ಕರ್ನಾಟಕ

karnataka

ETV Bharat / state

ಪರಿಷತ್​ನಲ್ಲಿ ಕರ್ನಾಟಕ ಪೌರಾಡಳಿತ ಸಭೆಗಳ ತಿದ್ದುಪಡಿ ವಿಧೇಯಕಕ್ಕೆ ಅನುಮೋದನೆ - ಕರ್ನಾಟಕ ಪೌರಾಡಳಿತ ಸಭೆಗಳ ತಿದ್ದುಪಡಿ ವಿಧೇಯಕಕ್ಕೆಪರಿಷತ್​ನಲ್ಲಿ ಅನುಮೋದನೆ

ಕರ್ನಾಟಕ ಪೌರಾಡಳಿತ ಸಭೆಗಳ ತಿದ್ದುಪಡಿ ವಿಧೇಯಕವನ್ನು ಸಭಾ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ವಿಧಾನ ಪರಿಷತ್​ನಲ್ಲಿ ಮಂಡನೆ ಮಾಡಿದ್ರು. ಈ ವಿಧೇಯಕಕ್ಕೆ ಅನುಮೋದನೆ ಸಹ ದೊರೆತಿದೆ.

ಕರ್ನಾಟಕ ಪೌರಾಡಳಿತ ಸಭೆಗಳ ತಿದ್ದುಪಡಿ ವಿಧೇಯಕ ಮಂಡನೆ
ಕರ್ನಾಟಕ ಪೌರಾಡಳಿತ ಸಭೆಗಳ ತಿದ್ದುಪಡಿ ವಿಧೇಯಕ ಮಂಡನೆ

By

Published : Mar 17, 2021, 6:51 PM IST

ಬೆಂಗಳೂರು: ವಿಧಾನ ಪರಿಷತ್​ನಲ್ಲಿ ಕರ್ನಾಟಕ ಪೌರಾಡಳಿತ ಸಭೆಗಳ ತಿದ್ದುಪಡಿ ವಿಧೇಯಕ ಮಂಡನೆಯಾಗಿ ಅನುಮೋದನೆಗೊಂಡಿತು.

ವಿಧಾನ ಪರಿಷತ್​ನಲ್ಲಿ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ ವಿಧೇಯಕ ಮಂಡಿಸಿ, ಕೇವಲ ಒಂದು ಸಣ್ಣ ತಿದ್ದುಪಡಿ ಇದೆ. ಕುಷ್ಠರೋಗಕ್ಕೆ ಸಂಬಂಧಿಸಿದ ತಿದ್ದುಪಡಿ ಆಗಿದೆ. ಕೇವಲ ಕುಷ್ಠರೋಗವನ್ನು ಸಂಪೂರ್ಣ ಗುಣಪಡಿಸಬಹುದು, ಇವರನ್ನು ಹೊರಗಿಡುವ ಅವಶ್ಯಕತೆ ಇಲ್ಲ. ಆದ್ದರಿಂದ ಕುಷ್ಠರೋಗ ಅನ್ನುವ ಪದ ಬಳಕೆ ನಿಷೇಧಿಸುವ ನಿರ್ಣಯ ಕೈಗೊಳ್ಳಲಾಗಿದೆ. ಇದರಿಂದ ಕುಷ್ಠರೋಗ ಪದ ಬಳಕೆಯನ್ನು ನಿಷೇಧಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ವಿವರಣೆ ನೀಡಿದರು.

ಓದಿ:ಕರ್ನಾಟಕ ಲೇವಾದೇವಿದಾರರ ತಿದ್ದುಪಡಿ ವಿಧೇಯಕ 2020-21ಕ್ಕೆ ವಿಧಾನ ಪರಿಷತ್​ನಲ್ಲಿ ಅಂಗೀಕಾರ

ರೋಗಪೀಡಿತ ವ್ಯಕ್ತಿಯ ರೋಗದ ಬಗ್ಗೆ ಕೀಳರಿಮೆ ತೆಗೆದುಹಾಕುವ ಉದ್ದೇಶದಿಂದ ಈ ತಿದ್ದುಪಡಿ ತರಲಾಗಿದೆ. ರೋಗದ ಬಗ್ಗೆ ಹಾಗೂ ರೋಗಿಯ ಬಗ್ಗೆ ಸಮಾಜದಲ್ಲಿರುವ ಭಾವನೆ‌ ಬದಲಿಸಲು ಈ ಪ್ರಯತ್ನ ಮಾಡಿದ್ದೇವೆ ಎಂದು ಸಭಾ ನಾಯಕರು ವಿವರಿಸಿದರು.

For All Latest Updates

ABOUT THE AUTHOR

...view details