ಬೆಂಗಳೂರು :ಮಾಧ್ಯಮದವರೂ ಸೇರಿ ತುರ್ತುಸೇವೆ ಸಲ್ಲಿಸುವ ಸಿಬ್ಬಂದಿ ಸಂಚಾರಕ್ಕೆ ಐಡಿಕಾರ್ಡ್ ತೋರಿಸಿದರೆ ಸಾಕು, ಪೊಲೀಸ್ ಸಿಬ್ಬಂದಿ ಅವರಿಗೆ ಅಡ್ಡಿಪಡಿಸಬಾರದು ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸೂಚನೆ ನೀಡಿದ್ದಾರೆ.
ಮಾಧ್ಯಮ ಸೇರಿ ತುರ್ತುಸೇವೆ ಸಿಬ್ಬಂದಿಗೆ ಪಾಸ್ ಬೇಡ, ಐಡಿಕಾರ್ಡ್ ತೋರಿಸಿದ್ರೆ ಸಾಕು- ಭಾಸ್ಕರ್‌ರಾವ್ - ಮಾಧ್ಯಮದವರ ಸಂಚಾರಕ್ಕೆ ಐಡಿಕಾರ್ಡ್ ಸಾಕು
ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮಾಧ್ಯಮ ಸೇರಿ ತುರ್ತುಸೇವೆ ಸಲ್ಲಿಸುವ ಸಿಬ್ಬಂದಿ ಸಂಚಾರಕ್ಕೆ ಪಾಸ್ ಬೇಡ, ಐಡಿಕಾರ್ಡ್ ತೋರಿಸಿದರೆ ಸಾಕು ಎಂದಿದ್ದಾರೆ.
ಕೆಲ ಮಾಧ್ಯಮ ಮಿತ್ರರು ಕಚೇರಿ ಕೆಲಸದ ನಿಮಿತ್ತ ಹೊರಗಡೆ ಓಡಾಡುವಾಗ ಪೊಲೀಸರು ಅನಗತ್ಯ ಕಿರುಕುಳ ಉಂಟು ಮಾಡುತ್ತಿದ್ದಾರೆ ಎಂಬ ದೂರುಗಳು ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ ಇಂದು ಕಮಿಷನರ್ ವೈರ್‌ಲೆಸ್ ಮುಖಾಂತರ ಎಲ್ಲಾ ಪೊಲೀಸ್ ಠಾಣೆಗಳಿಗೆ ಸೂಚನೆ ನೀಡಿದರು. ಮಾಧ್ಯಮದವರು ಕಚೇರಿಯ ಐಡಿ ಕಾರ್ಡ್ ತೋರಿಸಿದರೆ ಸಾಕು, ಅವರಿಗೆ ಓಡಾಡಲು ಅನುವು ಮಾಡಿ ಕೊಡಬೇಕೆಂದು ನಿರ್ದೇಶನ ನೀಡಿದರು.
ಇದರ ಜೊತೆಗೆ ಕೇಂದ್ರ ಸರ್ಕಾರಿ ನೌಕರರು, ರಾಜ್ಯ ಸರ್ಕಾರಿ ನೌಕರರು, ಹೈಕೋರ್ಟ್ ಸಿಬ್ಬಂದಿ ಸಂಚಾರಕ್ಕೂ ಪಾಸ್ ಕೇಳಬಾರದು, ಅವರ ಸಂಸ್ಥೆಯ ಗುರುತಿನ ಚೀಟಿ ತೋರಿಸಿದರೆ ಸಾಕು ಎಂದು ಪೊಲೀಸ್ ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ.