ಕರ್ನಾಟಕ

karnataka

ETV Bharat / state

ಭಕ್ತನ ಪಂಚೆಯಲ್ಲಿ ಅಡಗಿತ್ತು ಪುರಾತನ ಪಂಚಲೋಹ ವಿಗ್ರಹ ! - ancient Panchaloha idol theaft by theive news

ರಾಜಾನುಕುಂಟೆಯ ಶ್ರೀರಾಮನಹಳ್ಳಿ ನಿವಾಸಿಯಾಗಿರುವ ರಘು ಎಂಬ ವ್ಯಕ್ತಿ, ಹುಣಸಮಾರನಹಳ್ಳಿ ಗ್ರಾಮದ ಚಂದ್ರಮೌಳೇಶ್ವರಮಠದಲ್ಲಿದ್ದ ಹಳೆಯ 15 ರಿಂದ 20 ಕೆಜಿ ಮೌಲ್ಯದ ರೇಣುಕಾಚಾರ್ಯರ ಪಂಚ ಲೋಹದ ಮೂರ್ತಿಯನ್ನು ಪಂಚೆಯಲ್ಲಿ ಸುತ್ತಿಕೊಂಡು ಕಳ್ಳತನ ಮಾಡಿದ್ದಾನೆ.

ಪುರಾತನ ಪಂಚಲೋಹ ವಿಗ್ರಹ ಕಳ್ಳತನ ಮಾಡಿದ ಕಳ್ಳ
ಪುರಾತನ ಪಂಚಲೋಹ ವಿಗ್ರಹ ಕಳ್ಳತನ ಮಾಡಿದ ಕಳ್ಳ

By

Published : Dec 14, 2020, 7:59 PM IST

ಬೆಂಗಳೂರು: 150 ವರ್ಷಗಳ ಕಾಲ ಹಳೆಯದಾದ ರೇಣುಕಾಚಾರ್ಯರ ಪಂಚಲೋಹದ ವಿಗ್ರಹವನ್ನು ಹಾಡಹಾಗಲೇ ಕಳ್ಳತನ ಮಾಡಿದ್ದ ಆರೋಪದಡಿ ಓರ್ವ ವ್ಯಕ್ತಿಯನ್ನು ಚಿಕ್ಕಜಾಲ ಪೊಲೀಸರು ಬಂಧಿಸಿದ್ದಾರೆ.

ಪುರಾತನ ಪಂಚಲೋಹ ವಿಗ್ರಹ ಕಳ್ಳತನ ಮಾಡಿದ ಕಳ್ಳ

ಹುಣಸಮಾರನಹಳ್ಳಿ ಗ್ರಾಮದ ಚಂದ್ರಮೌಳೇಶ್ವರಮಠದ ಶ್ರೀ ಗುರುನಂಜೇಶ್ವರ ಶಿವಚಾರ್ಯ ಸ್ವಾಮೀಜಿ ನೀಡಿದ ದೂರಿನ ಮೇರೆಗೆ ರಘು ಅಲಿಯಾಸ್ ಸೈಕೋ ಎಂಬಾತನನ್ನು ಬಂಧಿಸಲಾಗಿದೆ. ರಾಜಾನುಕುಂಟೆಯ ಶ್ರೀರಾಮನಹಳ್ಳಿ ನಿವಾಸಿಯಾಗಿರುವ ರಘು ಈಗಾಗಲೇ ಬಂಧನಕ್ಕೆ ಒಳಗಾಗಿ ಜಾಮೀನು ಪಡೆದು ಹೊರಬಂದಿದ್ದ. ಅಕ್ರಮವಾಗಿ ಹಣಗಳಿಕೆ ಮಾಡಿ, ಆನ್​ಲೈನ್​ನಲ್ಲಿ ದುಬಾರಿ ಬೆಲೆಯ ಮೊಬೈಲ್ ಹಾಗೂ ಎಲೆಕ್ಟ್ರಾನಿಕ್ ವಸ್ತುಗಳನ್ನು ತರಿಸಿಕೊಳ್ಳುತ್ತಿದ್ದ. ಬಳಿಕ ಈತ ಸ್ನೇಹಿತರಿಗೆ ಹಾಗೂ ಸಂಬಂಧಿಕರಿಗೆ ಆರ್ಡರ್ ಮಾಡಿದ ವಸ್ತುಗಳನ್ನು ನೀಡುವುದಾಗಿ ಹೇಳಿ ಎಸ್ಕೇಪ್ ಆಗುತ್ತಿದ್ದ. ಈ ಸಂಬಂಧ ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪುರಾತನ ಪಂಚಲೋಹ ವಿಗ್ರಹ ಕಳ್ಳತನ ಮಾಡಿದ ಕಳ್ಳ

ಈ ನಡುವೆ ಹುಣಸಮಾರನಹಳ್ಳಿಯಲ್ಲಿರುವ ಚಂದ್ರಮೌಳೇಶ್ವರ ಮಠಕ್ಕೆ ಆಗಾಗ ಹೋಗಿ ಬರುತ್ತಿದ್ದ. ಮಠದಲ್ಲಿರುವ ಹಳೆಯ 15ರಿಂದ 20 ಕೆಜಿ ಮೌಲ್ಯದ ರೇಣುಕಾಚಾರ್ಯ ಮೂರ್ತಿಯ ಪಂಚ ಲೋಹ ನೋಡಿ ಕಳ್ಳತನಕ್ಕೆ ಸ್ಕೆಚ್ ಹಾಕಿದ್ದಾನೆ. ನ. 25ರಂದು ಸಾಮಾನ್ಯನಂತೆ ಮಠಕ್ಕೆ ಬಂದಿದ್ದಾನೆ. ಚಹರೆ ಗುರುತು ಹಿಡಿಯಬಾರದೆಂದು ಮಠದೊಳಗೆ ಹೆಲ್ಮೆಟ್ ಧರಿಸಿ ಗರ್ಭಗುಡಿಯಲ್ಲಿರುವ ಪಂಚಲೋಹ ವಿಗ್ರಹವನ್ನು ಪಂಚೆಯಿಂದ ಸುತ್ತಿಕೊಂಡು ಯಾರಿಗೂ ಅನುಮಾನ ಬರದಂತೆ ಕಳ್ಳತನ ಮಾಡಿ ಬೈಕ್​ನಲ್ಲಿ ಪರಾರಿಯಾಗಿದ್ದಾನೆ.

ಓದಿ:ಸವದತ್ತಿ ಯಲ್ಲಮ್ಮ ದೇವಸ್ಥಾನದ ಆವರಣದಲ್ಲಿ ಅಕ್ರಮ ಕಟ್ಟಡ: ಇಒಗೆ ಹೈಕೋರ್ಟ್ ನೋಟಿಸ್

ಬಳಿಕ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಪಂಚಲೋಹವನ್ನು ಮನೆಯಲ್ಲಿ ಇರಿಸಿಕೊಂಡಿದ್ದ ಆರೋಪಿ, ರೈಸ್ ಪುಲ್ಲಿಂಗ್ ಮಾಡುವವರಿಗೆ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ABOUT THE AUTHOR

...view details