ದೇವನಹಳ್ಳಿ:ಆಂಧ್ರ ಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಇಂದು ಸಂಜೆ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು.
ಮಗಳನ್ನು ವಿದೇಶಕ್ಕೆ ಕಳುಹಿಸಲು ಬೆಂಗಳೂರಿಗೆ ಆಗಮಿಸಿದ ಆಂಧ್ರ ಸಿಎಂ ಜಗನ್! - Andhra CM Jagan
ಮಗಳನ್ನು ಬೀಳ್ಕೊಡಲು ಜಗನ್ ಬೆಂಗಳೂರಿಗೆ ಆಗಮಿಸಿದ್ದಾರೆ. ಯಲಹಂಕ ಬಳಿಯ ಬಾಗಲೂರಿನಲ್ಲಿ ಜಗನ್ ಪ್ಯಾಲೇಸ್ ಇದ್ದು, ಇಲ್ಲಿ ಜಗನ್ ಕುಟುಂಬ ವಾಸ್ತವ್ಯ ಹೂಡಿದೆ.
ಹಿರಿಯ ಮಗಳು ಹರ್ಷಾ ರೆಡ್ಡಿಗೆ ಇನ್ಸೀಡ್ ಬಿಜಿನೆಸ್ ಸ್ಕೂಲ್ನಲ್ಲಿ ಸೀಟ್ ಸಿಕ್ಕ ಹಿನ್ನೆಲೆಯಲ್ಲಿ ಪ್ಯಾರಿಸ್ ಕ್ಯಾಂಪಸ್ನಲ್ಲಿ ಮಾಸ್ಟರ್ ಡಿಗ್ರಿ ಓದಲಿದ್ದಾರೆ. ಹರ್ಷಾ ರೆಡ್ಡಿ ನಾಳೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ಯಾರಿಸ್ಗೆ ಪ್ರಯಾಣ ಬೆಳಸಲಿದ್ದಾರೆ.
ಮಗಳನ್ನು ಬೀಳ್ಕೊಡಲು ಜಗನ್ ಬೆಂಗಳೂರಿಗೆ ಆಗಮಿಸಿದ್ದಾರೆ. ಯಲಹಂಕ ಬಳಿಯ ಬಾಗಲೂರಿನಲ್ಲಿ ಜಗನ್ ಪ್ಯಾಲೇಸ್ ಇದ್ದು, ಇಲ್ಲಿ ಜಗನ್ ಕುಟುಂಬ ವಾಸ್ತವ್ಯ ಹೂಡಿದೆ. ಬಳಿಕ ಆ.27 ರಂದು ಆಂಧ್ರ ಪ್ರದೇಶಕ್ಕೆ ವಾಪಸ್ ತೆರಳಲಿದ್ದಾರೆ. ಬೆಂಗಳೂರಿಗೆ ಆಗಮಿಸಿದ ಜಗನ್ರನ್ನು ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಸ್ವಾಗತಿಸಿದರು.
TAGGED:
Andhra CM Jagan