ಬೆಂಗಳೂರು :ಒಂದು ಕಡೆ ತಮ್ಮ ನೆಚ್ಚಿನ ನಟನ ನೋಡಲು ಕಂಠೀರವ ಕ್ರೀಡಾಂಗಣದಲ್ಲಿ ಜನ ಸಾಗರವೇ ಹರಿದು ಬರುತ್ತಿದೆ. ಇತ್ತ ಮಲ್ಯ ರಸ್ತೆಯಿಂದ ಹೋಗುವ ಆ್ಯಂಬುಲೆನ್ಸ್‌ಗಳು ಟ್ರಾಫಿಕ್ನಲ್ಲಿ ಸಿಲುಕಿ ನಿಂತಲ್ಲೇ ನಿಲ್ಲುವಂತಾಯ್ತು.
ಜನಸಾಗರ ಹಾಗೂ ಟ್ರಾಫಿಕ್ ಮಧ್ಯೆ ಸಿಲುಕಿದ ಆ್ಯಂಬುಲೆನ್ಸ್‌ಗಳು : ಹೊರ ಬರಲಾಗದೇ ಪರದಾಟ.. - ಟ್ರಾಫಿಕ್ ಮಧ್ಯೆ ಸಿಲುಕಿದ ಆಂಬುಲೆನ್ಸ್ಗಳು
ತಮ್ಮ ಮೆಚ್ಚಿನ ನಟನನ್ನ ನೋಡಲು ಜನರು ರಸ್ತೆಯಲ್ಲಿ ಓಡಿ ಬರುತ್ತಿದ್ದ ದೃಶ್ಯ ಕಂಡು ಬಂದಿತು. ಜನಸಂದಣಿಯನ್ನ ಕಂಟ್ರೋಲ್ ಮಾಡಲು ಆಗದೇ ಪೊಲೀಸರು ಲಘು ಲಾಠಿಚಾರ್ಜ್ ಮಾಡಿದರೂ, ಜನರು ಡೋಂಟ್ ಕೇರ್ ಎನ್ನದೇ ಒಳಗೆ ನುಗ್ಗುತ್ತಿದ್ದ ದೃಶ್ಯ ಕಂಡು ಬಂದಿತು..
ರಸ್ತೆಯ ಅರ್ಧ ಭಾಗ ಜನರಿಂದ ತುಂಬಿದ್ದರೆ, ಇನ್ನಾರ್ಧ ಭಾಗ ಜನರು ತಂದು ನಿಲ್ಲಿಸಿದ್ದ ವಾಹನಗಳು ತುಂಬಿದ್ದವು. ಇಷ್ಟೆಲ್ಲೆದರ ನಡುವೆ ವಾಹನಗಳ ಸಂಚಾರ, ಇದರ ಮಧ್ಯೆ ಸಿಲುಕಿಕೊಂಡ ಆ್ಯಂಬುಲೆನ್ಸ್‌ಗಳು ಹೊರ ಬರಲು ಆಗದೇ ಪರದಾಡಬೇಕಾಯ್ತು. ಕಸ್ತೂರಬಾ ರಸ್ತೆ, ಸೆಂಟ್ ಜೋಸೆಪ್ ರಸ್ತೆ ಹಾಗೂ ಕಾರ್ಪೊರೇಷನ್ ರಸ್ತೆಗಳೆಲ್ಲವೂ ಟ್ರಾಫಿಕ್‌ನಿಂದಾಗಿ ಕೂಡಿದ್ದವು.
ಲಘು ಲಾಠಿ ಚಾರ್ಜ್‌ಗೂ ಡೋಂಟ್ ಕೇರ್ :ತಮ್ಮ ಮೆಚ್ಚಿನ ನಟನನ್ನ ನೋಡಲು ಜನರು ರಸ್ತೆಯಲ್ಲಿ ಓಡಿ ಬರುತ್ತಿದ್ದ ದೃಶ್ಯ ಕಂಡು ಬಂದಿತು. ಜನಸಂದಣಿಯನ್ನ ಕಂಟ್ರೋಲ್ ಮಾಡಲು ಆಗದೇ ಪೊಲೀಸರು ಲಘು ಲಾಠಿಚಾರ್ಜ್ ಮಾಡಿದರೂ, ಜನರು ಡೋಂಟ್ ಕೇರ್ ಎನ್ನದೇ ಒಳಗೆ ನುಗ್ಗುತ್ತಿದ್ದ ದೃಶ್ಯ ಕಂಡು ಬಂದಿತು.