ಕರ್ನಾಟಕ

karnataka

ETV Bharat / state

ಉಕ್ರೇನ್​ನಲ್ಲಿ ಸಿಲುಕಿದ ಆನೇಕಲ್​ ವಿದ್ಯಾರ್ಥಿ: ಪೋಷಕರಿಗೆ ಧೈರ್ಯ ತುಂಬಿದ ಶಾಸಕ ಬಿ ಶಿವಣ್ಣ - ಉಕ್ರೇನ್​ನಲ್ಲಿ ಸಿಲುಕಿದ ಆನೇಕಲ್​ ವಿದ್ಯಾರ್ಥಿ

ಉಕ್ರೇನ್ ‌ಮೇಲೆ ರಷ್ಯಾ ನಿರಂತರ ದಾಳಿ ನಡೆಸುತ್ತಿದೆ. ಆನೇಕಲ್​ನ ಗೋಕುಲ್ ಎಂಬ ಎಂಬಿಬಿಎಸ್ ವಿದ್ಯಾರ್ಥಿ ಉಕ್ರೇನ್​ನಲ್ಲಿ ಸಿಲುಕಿದ್ದು, ಪೋಷಕರು ಆತಂಕಕ್ಕೆ ಒಳಗಾಗಿದ್ದಾರೆ.

ಎಂಬಿಬಿಎಸ್ ವಿದ್ಯಾರ್ಥಿ ಗೋಕುಲ್ ಕೃಷ್ಣ
ಎಂಬಿಬಿಎಸ್ ವಿದ್ಯಾರ್ಥಿ ಗೋಕುಲ್ ಕೃಷ್ಣ

By

Published : Feb 25, 2022, 3:36 PM IST

ಆನೇಕಲ್: ಕಳೆದ ಎರಡು ವರ್ಷದಿಂದ ಉಕ್ರೇನ್​ನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿರುವ ಆನೇಕಲ್​ನ ಗೋಕುಲ್ ಎಂಬ ವಿದ್ಯಾರ್ಥಿ ಉಕ್ರೇನ್​ನಲ್ಲಿ ಸಿಲುಕಿದ್ದು, ಮಗನ ಸ್ಥಿತಿ ಕಂಡು ಪೋಷಕರಲ್ಲಿ ಆತಂಕ ಮನೆ ಮಾಡಿದೆ.

ಉಕ್ರೇನ್​ನಲ್ಲಿ 2 ವರ್ಷ ಎಂಬಿಬಿಎಸ್ ಕೋರ್ಸ್​ ಪೂರೈಸಿರುವ ಗೋಕುಲ್ ಕೃಷ್ಣ, ಆನೇಕಲ್ ಪಟ್ಟಣದ ಜೈಭೀಮ್ ನಗರದ ಮಂಜುನಾಥ್ ಮತ್ತು ಉಷಾ ದಂಪತಿಯ ಮೊದಲನೇ ಮಗ. ಇದೀಗ ಉಕ್ರೇನ್​ನ ದಕ್ಷಿಣ ಪ್ರಾಂತದ ಝಪ್ರಾಒರೋಝಿಯಾ ಭಾಗದಲ್ಲಿದ್ದು, ಈ ಭಾಗದಲ್ಲಿ ಇನ್ನೂ ಮೂವತ್ತು ಮಂದಿ ಕನ್ನಡಿಗರಿದ್ದಾರೆ ಎಂದು ತಿಳಿದುಬಂದಿದೆ.

ಉಕ್ರೇನ್​ನಲ್ಲಿ ಸಿಲುಕಿರುವ ಆನೇಕಲ್​ ವಿದ್ಯಾರ್ಥಿ ಗೋಕುಲ್ ಕೃಷ್ಣ

ವಿಷಯ ತಿಳಿಯುತ್ತಿದ್ದಂತೆ ಗೋಕುಲ್​ನೊಂದಿಗೆ ವಿಡಿಯೋ ಸಂಪರ್ಕದಲ್ಲಿ ಆನೇಕಲ್ ಶಾಸಕ ಬಿ.ಶಿವಣ್ಣ ಮಾತನಾಡಿ ವಿದ್ಯಾರ್ಥಿಗೆ ಹಾಗೂ ಆತನ ಕುಟುಂಬಸ್ಥರಿಗೆ ಧೈರ್ಯ ತುಂಬಿದ್ದಾರೆ.

ಎಂಬಿಬಿಎಸ್ ವಿದ್ಯಾರ್ಥಿ ಗೋಕುಲ್ ಕೃಷ್ಣ

ಈ ಕುರಿತು ಅಲ್ಲಿನ ವಿದ್ಯಾಸಂಸ್ಥೆ ಹಾಗೂ ಉಕ್ರೇನ್ ಸರ್ಕಾರ ವಿದ್ಯಾರ್ಥಿಗಳನ್ನ ಗಡಿ ದಾಟಿಸಲು ಸಿದ್ಧತೆ ಮಾಡಿಕೊಂಡಿರುವುದಲ್ಲದೇ, ಪೋಷಕರಿಗೆ ನಿಮ್ಮ ಮಕ್ಕಳನ್ನ ಸುರಕ್ಷಿತವಾಗಿ ಕಳಿಸಿಕೊಡುವ ಭರವಸೆಯನ್ನು ದೂರವಾಣಿ ಮೂಲಕ ನೀಡಿದೆ.

ABOUT THE AUTHOR

...view details