ಕರ್ನಾಟಕ

karnataka

ETV Bharat / state

ರಸ್ತೆ ಅಪಘಾತ ತಡೆಗೆ ಆ್ಯಪ್ : MMIT ವಿದ್ಯಾರ್ಥಿಗಳ ವಿಶಿಷ್ಟ ಆವಿಷ್ಕಾರ

ಎಂಎಂಐಟಿ ವಿದ್ಯಾರ್ಥಿಗಳಿಂದ ವಿಶಿಷ್ಟ ಆವಿಷ್ಕಾರ. ರಸ್ತೆ ಅಪಘಾತ ತಡೆಯುವ ವಿಶೇಷ ಆ್ಯಪ್ ಬಿಡುಗಡೆ . ‘ರೋಡ್ ರನ್ನರ್’ ಆ್ಯಪ್​ಗೆ ಸ್ಮಾರ್ಟ್ ಇಂಡಿಯಾ ಹ್ಯಾಕ್‌ಥಾನ್ ಪ್ರಶಸ್ತಿ ಲಭ್ಯ.

ಸಂಶೋದನಾ ತಂಡದ  ದೀಪ್ತಾ

By

Published : Mar 25, 2019, 12:19 PM IST

ಬೆಂಗಳೂರು:ಹೆದ್ದಾರಿಗಳಲ್ಲಿ ವಾಹನ ಚಲಾಯಿಸುವಾಗ ಅಪಘಾತಗಳಾಗುವುದು ಸಹಜ. ಆದರೆ, ಇನ್ಮುಂದೆ ಈ ಆ್ಯಪ್‌ನ ನಿಮ್ಮ ಮೊಬೈಲ್​ನಲ್ಲಿ ಹಾಕಿಕೊಂಡರೆ, ಅಪಘಾತ ಸಂಭವಿಸುವುದನ್ನ ತಪ್ಪಿಸಬಹುದು.

MMIT ವಿದ್ಯಾರ್ಥಿಗಳ ವಿಶಿಷ್ಟ ಆವಿಷ್ಕಾರ

ಯಲಹಂಕದ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ರೋಡ್ ರನ್ನರ್ ಎಂಬ ಆ್ಯಪ್ ಕಂಡು ಹಿಡಿದಿದ್ದು, ಇದು ರಸ್ತೆ ಅಪಘಾತ ವಲಯಗಳನ್ನು ಗುರುತಿಸಿ, ವಾಹನ ಚಾಲಕನಿಗೆ ಎಚ್ಚರಿಕೆ ನೀಡುತ್ತದೆ.

ಅಭ್ರಜ್ಯೋತಿ ಪಾಲ್, ಯಶ್ ಜೈಸ್ವಾಲ್, ಅಮಿತ್ ಕೆ.ಕೆ, ದೀಪ್ತಾ ಎಂ, ಸಾರಂಗ್ ಪಾರಿಖ್, ಅಜಯ್.ಎಂ ಮತ್ತು ಯಶಸ್ ಎಂ ಹಾಗೂ ಕಾಲೇಜಿನ ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಡಾ.ಹೆಚ್.ಎ. ಸಂಜಯ್ ಅವರ ತಂಡ ಈ ಆ್ಯಪ್ ಅಭಿವೃದ್ದಿ ಪಡಿಸಿದೆ. ‘ರೋಡ್ ರನ್ನರ್’ ಆ್ಯಪ್​ಗೆ 2019ನೇ ಸಾಲಿನ ಸ್ಮಾರ್ಟ್ ಇಂಡಿಯಾ ಹ್ಯಾಕ್‌ಥಾನ್ ಪ್ರಶಸ್ತಿ ಲಭಿಸಿದೆ.

