ಬೆಂಗಳೂರು:ಹಾಡಹಗಲೇ ಜನದಟ್ಟಣೆ ಪ್ರದೇಶವೊಂದರ ಸ್ಕೈವಾಕ್ ಮೇಲೆಯೇ ಪಂಚೆಯಿಂದ ನೇಣು ಬಿಗಿದುಕೊಳ್ಳುವ ಮೂಲಕ ವೃದ್ಧನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಜಧಾನಿಯಲ್ಲಿ ನಡೆದಿದೆ.
ಬೆಂಗಳೂರು - ತುಮಕೂರು ಹೆದ್ದಾರಿಯ ಎಂಟನೇ ಮೈಲಿ ಬಳಿಯಿರುವ ಸ್ಕೈವಾಕ್ನಲ್ಲಿ ಈ ದುರ್ಘಟನೆ ನಡೆದಿದೆ. ದಾಸರಹಳ್ಳಿಯ ಕಲ್ಯಾಣನಗರ ನಿವಾಸಿಯಾದ ಮೋಹನ್ ದಾಸ್(74) ಇಂದು ಮಧ್ಯಾಹ್ನ ಪಂಚೆಯಿಂದ ಸ್ಕೈವಾಕ್ ಕಂಬಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.