ಬೆಂಗಳೂರು: ಆ್ಯಂಬುಲೆನ್ಸ್ ಚಾಲಕನ ಎಡವಟ್ಟಿನಿಂದ ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ನಗರದಲ್ಲಿ ನಡೆದಿದೆ.
ಆ್ಯಂಬುಲೆನ್ಸ್ ಚಾಲಕನ ಎಡವಟ್ಟು: ಇಬ್ಬರು ಯುವಕರು ಸಾವು - ಇಬ್ಬರು ಯುವಕರು ಸಾವು
ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಮುಗಿಸಿಕೊಂಡು ಬೈಕ್ನಲ್ಲಿ ಬರುತ್ತಿದ್ದ ವೇಳೆ ವೇಗವಾಗಿ ಬಂದಪ್ಪಳಿಸಿದ ಆ್ಯಂಬುಲೆನ್ಸ್ ಬೈಕ್ಗೆ ಡಿಕ್ಕಿ ಹೊಡೆದು ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ನಡೆದಿದೆ.

ಶಹಬಾಸ್ ಪಾಷ (20), ತನ್ವೀರ್ (17) ಮೃತ ಯುವಕರು. ನೀಲಸಂದ್ರದ ದರ್ಗಾದಲ್ಲಿ ಪ್ರಾರ್ಥನೆ ಮುಗಿಸಿಕೊಂಡು ಯುವಕರು ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದರು. ಈ ವೇಳೆ ಬನ್ನೇರುಘಟ್ಟ ರಸ್ತೆ ಮೋರಿ ಕಡೆಯಿಂದ ವೇಗವಾಗಿ ಬಂದ ಆಂಬುಲೆನ್ಸ್ ಎದುರಿನಲ್ಲಿ ಬರುತ್ತಿದ್ದ ಯುವಕರ ಬೈಕ್ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಗಂಬೀರವಾಗಿ ಗಾಯಗೊಂಡ ಇಬ್ಬರಿಗೂ ತೀವ್ರ ರಕ್ತ ಸ್ರಾವ ಉಂಟಾಗಿದೆ. ತಕ್ಷಣ ಸಾರ್ವಜನಿಕರು ಯುವಕರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರಾದ್ರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಘಟನೆ ಬಳಿಕ ಆ್ಯಂಬುಲೆನ್ಸ್ ವಾಹನ ಚಾಲಕ ಪರಾರಿಯಾಗಿದ್ದು, ಅಶೋಕನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.