ಕರ್ನಾಟಕ

karnataka

ETV Bharat / state

26 ಗಂಟೆಗಳಲ್ಲಿ ಅಮೆರಿಕದಿಂದ ಚೆನ್ನೈಗೆ ಮಹಿಳೆ ಏರ್ ಲಿಫ್ಟ್ : ಅಬ್ಬಬ್ಬಾ ವೆಚ್ಚ ಕೇಳಿದರೆ ಅಚ್ಚರಿ ಗ್ಯಾರಂಟಿ! - Air lift from America to Chennai in 26 hours

ಅಮೆರಿಕದಿಂದ ಚೆನ್ನೈಗೆ ಕೇವಲ 26 ಗಂಟೆಗಳಲ್ಲಿ ಬೆಂಗಳೂರಿನ ಓರ್ವ ವೃದ್ದೆಯನ್ನು ಏರ್ ಲಿಫ್ಟ್ ಮಾಡುವ ಮೂಲಕ ಸಿಲಿಕಾನ್ ಸಿಟಿಯ ಏರ್ ಆಂಬುಲೆನ್ಸ್ ಸಂಸ್ಥೆಯಿಂದ ಹೊಸ ದಾಖಲೆ ಬರೆದಿದೆ.

an-old-woman-was-airlifted-from-america-to-india-at-a-cost-of-one-crore
26 ಗಂಟೆಗಳಲ್ಲಿ ಅಮೆರಿಕಾದಿಂದ ಚೆನ್ನೈಗೆ ರೋಗಿ ಏರ್ ಲಿಫ್ಟ್ : ಒಂದು ಕೋಟಿ ವೆಚ್ಚ

By

Published : Jul 20, 2022, 10:18 PM IST

Updated : Jul 20, 2022, 10:34 PM IST

ಬೆಂಗಳೂರು/ಚೆನ್ನೈ :ಹೃದಯದ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ 67 ವರ್ಷದ ಬೆಂಗಳೂರಿನ ಮಹಿಳೆಯನ್ನು ಅಮೆರಿಕದ ಪೋರ್ಟ್‌ಲ್ಯಾಂಡ್‌ನಿಂದ ಚೆನ್ನೈಗೆ ಏರ್ ಆ್ಯಂಬುಲೆನ್ಸ್ ಸಂಸ್ಥೆಯ ವಿಮಾನದಲ್ಲಿ ಕರೆತರಲಾಗಿದೆ. ಈ ಏರ್ ಆ್ಯಂಬುಲೆನ್ಸ್ ಐರ್ಲೆಂಡ್ ಮತ್ತು ಟರ್ಕಿ ಮೂಲಕ ಕೇವಲ 26 ಗಂಟೆಗಳಲ್ಲಿ ಭಾರತ ತಲುಪಿದ್ದು, ಈ ಮೂಲಕ ಹೊಸ ದಾಖಲೆ ಮಾಡಿದೆ.

ರೋಗಿಯನ್ನು ಅಮೇರಿಕಾದಿಂದ ಏರ್‌ಲಿಫ್ಟ್‌ ಮಾಡಲು ಸುಮಾರು 133,000 ಡಾಲರ್ ವೆಚ್ಚವಾಗಿದೆ (ಸುಮಾರು 1 ಕೋಟಿ ರೂ). ಸದ್ಯ ಹೃದಯ ಶಸ್ತ್ರಚಿಕಿತ್ಸೆಗೆ ತಯಾರಾಗುತ್ತಿರುವ ರೋಗಿಯ ಪರಿಸ್ಥಿತಿಯನ್ನು ಪರಿಗಣಿಸಿ ಏರ್ ಆ್ಯಂಬುಲೆನ್ಸ್ ಜೊತೆಗೆ ಎರಡು ಸೂಪರ್ ಮತ್ತು ಮಧ್ಯಮ ಗಾತ್ರದ ಖಾಸಗಿ ಜೆಟ್‌ಗಳನ್ನು ಇಲ್ಲಿ ಇರಿಸಲಾಗಿದೆ.

ಈ ವೃದ್ಧೆ ಬೆಂಗಳೂರಿನ ಇಂದಿರಾನಗರದ ನಿವಾಸಿಯಾಗಿದ್ದು, ಕೆಲವು ವರ್ಷಗಳ ಕಾಲ ತನ್ನ ಮಕ್ಕಳೊಂದಿಗೆ ಒರೆಗಾನ್‌ನಲ್ಲಿ ನೆಲೆಸಿದ್ದರು. ವೃದ್ಧೆಯು ಹೃದಯದ ಕಾಯಿಲೆಗೆ ಈ ಮೊದಲು ಯುಎಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಡಾ ಶಾಲಿನಿ ನಲ್ವಾಡ್ ತಿಳಿಸಿದ್ದಾರೆ.

