ಆನೇಕಲ್: ರಾಷ್ಟ್ರೀಯ ಐಕ್ಯತಾ ದಿನದ ಅಂಗವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಆನೇಕಲ್ ಉಪವಿಭಾಗದ ಪೊಲೀಸರು ಐಕ್ಯತಾ ಓಟವನ್ನು ಆಯೋಜಿಸಿದ್ದರು. ಪೊಲೀಸ್ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಹೆದ್ದಾರಿಯಲ್ಲಿ ಓಡುವ ಮೂಲಕ ರಾಷ್ಟ್ರೀಯ ಐಕ್ಯತಾ ದಿನವನ್ನ ವಿಶೇಷವಾಗಿ ಆಚರಣೆ ಮಾಡಿದರು.
ರಾಷ್ಟ್ರೀಯ ಏಕತಾ ದಿನಾಚರಣೆ: ಆನೇಕಲ್ ಉಪವಿಭಾಗ ಪೊಲೀಸರಿಂದ ವಾಕಥಾನ್ - ಆನೇಕಲ್ ಉಪವಿಭಾಗ ಪೊಲೀಸರ ರಾಷ್ಟ್ರೀಯ ಐಕ್ಯತಾ ದಿನಾಚರಣೆ ಸುದ್ದಿ
ಆನೇಕಲ್ ಉಪವಿಭಾಗದ 7 ಠಾಣೆಗಳ 150 ಕ್ಕೂ ಹೆಚ್ಚು ಸಿಬ್ಬಂದಿಗಳು ಹಾಗೂ ನೂರಕ್ಕೂ ಹೆಚ್ಚು ವಿದ್ಯಾರ್ಥಿ , ವಿದ್ಯಾರ್ಥಿನಿಯರು ಐಕ್ಯತಾ ಓಟದಲ್ಲಿ ಭಾಗವಹಿಸಿ ಐಕ್ಯತಾ ಸಂದೇಶವನ್ನ ಸಾರಿದರು.
ಆನೇಕಲ್ ಉಪವಿಭಾಗದ 7 ಠಾಣೆಗಳ 150 ಕ್ಕೂ ಹೆಚ್ಚು ಸಿಬ್ಬಂದಿಗಳು ಹಾಗೂ ನೂರಕ್ಕೂ ಹೆಚ್ಚು ವಿದ್ಯಾರ್ಥಿ , ವಿದ್ಯಾರ್ಥಿನಿಯರು ಐಕ್ಯತಾ ಓಟದಲ್ಲಿ ಭಾಗವಹಿಸಿ ಐಕ್ಯತಾ ಸಂದೇಶವನ್ನ ಸಾರಿದರು. ಇದೇ ವೇಳೆ ಮಾತನಾಡಿದ ಆನೇಕಲ್ ಉಪ ವಿಭಾಗದ ಡಿವೈಎಸ್‍ಪಿ ನಂಜುಂಡ, ಅ.31ರಂದು ರಾಷ್ಟ್ರೀಯ ಐಕ್ಯತಾ ದಿನವನ್ನಾಗಿ ದೇಶಾದ್ಯಂತ ಆಚರಿಸಲಾಗುತ್ತಿದ್ದು ಐಕ್ಯತೆಯ ಮಂತ್ರವನ್ನ ಜಪಿಸುವ ಮೂಲಕ ನಾವೆಲ್ಲ ಒಂದೇ ಎನ್ನುವ ಸಂದೇಶವನ್ನ ಸಾರಲಾಗುತ್ತಿದೆ. ಅಲ್ಲದೆ ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯ್ ಪಟೇಲ್ ಜನುಮ ದಿನವಾಗಿದ್ದು ಅವರ ಸವಿನೆನಪಿನ ಅಂಗವಾಗಿ ಈ ಐಕ್ಯತಾ ದಿನದಂದು ಐಕ್ಯತಾ ಓಟವನ್ನ ಹಮ್ಮಿಕೊಳ್ಳುವ ಮೂಲಕ ಅರ್ಥಪೂರ್ಣವಾಗಿ ಆಚರಣೆ ಮಾಡಲಾಗಿದೆ ಎಂದರು.
ಓಟದಲ್ಲಿ ಭಾಗವಹಿಸಿ ಮಾತನಾಡಿದ ವಿದ್ಯಾರ್ಥಿ ಸುಜಿತ್ ದೇಶದ ಐಕ್ಯತೆಗಾಗಿ ಪೊಲೀಸರ ಜೊತೆಗೋಡಿ 4 ಕಿ.ಮೀ ಓಟದಲ್ಲಿ ಭಾಗವಹಿಸಿದ್ದು ನಿಜಕ್ಕೂ ಖುಷಿ ತಂದಿದೆ ಎಂದು ಸಂತಸ ಹಂಚಿಕೊಂಡರು.