ಬೆಂಗಳೂರು: ಮುಂಗಾರು ಅಧಿವೇಶನದ ಮೊದಲ ದಿನದ ಕಲಾಪ ಮುಗಿಸಿ ಹೊರಬಂದ ಜೆಡಿಎಸ್ ಶಾಸಕಿ ಅನಿತಾ ಕುಮಾರಸ್ವಾಮಿ, ಮೈತ್ರಿ ಸರ್ಕಾರ ಉಳಿಯುವ ವಿಶ್ವಾಸ ವ್ಯಕ್ತಪಡಿಸಿದ್ರು.
ಮೈತ್ರಿ ಸರ್ಕಾರ ಉಳಿಯುವ ವಿಶ್ವಾಸವಿದೆ.. ಜೆಡಿಎಸ್ ಶಾಸಕಿ ಅನಿತಾ ಕುಮಾರಸ್ವಾಮಿ - undefined
ಶಾಸಕರ ರಾಜೀನಾಮೆ ಸರಿಯಲ್ಲ. ಈ ಎಲ್ಲಾ ವಿದ್ಯಮಾನಗಳಿಂದ ರಾಜಕಾರಣಿಗಳ ಮೇಲೆ ಜನರಿಗೆ ಕೆಟ್ಟ ಭಾವನೆ ಮೂಡುತ್ತದೆ. ಚುನಾವಣೆಯಲ್ಲಿ ಗೆದ್ದ ಮೇಲೆ ಪಕ್ಷನಿಷ್ಠೆಯಿಂದ ಇರಬೇಕು ಎಂದು ಜೆಡಿಎಸ್ ಶಾಸಕಿ ಅನಿತಾ ಕುಮಾರಸ್ವಾಮಿ ಹೇಳಿದರು.
ಶಾಸಕರ ರಾಜೀನಾಮೆ ಸರಿಯಲ್ಲ. ರಾಜ್ಯ ರಾಜಕೀಯದ ಇತ್ತೀಚೆಗಿನ ವಿದ್ಯಮಾನಗಳಿಂದ ರಾಜಕಾರಣಿಗಳ ಮೇಲೆ ಕೆಟ್ಟ ಭಾವನೆ ಬರುತ್ತದೆ. ಚುನಾವಣೆಯಲ್ಲಿ ಗೆದ್ದ ಮೇಲೆ ಪಕ್ಷಕ್ಕೆ ನಿಷ್ಠೆಯಿಂದ ಇರಬೇಕು. ಸಮಸ್ಯೆಗಳಿವೆ ನಿಜ. ಆದರೆ, ಅವೇನೂ ಬಗೆಹರಿಸಲಾಗದವುಗಳಲ್ಲ ಎಂದರು.
ಸಾ.ರಾ ಮಹೇಶ್ ಹಿಂದೆ ಬಿಜೆಪಿಯಲ್ಲೇ ಇದ್ದವರು. ಅವರು ವೈಯಕ್ತಿಕವಾಗಿ ಬಿಜೆಪಿ ನಾಯಕರನ್ನ ಭೇಟಿಯಾಗಿರಬಹುದು. ಅವರ ಭೇಟಿಗೆ ರಾಜಕೀಯ ಬಣ್ಣ ಹಚ್ಚೋದು ಬೇಡ ಎಂದು ಸ್ಪಷ್ಟೀಕರಣ ನೀಡಿದರು. ಮುಂದಿನ ದಿನದಲ್ಲಿ ನಿಖಿಲ್ ಕುಮಾರಸ್ವಾಮಿ ಕೆಆರ್‌ಪೇಟೆಯಲ್ಲಿ ಚುನಾವಣೆಗೆ ಸ್ಪರ್ಧೆ ಮಾಡುತ್ತಾರಾ ಎಂಬುದಕ್ಕೆ ಉತ್ತರಿಸಿದ ಅನಿತಾ ಕುಮಾರಸ್ವಾಮಿ, ಅದು ಮುಂದಿನ ವಿಚಾರ. ಈಗ ಅದರ ಬಗ್ಗೆ ಮಾತನಾಡುವುದು ಬೇಡ ಎಂದಷ್ಟೇ ಹೇಳಿದರು.