ಅಮೆರಿಕದಲ್ಲಿನ ಚಿಕಿತ್ಸೆಯು ಸಾಕಾಗುವುದಿಲ್ಲ ಎಂದು ವೃದ್ಧೆಯ ಕುಟುಂಬ ಭಾವಿಸಿದ್ದು, ಹಾಗಾಗಿ ಈ ವೃದ್ಧೆಯನ್ನು ಭಾರತಕ್ಕೆ ಏರ್ ಲಿಫ್ಟ್ ಮಾಡಲಾಗಿದೆ ಎಂದು ಬೆಂಗಳೂರು ಮೂಲದ ಐಸಿಎಟಿಟಿ(ಏರ್ ಆಂಬ್ಯುಲೆನ್ಸ್ ಸೇವಾ ಸಂಸ್ಥೆ) ಯ ಸಹ ಸಂಸ್ಥಾಪಕಿ ಮತ್ತು ನಿರ್ದೇಶಕಿ ಡಾ.ಶಾಲಿನಿ ನಲ್ವಾಡ್ ತಿಳಿಸಿದ್ದಾರೆ.

ಒರೆಗಾನ್‌ ನಿಂದ ಪ್ರಯಾಣ ಆರಂಭ:ವೃದ್ಧ ಮಹಿಳೆಯ ದೀರ್ಘ ಏರ್‌ಲಿಫ್ಟ್ ಮಾಡುವ ಕಾರ್ಯ ಭಾನುವಾರ ಬೆಳಿಗ್ಗೆ ಒರೆಗಾನ್‌ನ ಪೋರ್ಟ್‌ಲ್ಯಾಂಡ್‌ನಿಂದ ಪ್ರಾರಂಭವಾಗಿದ್ದು, ಮೊದಲು ಆ್ಯಂಬುಲೆನ್ಸ್‌ನಲ್ಲಿ ಲೆಗಸಿ ಗುಡ್ ಸಮರಿಟನ್ ಮೆಡಿಕಲ್ ಸೆಂಟರ್‌ನಿಂದ ಪೋರ್ಟ್‌ಲ್ಯಾಂಡ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರೆತರಲಾಯಿತು. ಇಲ್ಲಿಂದ ಏರ್ ಆ್ಯಂಬುಲೆನ್ಸ್ ನಲ್ಲಿ ಬಂದ ರೋಗಿಯನ್ನು ಮೇಲ್ವಿಚಾರಣೆ ಮಾಡಲು ಮೂವರು ವೈದ್ಯರು ಮತ್ತು ಇಬ್ಬರು ಸಹ ಸಿಬ್ಬಂದಿ ಸೇರಿ ವಿಶೇಷ ಐಸಿಯು ವ್ಯವಸ್ಥೆ ಮಾಡಲಾಗಿತ್ತು.

ಈ ಏರ್ ಆ್ಯಂಬುಲೆನ್ಸ್ ಐಸ್‌ಲ್ಯಾಂಡ್ ರಾಜಧಾನಿ ರೇಕ್‌ಜಾವಿಕ್‌ ಗೆ 7.5 ಗಂಟೆಗಳಲ್ಲಿ ತಲುಪಿ ನಂತರ ಟರ್ಕಿಯ ಇಸ್ತಾನ್‌ಬುಲ್‌ಗೆ ಆರು ಗಂಟೆಗಳಲ್ಲಿ ತಲುಪಿತು. ಅಲ್ಲಿಂದ ಬೆಂಗಳೂರಿನ ವೈದ್ಯರು ರೋಗಿಯನ್ನು ದಿಯರ್‌ಬಕಿರ್‌ ಮಾರ್ಗವಾಗಿ ಮಂಗಳವಾರ ಮುಂಜಾನೆ 2.10ಕ್ಕೆ ಚೆನ್ನೈಗೆ ತಲುಪಿದರು ಎಂದು ಡಾ.ಶಾಲಿನಿ ನಲ್ವಾಡ್ ಮಾಹಿತಿ ನೀಡಿದ್ದಾರೆ.

ಓದಿ :ಕನ್ನಡದಲ್ಲಿ 'ಬಿಗ್‌ಹಾತ್' ಆ್ಯಪ್ ಬಿಡುಗಡೆ

Last Updated : Jul 20, 2022, 10:34 PM IST

For All Latest Updates

TAGGED:

ABOUT THE AUTHOR

...view details