ಕರ್ನಾಟಕ

karnataka

ETV Bharat / state

ಸರ್ಕಾರದ ಜೊತೆಗೆ ಸೇರಿ ಖಾಸಗಿ ಆಸ್ಪತ್ರೆಗಳೂ ಉತ್ತಮ ಸೌಲಭ್ಯ ಕಲ್ಪಿಸಬೇಕು: ಶಾಸಕ ಹ್ಯಾರಿಸ್ ಪ್ರತಿಪಾದನೆ - kannada top news

ನಗರದ ರಿಚ್‌ಮಂಡ್‌ ರಸ್ತೆಯಲ್ಲಿ ಅತ್ಯಾಧುನಿಕ, ಮಲ್ಟಿ - ಸ್ಪೆಷಾಲಿಟಿ ಆಸ್ಪತ್ರೆ ಪ್ರಾರಂಭ - ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಈಗ ಜನರಲ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಾಗಿ ಪರಿವರ್ತನೆ - ಎಲ್ಲರಿಗೂ ಆರೋಗ್ಯ ವಿಮೆ.

along-with-the-government-private-hospitals-should-also-get-involved-and-provide-better-facilities-harris
ಸರ್ಕಾರದ ಜೊತೆಗೆ ಖಾಸಗಿ ಆಸ್ಪತ್ರೆಗಳೂ ತೊಡಗಿಕೊಂಡು ಉತ್ತಮ ಸೌಲಭ್ಯ ಕಲ್ಪಿಸಬೇಕು: ಹ್ಯಾರಿಸ್

By

Published : Jan 17, 2023, 7:11 PM IST

Updated : Jan 17, 2023, 8:30 PM IST

ಸರ್ಕಾರದ ಜೊತೆಗೆ ಸೇರಿ ಖಾಸಗಿ ಆಸ್ಪತ್ರೆಗಳೂ ಉತ್ತಮ ಸೌಲಭ್ಯ ಕಲ್ಪಿಸಬೇಕು: ಶಾಸಕ ಹ್ಯಾರಿಸ್ ಪ್ರತಿಪಾದನೆ

ಬೆಂಗಳೂರು: ಯಾವ ರೀತಿ ಆರೋಗ್ಯ ಕ್ಷೇತ್ರದಲ್ಲಿ ಸೌಕರ್ಯಗಳು ಇರಬೇಕು ಎಂಬುದನ್ನು ಕೋವಿಡ್ ನಮಗೆ ಕಲಿಸಿಕೊಟ್ಟಿದೆ. ಆರೋಗ್ಯ ಕ್ಷೇತ್ರದಲ್ಲಿ ಸರ್ಕಾರದ ಜೊತೆಗೆ ಖಾಸಗಿ ಆಸ್ಪತ್ರೆಗಳೂ ತೊಡಗಿಕೊಂಡು ಉತ್ತಮ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಶಾಸಕ ಎನ್. ಎ ಹ್ಯಾರಿಸ್ ಅಭಿಪ್ರಾಯಪಟ್ಟಿದ್ದಾರೆ.

ವಿಶ್ವ ದರ್ಜೆಯ ಆರೋಗ್ಯ ಸೇವೆಗಳನ್ನು ಒದಗಿಸುವ ಪ್ರಯತ್ನದ ಭಾಗವಾಗಿ, ಫೋರ್ಟಿಸ್ ಹೆಲ್ತ್‌ಕೇರ್ ಇಂದು ನಗರದ ರಿಚ್‌ಮಂಡ್‌ ರಸ್ತೆಯಲ್ಲಿ ಅತ್ಯಾಧುನಿಕ, ಮಲ್ಟಿ - ಸ್ಪೆಷಾಲಿಟಿ ಆಸ್ಪತ್ರೆಯನ್ನು ಪ್ರಾರಂಭಿಸಿದ್ದು, ಜನರಲ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಶಾಸಕ ಹ್ಯಾರಿಸ್ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಮೊದಲ ಆಧ್ಯತೆ ಎಲ್ಲರೂ ಆರೋಗ್ಯವಂತರಾಗಿರಬೇಕು, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಾಗಿದ್ದ ಪೋರ್ಟೀಸ್ ಆಸ್ಪತ್ರೆ ಇದೀಗ ಜನರಲ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಾಗಿ ಪರಿವರ್ತನೆಯಾಗಿದೆ. ಈ ಭಾಗಕ್ಕೆ ಉತ್ತಮ ಆಸ್ಪತ್ರೆ ಅವಶ್ಯಕತೆ ಇತ್ತು, ಅದನ್ನು ನೂತನ ಆಸ್ಪತ್ರೆ ಸಮರ್ಥವಾಗಿ ತುಂಬಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಎಲ್ಲರೂ ಆರೋಗ್ಯ ವಿಮೆ ಪಡೆದುಕೊಂಡಿರಬೇಕು: ಇಂದು ವೈದ್ಯಕೀಯ ಚಿಕಿತ್ಸೆ ಪಡೆಯಲು ದುಬಾರಿ ಹಣ ಬೇಕಾಗಲಿದೆ. ಆದರೆ, ನಮ್ಮ ಜನರಿಗೆ ಇದರ ಬಗ್ಗೆ ಜಾಗೃತಿ ಸರಿಯಾಗಿ ಮೂಡಿಲ್ಲ, ಯಾಕೆ ಆರೋಗ್ಯ ವಿಮೆ ಎಂದು ಕೇಳುತ್ತಾರೆ. ಒಂದು ಬಾರಿ ಆಸ್ಪತ್ರೆಗೆ ಹೋಗಿ ಬಂದರೆ 25-50 ಸಾವಿರ ಹಣ ಖರ್ಚಾಗಲಿದೆ ಹೀಗಾಗಿ ಉತ್ತಮ ಚಿಕಿತ್ಸೆ ಪಡೆದುಕೊಳ್ಳಲು ಆರೋಗ್ಯ ವಿಮೆ ಹೊಂದಿರುವುದು ಅಗತ್ಯ ಹಾಗಾಗಿ ಎಲ್ಲರೂ ಯಾವುದಾದರೂ ಆರೋಗ್ಯ ವಿಮೆ ಮಾಡಿಸಿಕೊಳ್ಳಿ ಎಂದು ಕರೆ ನೀಡಿದರು.

500 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯನ್ನು ನಂಜಪ್ಪ ವೃತ್ತದ ಬಳಿ ನಿರ್ಮಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಲ್ಲಿ ಎರಡು ಎಕರೆ ಜಾಗದಲ್ಲಿ ಆಸ್ಪತ್ರೆ ನಿರ್ಮಾಣ ಮಾಡಬೇಕು ಎನ್ನುವ ಅಪೇಕ್ಷೆ ಇದೆ. ಸದ್ಯದಲ್ಲೇ ನಮ್ಮ ಪ್ರಸ್ತಾವನೆಗೆ ಒಪ್ಪಿಗೆ ಸಿಗಲಿದೆ. ಈ ಭಾಗದಲ್ಲಿ ಜನರ ಚಿಕಿತ್ಸೆಗೆ ಇದ್ದ ಬೌರಿಂಗ್ ಆಸ್ಪತ್ರೆ ಈಗ ವೈದ್ಯಕೀಯ ಕಾಲೇಜು ಆಸ್ಪತ್ರೆಯಾಗಿದೆ ಹಾಗಾಗಿ ಎಲ್ಲರಿಗೂ ಅಲ್ಲಿ ಹೋಗಲು ಸಾಧ್ಯವಾಗಲ್ಲ, ಒಳ್ಳೆಯ ಆಸ್ಪತ್ರೆ ಅಗತ್ಯವಿದೆ, ಈಗ ಆ ಕೊರತೆಯನ್ನು ಫೋರ್ಟಿಸ್ ಆಸ್ಪತ್ರೆ ತುಂಬಲಿದೆ ಎಂದರು.

ಬೆಂಗಳೂರು ಫೋರ್ಟಿಸ್ ಆಸ್ಪತ್ರೆಗಳ ವಹಿವಾಟು ಮುಖ್ಯಸ್ಥ ಅಕ್ಷಯ್ ಓಲೇಟಿ ಮಾತನಾಡಿ, 30 ವರ್ಷಗಳ ಕ್ಲಿನಿಕಲ್ ಉತ್ಕೃಷ್ಟತೆ ಮತ್ತು ಪರಿಣತಿಯೊಂದಿಗೆ, ಫೋರ್ಟಿಸ್ ಹೆಲ್ತ್‌ಕೇರ್ ಅನೇಕ ಜೀವಗಳನ್ನು ತಲುಪಿದೆ ಮತ್ತು ಉಳಿಸಿದೆ. ಫೋರ್ಟಿಸ್ ಬೆಂಗಳೂರು ಆಸ್ಪತ್ರೆಗಳ ಆರೋಗ್ಯ ಸೇವೆಗಳ ಕುರಿತು ರೋಗಿಗಳು ಇಟ್ಟಿರುವ ನಿರಂತರ ನಂಬಿಕೆಯೇ ನಮಗೆ ಜಾಗತಿಕ ಗುಣಮಟ್ಟದ ಅಸಾಧಾರಣ ತರಬೇತಿ ಪಡೆದ ವೈದ್ಯರು ಮತ್ತು ಶಸ್ತ್ರಚಿಕಿತ್ಸಕರ ಬೆಂಬಲದೊಂದಿಗೆ ಮತ್ತೊಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಪ್ರಾರಂಭಿಸಲು ಅನುವು ಮಾಡಿಕೊಟ್ಟಿದೆ.