ಅಧಿಕೃತ ಅನುಮೋದನೆ:

ಈ ವಿಶೇಷ 'ರೋಡ್ ರನ್ನರ್' ಆ್ಯಪ್​ಗೆ ಮತ್ತಷ್ಟು ಸುಧಾರಿತ ಅಂಶ ಸೇರಿಸಿ ಅಭಿವೃದ್ಧಿಪಡಿಸಲು, ಭಾರತ ಸರ್ಕಾರದ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ನಿರ್ವಹಣೆಯ ಸಚಿವಾಲಯ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯಕ್ಕೆ ಅಧಿಕೃತ ಅನುಮೋದನೆ ನೀಡಿದೆ. ಇನ್ನಷ್ಟು ಸುಧಾರಿತ ತಂತ್ರಜ್ಞಾನದ ಆ್ಯಪ್ ಕೆಲವೇ ದಿನಗಳಲ್ಲಿ ಎಲ್ಲರಿಗೂ ಲಭ್ಯವಾಗಲಿದೆ.

ಈ ಆ್ಯಪ್‌ ಹೇಗೆ ಕಾರ್ಯನಿರ್ವಹಿತ್ತೆ :

ಜಿಪಿಎಸ್ ಆಧಾರಿತ ಜಿಯೋ ಇನ್ಸಿಂಗ್ ಮೂಲಕ ದತ್ತಾಂಶಗಳನ್ನು ಪರಿಶೀಲಿಸಿ, ಈ ಆ್ಯಪ್ ಚಾಲಕನಿಗೆ ಕರಾಳ ತಾಣ ತಲುಪುವ ಮುನ್ನವೇ ಎಚ್ಚರಿಕೆಯ ಸಿಗ್ನಲ್ ನೀಡುತ್ತದೆ. ಈಗಾಗಲೇ ಗುರುತಿಸಲ್ಪಟ್ಟ ಕರಾಳ ತಾಣಗಳ ಜೊತೆಗೆ, ಚಾಲಕರೂ ಕೂಡ ‘ಸೂಕ್ಷ್ಮ’ ಹಾಗೂ ‘ಅತಿಸೂಕ್ಷ್ಮ’ ತಾಣಗಳನ್ನು ತಾವೇ ಗುರುತಿಸಿ ಅವುಗಳನ್ನೂ ಈ ಆ್ಯಪ್‍ಗೆ ಸೇರಿಸಬಹುದು. ಇದರ ವ್ಯಾಪ್ತಿಯನ್ನು ಹೆದ್ದಾರಿಯ ನಿರ್ವಹಣೆಯ ಹೊಣೆಹೊತ್ತವರು ಹಾಗೂ ಬಳಕೆದಾರರೂ ಒಟ್ಟೊಟ್ಟಿಗೇ ವಿಸ್ತರಿಸಬಹುದು ಎಂದು ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಡಾ.ಹೆಚ್.ಎ. ಸಂಜಯ್ ತಿಳಿಸಿದರು.

ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಮಾಹಿತಿ ತಂತ್ರಜ್ಞಾನ ವಿಭಾಗದ ವಿದ್ಯಾರ್ಥಿ ಹಾಗೂ ಸಂಶೋದನಾ ತಂಡದ ದೀಪ್ತಾ ಮಾತನಾಡಿ, 2015ರ ಅಂಕಿ-ಅಂಶಗಳ ಪ್ರಕಾರ ಭಾರತದ ಹೆದ್ದಾರಿಗಳಲ್ಲಿ 726 ಸ್ಥಳಗಳನ್ನು ‘ಕರಾಳ ತಾಣ’ (ಬ್ಲ್ಯಾಕ್‍ಸ್ಪಾಟ್‍) ಸ್ಥಳಗಳೆಂದು ಗುರುತಿಸಿತ್ತು. ಆ ವರ್ಷದಲ್ಲಿ ಈ ಅಪಘಾತ ಸ್ಥಳಗಳಿಂದ ಸಂಭವಿಸಿದ ಅಪಘಾತಗಳ ಸಂಖ್ಯೆ 2,62,786. ಈ ಅಂಕಿ-ಅಂಶಗಳೇ ನಮ್ಮನ್ನು ಬೆಚ್ಚಿ ಬೀಳಿಸಿ ಈ ವಿಶೇಷ ಆ್ಯಪ್ಅನ್ನು ಸಂಶೋಧಿಸಲು ಪ್ರೇರೇಪಿಸಿತು ಎಂದು ತಿಳಿಸಿದರು.

ABOUT THE AUTHOR

...view details