ಕರ್ನಾಟಕ

karnataka

ETV Bharat / state

ಅಂದು ಕಾವಲು ಇರದೇ ಇದ್ರೆ ಆನಂದ್ ಸಿಂಗ್ ಮರ್ಡರ್​​ ಆಗಿರುತಿತ್ತು: ಎಸ್.ಟಿ.ಸೋಮಶೇಖರ್ - ಉಪಚುನಾವಣೆ ಯಶವಂತಪುರ ಕ್ಷೇತ್ರ

ಈಗಲ್ ಟನ್ ಹೊಟೇಲ್ ನಲ್ಲಿ ನಾವೆಲ್ಲ ಸೇರಿ ಆನಂದ್​​ ಸಿಂಗ್​​ರ ಕಾವಲು ಕಾಯದೇ ಹೋಗಿದ್ದರೆ ಕಂಪ್ಲಿ ಗಣೇಶ್ ಮತ್ತು ಇತರ ಶಾಸಕರು ಆನಂದ್ ಸಿಂಗ್ ರನ್ನು ಹತ್ಯೆ ಮಾಡಿಬಿಡುತ್ತಿದ್ದರು ಎಂದು ಕಗ್ಗಲೀಪುರ ಬಿಜೆಪಿ ಅಭ್ಯರ್ಥಿ ಎಸ್.ಟಿ.ಸೋಮಶೇಖರ್ ಬಹಿರಂಗಪಡಿಸಿದ್ದಾರೆ.

S.T.Somashekar
ಎಸ್.ಟಿ.ಸೋಮಶೇಖರ್ ಕಿಡಿ

By

Published : Nov 28, 2019, 2:22 PM IST

ಬೆಂಗಳೂರು:ಅಂದು ಈಗಲ್ ಟನ್ ಹೊಟೇಲ್ ನಲ್ಲಿ ನಾವೆಲ್ಲ ಕಾವಲು ಕಾಯದೇ ಹೋಗಿದ್ದರೆ ಆನಂದ್‌ ಸಿಂಗ್ ಕೊಲೆಯಾಗುತ್ತಿತ್ತು ಎಂದು ಬಿಜೆಪಿ ಅಭ್ಯರ್ಥಿ ಎಸ್.ಟಿ.ಸೋಮಶೇಖರ್ ಬಹಿರಂಗ ಪಡಿಸಿದ್ದಾರೆ.

ಯಶವಂತಪುರ ಕ್ಷೇತ್ರದ ಕಗ್ಗಲೀಪುರದಲ್ಲಿ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಅಂದು ಈಗಲ್ ಟನ್ ಹೊಟೇಲ್ ನಲ್ಲಿ ಗಲಾಟೆ ಆಯಿತು. ನಾವು ಅವತ್ತು ರಕ್ಷಣೆ ಕೊಡದೇ ಇದ್ದಿದ್ದರೆ ಆನಂದ್ ಸಿಂಗ್ ಕೊಲೆಯಾಗಗಿ ಹೋಗುತ್ತಿದ್ದ. ಕಂಪ್ಲಿ ಗಣೇಶ್ ಮತ್ತು ಇತರ ಶಾಸಕರು ಆನಂದ್ ಸಿಂಗ್ ರನ್ನು ಹತ್ಯೆ ಮಾಡಲು ಸಂಚು ಮಾಡಿದ್ದರು ಎಂದು ಅಂದು ನಡೆದ ಘಟನೆಯನ್ನು ಬಿಚ್ಚಿಟ್ಟರು.

ಎಸ್.ಟಿ.ಸೋಮಶೇಖರ್ ಕಿಡಿ

ಮೈತ್ರಿ ಸರ್ಕಾರ ರಚನೆ ಮಾಡಿ, ಕುಮಾರಸ್ವಾಮಿ ಮುಖ್ಯಮಂತ್ರಿ ಮಾಡಲು ನಮ್ಮದು ಅಳಿಲು ಸೇವೆ ಇದೆ. ಇದನ್ನು ಕುಮಾರಸ್ವಾಮಿ ಮರೆಯಬಾರದು ಎಂದು ಕಿಡಿ ಕಾರಿದರು.

ಡಿಕೆಶಿ ವಿರುದ್ಧ ವಾಗ್ದಾಳಿ:
ಇದೇ ವೇಳೆ ಎಸ್‌.ಟಿ.ಸೋಮಶೇಖರ್ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿ, ಕನಕಪುರ ರಸ್ತೆ, ಕಗ್ಗಲಿಪುರಕ್ಕೆ ಅನುದಾನ ತಂದವನು ನಾನು. ಇಲ್ಲಿ ಕೆಲವರು ಹೇಳುತ್ತಾರೆ ಅನುದಾನ ತಂದದ್ದು ಡಿಕೆಶಿ ಅಂತ. ಶಿವಕುಮಾರ್ ಗೂ ಯಶವಂತಪುರ ಕ್ಷೇತ್ರದ ಕಗ್ಗಲಿಪುರಕ್ಕು ಏನು ಸಂಬಂಧ?. ಕಗ್ಗಲಿಪುರದಲ್ಲಿ ಕೆಲ ಜನಪ್ರತಿನಿಧಿಗಳು ದೌಲತ್ತಿನಿಂದ ಮೆರೆಯುತ್ತಿದ್ದರು. ಶಾಸಕರು ತಾವು ಹೇಳಿದ್ದೇ ಮಾತು ಕೇಳಬೇಕು ಅಂತಿದ್ದರು. ಆದರೆ ಆ ಕಾಲ ಎಲ್ಲ ಹೋಗಿದೆ ಈಗ. ಡಿಕೆಶಿ ಅನುದಾನವೂ ಅಲ್ಲ, ಬೇರೊಬ್ಬರ ಅನುದಾನವೂ ಅಲ್ಲ. ಕ್ಷೇತ್ರಕ್ಕೆ ಅನುದಾನ ತಂದದ್ದು ನಾನೇ ಎಂದು ಟಾಂಗ್ ನೀಡಿದರು.

ಯಶವಂತಪುರದಲ್ಲಿ ಕಾಂಗ್ರೆಸ್ ಡಮ್ಮಿ ಅಭ್ಯರ್ಥಿ ಹಾಕಿದ್ದಾರೆ. ಜೆಡಿಎಸ್ ಜತೆ ಒಳ‌ ಒಪ್ಪಂದ ಮಾಡಿಕೊಂಡಿದ್ದಾರೆ‌. ಇಲ್ಲಿನ ಕಾಂಗ್ರೆಸ್ ನಾಯಕರು ಒಮ್ಮೆ ನಿಮ್ಮ ಆತ್ಮ ವಿಮರ್ಶೆ ಮಾಡಿಕೊಳ್ಳಿ. ಒಂದು ವರ್ಷ ಮೂರು ತಿಂಗಳು ಅನುಭವಿಸಿದ ನೋವು ಅರ್ಥ ಮಾಡಿಕೊಳ್ಳಿ ಎಂದು ಎಚ್ಚರಿಕೆ ನೀಡಿದರು.

ABOUT THE AUTHOR

...view details