ಕರ್ನಾಟಕ

karnataka

ETV Bharat / state

ಪ್ರತಿ ಮೂರು ತಿಂಗಳಿಗೊಮ್ಮೆ ಇಲಾಖಾವಾರು ವರದಿ ನೀಡುವಂತೆ ಕೆಡಿಪಿ ಸಭೆಯಲ್ಲಿ ಶಾಸಕರ ಆದೇಶ - ಆನೇಕಲ್ ಕೆಡಿಪಿ ಸಭೆ

ಆನೇಕಲ್ ತಾಲೂಕು ಕಚೇರಿಯಲ್ಲಿ ಶಾಸಕ ಬಿ ಶಿವಣ್ಣ, ಇಒ ದೇವರಾಜ್, ತಹಶಿಲ್ದಾರ್ ದಿನೇಶ್ ನೇತೃತ್ವದಲ್ಲಿ ಶನಿವಾರ ಕೆಡಿಪಿ ಸಭೆ ಜರುಗಿತು.

ಕೆಡಿಪಿ ಸಭೆ

By

Published : Nov 10, 2019, 2:26 AM IST

ಆನೇಕಲ್: ಜಿಲ್ಲಾ ಹಾಗೂ ತಾಲೂಕಾಡಳಿತ ವತಿಯಿಂದ ಆನೇಕಲ್ ತಾಲೂಕು ಕಚೇರಿಯಲ್ಲಿ ಶಾಸಕ ಬಿ ಶಿವಣ್ಣ, ಇಒ ದೇವರಾಜ್, ತಹಶಿಲ್ದಾರ್ ದಿನೇಶ್ ನೇತೃತ್ವದಲ್ಲಿ ಶನಿವಾರ ಕೆಡಿಪಿ ಸಭೆ ಜರುಗಿತು.

ಆನೇಕಲ್ ತಾಲೂಕು ಕಚೇರಿಯಲ್ಲಿ ನಡೆದ ಕೆಡಿಪಿ ಸಭೆ

ಸಭೆಯಲ್ಲಿ ಪ್ರತಿ ಇಲಾಖೆಯಲ್ಲಿ ದೊರೆಯುವ ಯೋಜನೆಗಳು ಜನತೆಗೆ ಸಮರ್ಪಕವಾಗಿ ದೊರೆತಿಲ್ಲ ಎನ್ನುವುದು ಶಾಸಕರಿಗೆ ಮನವರಿಕೆಯಾಯಿತು.

ಮುಖ್ಯವಾಗಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ವಿದ್ಯಾರ್ಥಿ ನಿಲಯಗಳ ಕುರಿತು ವಹಿಸಿದ ಅಲ್ಪ ನಿರ್ಲಕ್ಷ್ಯ ಒಳಗೊಂಡಂತೆ ಇತರೆ ಇಲಾಖೆಗಳ ಯೋಜನಾ ಫಲಾನುಭವಿಗಳನ್ನು ಆಯ್ಕೆ ಮಾಡುವಲ್ಲಿ ತೆಗೆದುಕೊಳ್ಳಬೇಕಾದ ನಿಖರ ಮಾಹಿತಿ ಬಗ್ಗೆ ಅಧಿಕಾರಿಗಳ ತಾತ್ಸಾರ ಇರುವುದು ಕಂಡು ಬಂದ ಹಿನ್ನೆಲೆಯಲ್ಲಿ ಪ್ರತಿ ಆಯ್ಕೆಯನ್ನು ಶಾಸಕರ ಗಮನಕ್ಕೆ ತರುವಂತೆ ಸಭೆಯಲ್ಲಿ ತಿಳಿಸಲಾಯಿತು.

ABOUT THE AUTHOR

...view details