ಮತ್ತೆರಡು ಆಸ್ಪತ್ರೆ ನಿರ್ಮಾಣ ಮಾಡಲಿದ್ದೇವೆ: ನಮ್ಮಲ್ಲಿರುವ ವೈದ್ಯರು, ಅರೆವೈದ್ಯಕೀಯ ಮತ್ತು ನರ್ಸಿಂಗ್ ಸಿಬ್ಬಂದಿ, ರೋಗಿಗಳಿಗೆ ತಡೆರಹಿತ ಸೌಕರ್ಯ ಮತ್ತು ಆರೈಕೆ ಒದಗಿಸುವ ಮೂಲಕ ರೋಗಿಗಳ ಕುಟುಂಬದಲ್ಲಿ ನಗು ಮೂಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಾರೆ. ಈಗಾಗಲೇ ನಗರದ ಹಲವು ಕಡೆ ನಮ್ಮ ಆಸ್ಪತ್ರೆಗಳು ಕಾರ್ಯ ನಿರ್ವಹಿಸುತ್ತಿದ್ದು, ಮತ್ತೆ ಎರಡು ಆಸ್ಪತ್ರೆಗಳನ್ನು ಹೊಸದಾಗಿ ನಿರ್ಮಿಸುವ ಪ್ರಸ್ತಾವನೆ ಇದೆ. ಸದ್ಯದಲ್ಲೇ ಇದು ಅಂತಿಮಗೊಳ್ಳಲಿದ್ದು, ಬೆಂಗಳೂರು ವ್ಯಾಪ್ತಿಯಲ್ಲಿ ಮತ್ತೆರಡು ಆಸ್ಪತ್ರೆ ನಿರ್ಮಾಣ ಮಾಡಲಿದ್ದೇವೆ ಎಂದು ಹೇಳಿದರು.

ಲಭ್ಯವಿರುವ ಚಿಕಿತ್ಸೆ ವಿವರ:50 ಪರಿಣಿತ ವೈದ್ಯರ ಬಲವಾದ ತಂಡದೊಂದಿಗೆ ಈ ಘಟಕವು ರಿಚ್‌ಮಂಡ್‌ ಟೌನ್ ಮತ್ತು ಸುತ್ತಮುತ್ತಲಿನ ನಿವಾಸಿಗಳು ಮತ್ತು ಜನರ ಆರೋಗ್ಯದ ಅಗತ್ಯತೆಗಳನ್ನು ಪೂರೈಸುತ್ತದೆ. ಆಂತರಿಕ ಔಷಧ, ಸಾಮಾನ್ಯ ಶಸ್ತ್ರಚಿಕಿತ್ಸೆ, ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ, ಬಂಜೆತನ ನಿವಾರಣೆ, ಪೀಡಿಯಾಟ್ರಿಕ್ಸ್, ಮೂಳೆಚಿಕಿತ್ಸೆ, ಮೂತ್ರಶಾಸ್ತ್ರ, ವೈದ್ಯಕೀಯ ಮತ್ತು ಸರ್ಜಿಕಲ್ ಆಂಕೊಲಾಜಿ ಮತ್ತು ನಾನ್ ಇನ್ವೇಸಿವ್ ಕಾರ್ಡಿಯಾಲಜಿ ಮತ್ತು ಇತರ ವೈದ್ಯಕೀಯ ಸೌಲಭ್ಯಗಳು ಇಲ್ಲಿ ಲಭ್ಯವಿವೆ.

24 ಗಂಟೆ ತುರ್ತು ಸೇವೆಗಳ ಜೊತೆಗೆ, ಆಸ್ಪತ್ರೆಯಲ್ಲಿ ಒಪಿಡಿ ಸೌಲಭ್ಯ, ರಕ್ತ ಸಂಗ್ರಹಣೆ, ರೋಗ ನಿರ್ಣಯ ಮತ್ತು ಪ್ರಯೋಗಾಲಯ, ವಿಕಿರಣಶಾಸ್ತ್ರ, ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸಾ ಐಸಿಯು ಮತ್ತು ತೃತೀಯ ಹಂತದ 3 ಎನ್‌ಐಸಿಯು ಸೇವೆಗಳು ಇವೆ.

ಇದನ್ನೂ ಓದಿ:ಬೆಂಗಳೂರು ಟೋಲ್​​​ಗೇಟ್​ ಅಪಘಾತ: ಪ್ರಶ್ನಿಸಿದ್ದಕ್ಕೆ ಬೈಕ್​ನಲ್ಲಿ ಎಳೆದುಕೊಂಡು ಹೋದ ಸವಾರ

Last Updated : Jan 17, 2023, 8:30 PM IST

ABOUT THE AUTHOR

...view details