ಬೆಂಗಳೂರು: ಸುಮಾರು 200 ವರ್ಷಗಳಷ್ಟು ಪ್ರಾಚೀನ ಕಾಲದ ಬುದ್ಧನ ವಿಗ್ರಹವನ್ನು ಮಾರಾಟಕ್ಕೆ ಯತ್ನಿಸುತ್ತಿದ್ದ ಐವರು ಆರೋಪಿಗಳನ್ನು ಸಂಪಂಗಿರಾಮ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಪಂಚಮರ್ಥಿ ರಘುರಾಮ ಚೌಧರಿ, ಉದಯ್ ಕುಮಾರ್, ಫ್ರೆಡ್ಡಿ ಡಿಸೋಜ, ಶರಣ್ ನಾಯರ್ ಹಾಗೂ ಪ್ರಸನ್ನ ಎಂದು ಗುರುತಿಸಲಾಗಿದೆ.
ಆರೋಪಿಗಳ ಪೈಕಿ ಪಂಚಮರ್ಥಿ ರಘುರಾಮ ಚೌಧರಿ ತೆಲಂಗಾಣ ಮೂಲದವನಾಗಿದ್ದು, 30 ಲಕ್ಷ ರೂ.ಗಳಿಗೆ ಶ್ರೀಕಾಂತ್ ಎಂಬಾತನಿಂದ ವಿಗ್ರಹ ಖರೀದಿಸಿದ್ದ. ಬಳಿಕ ವಿದೇಶಕ್ಕೆ ರಫ್ತು ಮಾಡಿ ಕೋಟ್ಯಂತರ ರೂಪಾಯಿ ಸಂಪಾದಿಸಬಹುದೆಂದು ಉಳಿದ ಆರೋಪಿಗಳೊಂದಿಗೆ ಸೇರಿ ಯೋಜನೆ ರೂಪಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.