ಬೆಂಗಳೂರು:ಸಿಲಿಕಾನ್ ಸಿಟಿಯ ನೂತನ ಪೊಲೀಸ್ ಆಯುಕ್ತರಾಗಿ ಅಲೋಕ್ ಕುಮಾರ್ ಅವರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ. ಇದರ ಬೆನ್ನಲ್ಲೇ ಅಲೋಕ್ ಕುಮಾರ್ ಮೊದಲ ದಿನವೇ ಪೊಲೀಸ್ ಠಾಣೆಗೆ ಭೇಟಿ ಕೊಟ್ಟಿದ್ದಾರೆ.
ಆಯುಕ್ತರಾಗಿ ಮೊದಲ ದಿನವೇ ಪೊಲೀಸ್ ಠಾಣೆಗೆ ಅಲೋಕ್ ಕುಮಾರ್ ಭೇಟಿ - police station
ಹೆಚ್ಚುವರಿ ಪೊಲೀಸ್ ಕಮಿಷನರ್ ಆಗಿದ್ದ ಅಲೋಕ್ ಕುಮಾರ್ ಅವರನ್ನು ಬಡ್ತಿ ನೀಡುವ ಮೂಲಕ ರಾಜ್ಯ ಸರ್ಕಾರ ಆಯುಕ್ತರಾಗಿ ನೇಮಿಸಿ ಆದೇಶ ಹೊರಡಿಸಿದೆ. ಇದರ ಬೆನ್ನಲ್ಲೇ ಉಪ್ಪಾರ ಪೇಟೆ ಪೊಲೀಸ್ ಠಾಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
![ಆಯುಕ್ತರಾಗಿ ಮೊದಲ ದಿನವೇ ಪೊಲೀಸ್ ಠಾಣೆಗೆ ಅಲೋಕ್ ಕುಮಾರ್ ಭೇಟಿ](https://etvbharatimages.akamaized.net/etvbharat/prod-images/768-512-3590336-159-3590336-1560837480247.jpg)
ಉಪ್ಪಾರ್ ಪೇಟೆ ಪೊಲೀಸ್ ಠಾಣೆಗೆ ಭೇಟಿ ನೀಡಿದ ಆಯುಕ್ತ ಅಲೋಕ್ ಕುಮಾರ್
ಉಪ್ಪಾರ ಪೇಟೆ ಪೊಲೀಸ್ ಠಾಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅಲೋಕ್ ಕುಮಾರ್, ನಂತರ ಸಾರ್ವಜನಿಕರನ್ನು ಭೇಟಿ ಮಾಡಿ ಸಮಸ್ಯೆಗಳ ಕುರಿತು ಚರ್ಚೆ ನಡೆಸಿದರು. ಇನ್ನು ಅವರ ಹಠಾತ್ ಭೇಟಿಯಿಂದ ಠಾಣಾ ಸಿಬ್ಬಂದಿ ಕೊಂಚ ಗಲಿಬಿಲಿಗೊಳಗಾಗಿದ್ದು ಕಂಡು ಬಂದಿತು.
ಇಂದು ಸಿಲಿಕಾನ್ ಸಿಟಿಯ ಎಲ್ಲಾ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಅಲೋಕ್ ಕುಮಾರ್ ಸಭೆ ನಡೆಸಲಿದ್ದು, ರೌಡಿಗಳ ಕಾಟಕ್ಕೆ ಬ್ರೇಕ್ ಹಾಕುವುದರ ಜೊತೆಗೆ ಕ್ರೈಂ ರೇಟ್ ಕಡಿಮೆ ಮಾಡಲಿದ್ದಾರೆ ಎನ್ನಲಾಗುತ್ತಿದೆ.ಹಾಗೆಯೇ ಕಳೆದೆರಡು ವರ್ಷಗಳಿಂದ ವಂಚನೆ ಪ್ರಕರಣಗಳು ಹೆಚ್ಚಾಗಿದ್ದು, ಎಲ್ಲಾ ಪ್ರಕರಣಗಳಿಗೂ ನ್ಯಾಯ ದೊರಕಿಸಿದ್ದರು.