ಬೆಂಗಳೂರು:ರಾಜ್ಯ ವಿಧಾನಸಭಾ ಚುನಾವಣಾ ಪ್ರಚಾರ ಕಾರ್ಯ ಅಂತಿಮ ಘಟ್ಟದ ಸನಿಹಕ್ಕೆ ಬಂದಿದ್ದು ಮುಂದಿನ ಒಂದು ವಾರ ಪೂರ್ತಿ ರಾಜ್ಯದಲ್ಲೇ ಮೊಕ್ಕಾಂ ಹೂಡಲು ಕೇಂದ್ರ ಗೃಹ ಸಚಿವ ಅಮಿತ್ ಶಾ ನಿರ್ಧರಿಸಿದ್ದಾರೆ. ಬಹಿರಂಗ ಪ್ರಚಾರಕ್ಕೆ ತೆರೆ ಬೀಳುವವರೆಗೂ ಬೇರೆಲ್ಲಾ ಕಾರ್ಯ ಸ್ಥಗಿತಗೊಳಿಸಿ ರಾಜ್ಯದಲ್ಲೇ ಇದ್ದು ಕೊನೆ ಕ್ಷಣದವರೆಗೂ ತಂತ್ರಗಾರಿಕೆ ನಡೆಸಲಿದ್ದಾರೆ.
ಒಂದು ವಾರ ಬೆಂಗಳೂರಲ್ಲೇ ಇದ್ದು ಎಲೆಕ್ಷನ್ ಗೆಲ್ಲಲು ಕೇಂದ್ರ ಗೃಹ ಸಚಿವ ಅಮಿತ್ ಶಾ ರಣತಂತ್ರ ರೂಪಿಸಿದ್ದು, ನಿನ್ನೆಯಿಂದ ಬೆಂಗಳೂರಲ್ಲೇ ಉಳಿದ್ದಾರೆ. ಮೇ 7ರ ತನಕ ರಾಜ್ಯದಲ್ಲೇ ವಾಸ್ತವ್ಯಕ್ಕೆ ಮುಂದಾಗಿದ್ದು, ಮೇ 7ರ ಸಂಜೆ ದೆಹಲಿಗೆ ವಾಪಸ್ ಆಗಲಿದ್ದಾರೆ. ಈ ವಾರ ರಾಜ್ಯ ಬಿಟ್ಟು ಬೇರೆ ಎಲ್ಲಿಯೂ ಹೋಗದೇ ಇಲ್ಲೇ ಇದ್ದು ರಣತಂತ್ರ ರೂಪಿಸಲಿದ್ದಾರೆ. ಚುನಾವಣೆ ಗೆಲ್ಲಲು ಈ ಆರು ದಿನಗಳು ನಿರ್ಣಾಯಕವಾಗಿದ್ದು, ಈ ಒಂದು ವಾರ ಎಲ್ಲ ಪಕ್ಷಗಳಿಗೆ ಈ ಆರು ದಿನಗಳು ಮಹತ್ವದ ದಿನಗಳಾಗಿವೆ. ಹೀಗಾಗಿ ಈ ದಿನಗಳಲ್ಲಿ ವರ್ಕೌಟ್ ಮಾಡಿದರೆ ಅದರಿಂದ ಚುನಾವಣೆ ಗೆಲ್ಲಲು ಸಾಧ್ಯವಿದೆ ಎಂಬ ಲೆಕ್ಕಾಚಾರ ಆಯಾಯ ಪಕ್ಷಗಳ ನಾಯಕರದ್ದಾಗಿದೆ.
ಹೀಗಾಗಿ ಕೊನೆಯ ದಿನಗಳಂದು ತಮ್ಮದೇ ಆದ ತಂತ್ರಗಾರಿಕೆ ಮೂಲಕ ಗೆಲ್ಲಲು ಮುಂದಾದ ಅಮಿತ್ ಶಾ ಹೊಸ ರಣತಂತ್ರ ರೂಪಿಸುತ್ತಿದ್ದಾರೆ. ಈ ವಾರ ಎಲ್ಲೆಲ್ಲಿ ಪಕ್ಷಕ್ಕೆ ಹಿನ್ನೆಡೆ ಇದೆ. ಅಲ್ಲಿನ ನಾಯಕರ ಮೂಲಕ ಪಕ್ಷದ ಅಭ್ಯರ್ಥಿ ಗೆಲ್ಲಿಸಲು ತಾವೇ ಖುದ್ದಾಗಿ ಲೋಪ ಸರಿಪಡಿಸಿ ಗೆಲ್ಲುವ ಹಾದಿಗೆ ತರುವಂತ ವ್ಯವಸ್ಥೆಯನ್ನು ನಿರ್ವಹಣೆ ಮಾಡಲಿದ್ದಾರೆ ಎನ್ನಲಾಗಿದೆ.
ಜಾತಿ ಧರ್ಮ ಮುಂದಿಟ್ಟು ರಾಜಕಾರಣ ಮಾಡುತ್ತಿರುವ ಬಿಜೆಪಿ- ಗೆಹ್ಲೋಟ್ ಟೀಕೆ :ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ದೇಶದ ಆಡಳಿತಕ್ಕಿಂತ ಚುನಾವಣೆ ಮುಖ್ಯವಾಗಿದೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಟೀಕಾ ಪ್ರಹಾರ ನಡೆಸಿದ್ದಾರೆ.