ಆನೇಕಲ್: ಅನೇಕಲ್ ಉಪವಿಭಾಗದ ಪೊಲೀಸರು ವಿವಿಧ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ಸೇರಿದಂತೆ ಮನೆ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ 14 ಜನ ಆರೋಪಿಗಳನ್ನು ಬಂಧಿಸಿ 65 ಲಕ್ಷ ರೂ ಮೌಲ್ಯದ ದ್ವಿಚಕ್ರ ವಾಹನಗಳು ಹಾಗು ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ವಾಹನದ ಮಾಲೀಕರ ಮಾಹಿತಿ ಪಡೆದು ಬೈಕ್ಗಳನ್ನು ಹಿಂದಿರುಗಿಸಲಾಗಿದೆ. ಮನೆ ಕಳ್ಳತನದಲ್ಲಿ ಚಿನ್ನ-ಬೆಳ್ಳಿ ಆಭರಣ ಕಳೆದುಕೊಂಡವರಿಗೆ ತಮ್ಮ ಒಡವೆಗಳನ್ನು ಮರಳಿಸಲಾಗಿದೆ.
ಆನೇಕಲ್: 45 ದ್ವಿಚಕ್ರ ವಾಹನ ಜಪ್ತಿ, 14 ಆರೋಪಿಗಳು ಸೆರೆ - ಆನೇಕಲ್ ಪೊಲೀಸರಿಂದ ಬೈಕ್ ಕಳ್ಳರ ಬಂಧನ
ಬೈಕ್ ಮತ್ತು ಮನೆಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ 14 ಜನರನ್ನು ಆನೇಕಲ್ ಉಪವಿಭಾಗ ಪೊಲೀಸರು ಬಂಧಿಸಿ 65ಲಕ್ಷ ಮೌಲ್ಯದ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಮಾಲೀಕರಿಗೆ ಬೈಕ್ ಹಿಂದಿರುಗಿಸಿದ ಪೊಲೀಸರು