ಬೆಂಗಳೂರು: ಕೆಲ ಸಂಸ್ಥೆಗಳು ಜನರಿಗೆ ವಂಚನೆ ಮಾಡುವಲ್ಲಿ ರೇಸಿಗೆ ಬಿದ್ದಂತೆ ಕಾಣುತ್ತಿದೆ. ಇದೀಗ ಅದೇ ಲಿಸ್ಟಿಗೆ ಹೊಸ ನಾಮದ ಕಂಪನಿಯೊಂದು ಸೇರಿದೆ.
ಬೆಂಗಳೂರಲ್ಲಿ ಮತ್ತೊಂದು ವಂಚನೆ ಆರೋಪ... ಇಂತಹ ಕಂಪನಿಗಳಿಗೆ ಕಡಿವಾಣ ಯಾವಾಗ? - kannadanews
AIMMS ಎಂಬ ಸಂಸ್ಥೆ ಬರೋಬ್ಬರಿ ಸಾವಿರ ಕೋಟಿಗೂ ಹೆಚ್ಚಿನ ಹಣವನ್ನ ರಾತ್ರೋರಾತ್ರಿ ಲೂಟಿ ಮಾಡಿ ಹೂಡಿಕೆದಾರ ಜನರಿಗೆ ನಾಮ ಹಾಕಿದೆ ಎಂಬ ಆರೋಪ ಕೇಳಿಬಂದಿದೆ.
2017ರಲ್ಲಿ ಆಯುಬ್, ಇಲಿಯಾಸ್, ಮುಜಾಹಿದ್, ಶಾಹಿದ್, ಮುದಸ್ಸಿರ್ ಎಂಬ ಐದು ಜನರ ಪಾಲುದಾರಿಕೆಯಲ್ಲಿ ಪ್ರಾರಂಭವಾದ AIMMS ಎಂಬ ಸಂಸ್ಥೆ ತನ್ನಲ್ಲಿ ಹೂಡಿಕೆ ಮಾಡಿದ್ದ ಬರೋಬ್ಬರಿ ಸಾವಿರ ಕೋಟಿಗೂ ಹೆಚ್ಚಿನ ಹಣವನ್ನ ರಾತ್ರೋರಾತ್ರಿ ಲೂಟಿ ಮಾಡಿ ಜನರಿಗೆ ನಾಮ ಹಾಕಿದೆ ಎಂಬ ಆರೋಪ ಕೇಳಿಬಂದಿದೆ. ಬಡ ಮುಸ್ಲಿಂ ಮಹಿಳೆಯರನ್ನೇ ಟಾರ್ಗೆಟ್ ಮಾಡಿದ್ದ AIMMS ದೇವರ ಹೆಸರಲ್ಲಿ ಮುಲ್ಲಾಗಳಿಂದ ಹೇಳಿಸಿ, ನಿಮ್ಮ ಹಣಕ್ಕೆ ಮೋಸವಾಗುವುದಿಲ್ಲ. ತಿಂಗಳಿಗೆ 10 ಸಾವಿರ ಬಡ್ಡಿ ಕೊಡುತ್ತೇವೆ ಎಂದು ಒಂದೆರಡು ತಿಂಗಳು ಬಡ್ಡಿ ರುಚಿ ತೋರಿಸಿ ನಂಬಿಕೆ ಬರುವಂತೆ ಮಾಡಿ ಇದೀಗ AIMMS ಮಾಲೀಕರು ದಿಢೀರ್ ಕೈ ಎತ್ತಿದ್ದಾರೆ ಎನ್ನಲಾಗಿದೆ.
ಮರುಳು ಮಾತುಗಳನ್ನು ನಂಬಿ ಲಕ್ಷ, ಲಕ್ಷ ಹಣ ತಂದು AIMMSನಲ್ಲಿ ಸುರಿದಿದ್ದ ಜನರು, ಈಗ ಸಂಸ್ಥೆಯ ಮುಂದೆ ಕಣ್ಣೀರು ಹಾಕುತ್ತಿದ್ದಾರೆ. ತಾವು ಹೂಡಿಕೆ ಮಾಡಿದ್ದಲ್ಲದೆ ತಮ್ಮ ಪರಿಚಯಸ್ಥರಿಗೂ ಹೇಳಿ ಬಂಡವಾಳ ಹೂಡಿಸಿರುವ ಮಂದಿ ತಾವು ಹಾಳಾದೆವು, ತಮ್ಮವರನ್ನೂ ಹಾಳು ಮಾಡಿದೆವು ಎಂದು ರೋದಿಸುತ್ತಿದ್ದಾರೆ. ಅದಾಗಲೇ ದೂರು ದಾಖಲಾಗಿ, ಸಂಸ್ಥೆಯ ಮಾಲೀಕರನ್ನು ಬಂಧಿಸಲಾಗಿತ್ತು. ಆದರೆ ಈಗ ಬೇಲ್ ತೆಗೆದುಕೊಂಡು ರಾಜಾರೋಷವಾಗಿ ತಿರುಗುತ್ತಿದ್ದಾರೆ. ನಮ್ಮ ಸಂಕಟ ಕೇಳುವವರು ಯಾರು ಎಂದು ಹಣ ಕಳೆದುಕೊಂಡವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.