ಬೆಂಗಳೂರು: ರಾಜ್ಯದ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಶಂಕರ್ ಬಿದರಿಯವರಿಗೆ ವಿಧಾನ ಪರಿಷತ್ ಅಥವಾ ರಾಜ್ಯಸಭೆಗೆ ಟಿಕೆಟ್ ಕೊಡಬೇಕು ಎಂದು ಬುಧವಾರ ಸಿಎಂಗೆ ಮನವಿ ಮಾಡಲಾಗಿತ್ತು. ಈ ಕುರಿತು ಶಂಕರ್ ಬಿದರಿ ಈಟಿವಿ ಭಾರತದ ಜೊತೆ ಮಾತುಕತೆ ನಡೆಸಿದ್ದಾರೆ.
ಅವಕಾಶ ಇಲ್ಲವೆಂದು ರಾಜಕೀಯದಿಂದ ಹೊರ ಹೋದ್ರೆ ದುಷ್ಟರ ಸಂಖ್ಯೆ ಹೆಚ್ಚಾಗುತ್ತೆ: ಶಂಕರ್ ಬಿದರಿ
ಈಟಿವಿ ಭಾರತದೊಂದಿಗೆ ಮಾತನಾಡಿದ ಶಂಕರ್ ಬಿದರಿ, ಮೋದಿಯವರ ಪ್ರಾಮಾಣಿಕತೆ ನೋಡಿ ನಾನು ಬಿಜೆಪಿಯಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ಸದ್ಯ ನನ್ನಿಂದ ಆದಷ್ಟು ಕೆಲಸ ಮಾಡುತ್ತಿದ್ದೇನೆ. ಪೊಲೀಸ್ ಇಲಾಖೆಯಲ್ಲಿ 42 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದೇನೆ. ನನಗೆ ಅಧಿಕಾರದ ಆಸೆ ಇಲ್ಲ ಎಂದಿದ್ದಾರೆ.
ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಮೋದಿಯವರ ಪ್ರಾಮಾಣಿಕತೆ ನೋಡಿ ನಾನು ಬಿಜೆಪಿಯಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ಸದ್ಯ ನನ್ನಿಂದ ಆದಷ್ಟು ಕೆಲಸ ಮಾಡುತ್ತಿದ್ದೇನೆ. ಪೊಲೀಸ್ ಇಲಾಖೆಯಲ್ಲಿ 42 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದೇನೆ. ನನಗೆ ಅಧಿಕಾರದ ಆಸೆ ಇಲ್ಲ. ಆದರೆ, ಜನರ ಸೇವೆ ಮಾಡಬೇಕು ಅನ್ನೋ ಇಚ್ಛೆ ಇದೆ. ಅದಕ್ಕೆ ಸರಿಯಾದ ಸ್ಥಾನಮಾನ ಕೊಟ್ಟರೆ ನಾನು ಸೇವೆ ಮಾಡಲು ಸಿದ್ಧವಿದ್ದೇನೆ ಎಂದರು.
ರಾಜಕೀಯದಲ್ಲಿ ಅವಕಾಶ ಇಲ್ಲ ನಾವು ರಾಜಕೀಯದಿಂದ ಹೊರ ಹೋದ್ರೆ ದುಷ್ಟರ ಸಂಖ್ಯೆ ಹೆಚ್ಚಾಗುತ್ತೆ. ಹಾಗಾಗಿ ರಾಜಕೀಯದಲ್ಲಿದ್ದುಕೊಂಡೇ ಒಳ್ಳೆಯ ಸೇವೆ ಸಲ್ಲಿಸಲು ಪ್ರಯತ್ನಿಸುತ್ತೇನೆ. ನಾನು ಈವರೆಗೆ ಯಾರ ಬಳಿಯೂ ಹೋಗಿ ಅವಕಾಶ ಕೊಡಿ ಎಂದು ಕೇಳಿಲ್ಲ. ನನ್ನ ಕೆಲ ಅಭಿಮಾನಿಗಳು ಸಿಎಂ ಯಡಿಯೂರಪ್ಪ ಅವರಿಗೆ ಕೇಳಿದ್ದಾರೆಂದು ತಿಳಿದು ಬಂದಿದೆ. ನಾನು ಅಧಿಕಾರದ ವ್ಯಾಮೋಹದಿಂದ ಹೋಗುತ್ತಿಲ್ಲ. ನನಗೆ ಅವಕಾಶ ಕೊಟ್ಟರೆ ಸೇವೆ ಮಾಡುತ್ತೇನೆ. ನಾನು ನನ್ನ ಕುಟುಂಬಕ್ಕೆ ಸೇವೆ ಮಾಡಲ್ಲ, ನನಗಾಗಿ ಮಾಡಲ್ಲ, ದೇಶಕ್ಕೆ, ರಾಜ್ಯಕ್ಕೆ ಸೇವೆ ಸಲ್ಲಿಸುತ್ತಿದ್ದೇನೆ ವಿಶೇಷ ಸಂದರ್ಶನದಲ್ಲಿ ಶಂಕರ್ ಬಿದರಿ ಹೇಳಿದ್ದಾರೆ.