ಕರ್ನಾಟಕ

karnataka

ETV Bharat / state

ಕೊರೊನಾ‌ ನಡುವೆಯೂ ಸಂಕ್ರಾತಿ ಹಬ್ಬಕ್ಕೆ ನಗರದ ಜನತೆಯಿಂದ ಭರ್ಜರಿ ತಯಾರಿ

ಸಂಕ್ರಾಂತಿ ಹಬ್ಬ ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ಆಚರಿಸಲಾಗುವ ಒಂದು ಹಬ್ಬವಾಗಿದೆ. ಪೈರು ತೆಗೆಯುವ ಸಂದರ್ಭದಲ್ಲಿ ಆಚರಿಸಲಾಗುವ ಸಂಕ್ರಾಂತಿ ಹಬ್ಬ ಸಮೃದ್ಧಿಯ ಸಂಕೇತವಾಗಿದೆ. ಎಳ್ಳು ಬೆಲ್ಲವನ್ನು ಮನೆ ಮನೆಗೆ ಹಂಚುವುದೇ ಈ ಹಬ್ಬದ ಮುಖ್ಯ ವಿಶೇಷತೆಯಾಗಿದೆ..

ಸಂಕ್ರಾತಿ ಹಬ್ಬಕ್ಕೆ ನಗರದ ಜನತೆಯಿಂದ ಭರ್ಜರಿ ತಯಾರಿ
ಸಂಕ್ರಾತಿ ಹಬ್ಬಕ್ಕೆ ನಗರದ ಜನತೆಯಿಂದ ಭರ್ಜರಿ ತಯಾರಿ

By

Published : Jan 13, 2021, 8:47 PM IST

Updated : Jan 13, 2021, 10:52 PM IST

ಬೆಂಗಳೂರು‌ :ಹಬ್ಬ ಅಂದ್ರೇನೆ ಎಲ್ಲೆಲ್ಲೂ ಸಂಭ್ರಮ, ಸಡಗರ. ಈಗಾಗಲೇ ಸಂಕ್ರಾಂತಿ ಹಬ್ಬಕ್ಕೆ ಕ್ಷಣಗಣನೆ ಶುರುವಾಗಿದೆ. ಕೊರೊ‌ನಾ‌ದ ನಡುವೆಯೂ ಹಬ್ಬಕ್ಕೆ ನಗರದ ಜನತೆ ಬಲು ಜೋರಾಗಿಯೇ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಸಂಕ್ರಾತಿ ಹಬ್ಬಕ್ಕೆ ನಗರದ ಜನತೆಯಿಂದ ಭರ್ಜರಿ ತಯಾರಿ

ಎಳ್ಳು, ಬೆಲ್ಲದ ಪ್ಯಾಕೇಟ್, ಕಬ್ಬು, ಬೆಲ್ಲದ ಅಚ್ಚುಗಳ ಜೋಡಣೆ. ಸಿಲಿಕಾನ್ ಸಿಟಿಯಲ್ಲಿ ಎಲ್ಲಿ ನೋಡಿದ್ರೂ ಸಂಕ್ರಾಂತಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಮಾರುಕಟ್ಟೆಗೆ ಕಲರ್​​ಫುಲ್ ಕಬ್ಬು,ಎಳ್ಳು-ಬೆಲ್ಲ ಇತ್ಯಾದಿ ಪ್ಯಾಕೇಟ್​​ಗಳು ಬಂದಿದ್ದು, ಅಗತ್ಯ ಸಾಮಗ್ರಿಗಳ ಮಾರಾಟವೂ ಜೋರಾಗಿ ನಡೆಯುತ್ತಿದೆ.

ಓದಿ:ಶ್ಯಾಡೋ ಲೀಫ್ ಆರ್ಟ್​ನಲ್ಲಿ ಮೂಡಿದ ವಿವೇಕಾನಂದರ ವಿಶೇಷ ಕಲಾಕೃತಿ

ಸಂಕ್ರಾಂತಿ ಹಬ್ಬ ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ಆಚರಿಸಲಾಗುವ ಒಂದು ಹಬ್ಬವಾಗಿದೆ. ಪೈರು ತೆಗೆಯುವ ಸಂದರ್ಭದಲ್ಲಿ ಆಚರಿಸಲಾಗುವ ಸಂಕ್ರಾಂತಿ ಹಬ್ಬ ಸಮೃದ್ಧಿಯ ಸಂಕೇತವಾಗಿದೆ. ಎಳ್ಳು ಬೆಲ್ಲವನ್ನು ಮನೆ ಮನೆಗೆ ಹಂಚುವುದೇ ಈ ಹಬ್ಬದ ಮುಖ್ಯ ವಿಶೇಷತೆಯಾಗಿದೆ.

ನಗರದಾದ್ಯಂತ ಈಗಾಗಲೇ ಸಂಕ್ರಾಂತಿ ಹಬ್ಬಕ್ಕೆ ಸಿದ್ಧತೆ ಜೋರಾಗಿ ನಡೆದಿದೆ. ನಗರದ ಕೆ.‌ ಆರ್. ಮಾರುಕಟ್ಟೆ, ಮಲ್ಲೇಶ್ವರಂ, ಬಸವನ ಗುಡಿ ಸೇರಿದಂತೆ ಹಲವಾರು ಜಾಗಗಳಲ್ಲಿ ಕಬ್ಬು, ಎಳ್ಳು, ಬೆಲ್ಲ ಇತ್ಯಾದಿ ಅಗತ್ಯ ಸಾಮಗ್ರಿ ವಸ್ತುಗಳ ಮಾರಾಟ ಬಲು ಜೋರಾಗಿದೆ.

Last Updated : Jan 13, 2021, 10:52 PM IST

ABOUT THE AUTHOR

...view details