ಯಕ್ತಿ, ಸಿಎಎ ಹಾಗೂ ಎನ್ಆರ್ಸಿ ಬಗ್ಗೆ ಅಣ್ಣಾಮಲೈ ಅವರನ್ನು ಪ್ರಶ್ನೆ ಮಾಡಿದ್ದರು.
ಸಿಎಎ, ಎನ್ಆರ್ಸಿ ಕುರಿತ ನನ್ನ ಹೇಳಿಕೆ ತಿರುಚಲಾಗಿದೆ: ವೈರಲ್ ಆದ ಇಮೇಜ್ ಬಗ್ಗೆ ಬೇಸರ - ಅಣ್ಣಾಮಲೈ ಹೇಳಿಕೆಯನ್ನು ರಾಜಕೀಯವಾಗಿ ತಿರುಚಿದ ಕಿಡಿಗೇಡಿಗಳು
ರಾಜ್ಯದ ಎಲ್ಲೆಡೆ ಪೌರತ್ವ ಕಿಚ್ಚು ದಿನೇ ದಿನೇ ಹೆಚ್ಚಾಗ್ತಿದೆ. ಇದರ ನಡುವೆ ಅಣ್ಣಾಮಲೈ ಅವರ ಹೇಳಿಕೆಯನ್ನು ತಿರುಚಿ, ರಾಜಕೀಯ ಬಣ್ಣ ಬಳಿಯಲಾಗಿದೆ. ಅಣ್ಣಾಮಲೈ ಅವರು ಖಾಸಗಿ ಕಾರ್ಯಕ್ರಮವೊಂದಕ್ಕೆ ತೆರಳಿದ್ದರು. ಈ ವೇಳೆ ಕಾರ್ಯಕ್ರಮದಲ್ಲಿದ್ದ ಒಬ್ಬ ವ್ಯಕ್ತಿ, ಸಿಎಎ ಹಾಗೂ ಎನ್ಆರ್ಸಿ ಬಗ್ಗೆ ಅಣ್ಣಾಮಲೈ ಅವರನ್ನು ಪ್ರಶ್ನೆ ಮಾಡಿದ್ದರು.
![ಸಿಎಎ, ಎನ್ಆರ್ಸಿ ಕುರಿತ ನನ್ನ ಹೇಳಿಕೆ ತಿರುಚಲಾಗಿದೆ: ವೈರಲ್ ಆದ ಇಮೇಜ್ ಬಗ್ಗೆ ಬೇಸರ Annamalai Statement on CAA, NRC](https://etvbharatimages.akamaized.net/etvbharat/prod-images/768-512-5812583-thumbnail-3x2-sm.jpg)
ಸಿಎಎ, ಎನ್ಆರ್ಸಿ ಕುರಿತು ಅಣ್ಣಾಮಲೈ ಹೇಳಿಕೆ
ಈ ವೇಳೆ ಅಣ್ಣಾಮಲೈ ಸಿಎಎ ಹಾಗೂ ಎನ್ಆರ್ಸಿ ಕುರಿತು ಮಾತಾನಾಡಿದ್ದು, ಈ ಹೇಳಿಕೆಯನ್ನು ರಾಜಕೀಯವಾಗಿ ಬಳಸಿಕೊಂಡು ವೆಬ್ಪೋರ್ಟಲ್ವೊಂದು ಇಮೇಜ್ ಸೃಷ್ಟಿಸಿ ವೈರಲ್ ಮಾಡಿದೆ.
ಸಿಎಎ, ಎನ್ಆರ್ಸಿ ಕುರಿತು ಅಣ್ಣಾಮಲೈ ಹೇಳಿಕೆ
ಈ ಕುರಿತು ಅಣ್ಣಾಮಲೈ ಅವರು ಬೇಸರ ವ್ಯಕ್ತಪಡಿಸಿದ್ದು, ನಾನು ಹೇಳಿದ್ದೇ ಬೇರೆ ಇವರು ಅರ್ಥೈಸಿಕೊಂಡಿರುವ ರೀತಿಯೇ ಬೇರೆ. ನಾನು ಎಲ್ಲೂ ಇದರ ಬಗ್ಗೆ ರಾಜಕೀಯವಾಗಿ ಮಾತನಾಡಿಲ್ಲ. ಯಾಕೆ ಈ ರೀತಿ ಹಾಕಿದ್ದಾರೆ ಎಂದು ಗೊತ್ತಿಲ್ಲ ಎಂದು ತಿಳಿಸಿದ್ದಾರೆ.