ಬೆಂಗಳೂರು:ಶಾಸಕ ಆನಂದ್ ಸಿಂಗ್ ಮೇಲೆ ಕಂಪ್ಲಿ ಗಣೇಶ್ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಣೇಶ್ ಪರ ವಕೀಲರು ಹೈಕೋರ್ಟ್ಗೆ ಇಂದು ಅರ್ಜಿ ಸಲ್ಲಿಸಿದ್ದಾರೆ.
ಆನಂದ್ ಸಿಂಗ್ ಮೇಲೆ ಹಲ್ಲೆ ಪ್ರಕರಣ... ಗಣೇಶ್ ಪರ ವಕೀಲರಿಂದ ಹೈಕೋರ್ಟ್ಗೆ ಅರ್ಜಿ - undefined
ಶಾಸಕ ಆನಂದ್ ಸಿಂಗ್ ಮೇಲೆ ಕಂಪ್ಲಿ ಗಣೇಶ್ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಣೇಶ್ ಪರ ವಕೀಲರು ಹೈಕೋರ್ಟ್ಗೆ ಇಂದು ಅರ್ಜಿ ಸಲ್ಲಿಸಿದ್ದು, ಪರಪ್ಪನ ಅಗ್ರಹಾರದಲ್ಲಿರುವ ಗಣೇಶ್ಗೆ ಹೈಕೋರ್ಟ್ ಬೇಲ್ ನೀಡುತ್ತಾ ಅಥವಾ ಜೈಲೇ ಗತಿನಾ ಅನ್ನೋದನ್ನು ಕಾದು ನೋಡಬೇಕಿದೆ.
ಶಾಸಕ ಆನಂದ್ ಸಿಂಗ್
ಗಣೇಶ್ ಬಂಧನವಾಗಿ ಒಂದು ವಾರದಬಳಿಕ ಅವರ ಪರ ವಕೀಲರಾದ ಹನುಮಂತರಾಯಪ್ಪ ಅವರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಹಾಕಿದ್ದರು. ಮಾ.25ರಂದು ಅರ್ಜಿ ವಿಚಾರಣೆ ನಡೆಸಿದ ನ್ಯಾ.ರಾಮಚಂದ್ರ ಹುದ್ದಾರ್ಅವರು ಜಾಮೀನು ಅರ್ಜಿಯನ್ನು ವಜಾ ಮಾಡಿದ್ದರು.
ಇದೀಗ ಕಂಪ್ಲಿ ಗಣೇಶ್ ಅವರು ಹೈಕೋರ್ಟ್ನಿಂದಲೇ ಜಾಮೀನು ಪಡಿಯಬೇಕಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಅವರ ಪರ ವಕೀಲರು ಹೈಕೋರ್ಟ್ಗೆ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ವಿಚಾರಣೆ ಇನ್ನು ನಡೆಯಬೇಕಿದ್ದು, ಪರಪ್ಪನ ಅಗ್ರಹಾರದಲ್ಲಿರುವ ಗಣೇಶ್ಗೆ ಹೈಕೋರ್ಟ್ ಬೇಲ್ ನೀಡುತ್ತಾ ಅಥವಾ ಜೈಲೇ ಗತಿನಾ ಅನ್ನೋದನ್ನು ಕಾದು ನೋಡಬೇಕಿದೆ.
Last Updated : Mar 29, 2019, 7:06 PM IST