ಕರ್ನಾಟಕ

karnataka

ETV Bharat / state

ಪಿಎಫ್ಐ ನಿಷೇಧ: ಸೆಪ್ಟೆಂಬರ್ ಕ್ರಾಂತಿ ಎಂದು ಬಣ್ಣಿಸಿದ ಅಲೋಕ್ ಕುಮಾರ್

5 ವರ್ಷಗಳ ಕಾಲ ಪಿಎಫ್​ಐ ಸೇರಿದಂತೆ ಅಂಗಸಂಸ್ಥೆಗಳನ್ನ ಕೇಂದ್ರ ಸರ್ಕಾರ ನಿಷೇಧಿಸಿದ್ದು, ಇದು ಸೆಪ್ಟೆಂಬರ್​​​ ಕ್ರಾಂತಿ ಎಂದು ಅಲೋಕ್​ ಟ್ವಿಟ್ಟರ್​ ಮೂಲಕ ತಿಳಿಸಿದ್ದಾರೆ.

Kn_bng_06_
ಅಲೋಕ್​ ಕುಮಾರ್​

By

Published : Sep 29, 2022, 7:18 AM IST

ಬೆಂಗಳೂರು: ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದು ರುಜುವಾದ ಹಿನ್ನೆಲೆ ಕೇಂದ್ರ ಸರ್ಕಾರ ಪಿಎಫ್ಐ ನಿಷೇಧಿಸಿ ಕ್ರಮವನ್ನು ಇದು ಸೆಪ್ಟೆಂಬರ್​​ ಕ್ರಾಂತಿ ಎಂದು ರಾಜ್ಯ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಬಣ್ಣಿಸಿದ್ದಾರೆ.

ಕಳೆದ‌ 11 ವರ್ಷಗಳ ಹಿಂದೆ ಅಂದರೆ 2011 ಸೆ.26 ರಂದು ಸಿಮಿ‌ ಸಂಘಟನೆ‌ ನಿಷೇಧಿಸಿದ್ದ ಕೇಂದ್ರ ಸರ್ಕಾರ ಇದೀಗ 2022 ಸೆ. 28ರಂದು‌‌ ಪಿಎಫ್ ಐ ಬ್ಯಾನ್ ಮಾಡಿದೆ. ಇದು ಸೆಪ್ಟಂಬರ್ ಕ್ರಾಂತಿಯಾಗಿದೆ‌. ಸಾಮಾನ್ಯ ಜನರ ಹಿತಾಸಕ್ತಿಗಳನ್ನು ಕಾಪಾಡಲು ಬದ್ಧ ಹಾಗೂ ಕಾನೂನು ಬಾಹಿರ ಚಟುವಟಿಕೆಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮದ ಭರವಸೆ ಮೂಡಿದೆ. ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಮ್ ಎಂದು ಟ್ವೀಟ್‍ನಲ್ಲಿ ತಿಳಿಸಿದ್ದಾರೆ.

ಅಲೋಕ್​ ಕುಮಾರ್​ ಟ್ವೀಟ್​

ಕಳೆದ ವಾರವಷ್ಟೇ ರಾಷ್ಟ್ರೀಯ ತನಿಖಾ ಸಂಸ್ಥೆ ದೇಶ ಸೇರಿದಂತೆ ರಾಜ್ಯದಲ್ಲಿ ಪಿಎಫ್​ಐ ಕಾರ್ಯಕರ್ತರ ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆಸಿ 100ಕ್ಕೂ ಹೆಚ್ಚು ಜನರನ್ನ ಬಂಧಿಸಿತ್ತು. ಅಲ್ಲದೇ ಎನ್​ಐಎ ದಾಳಿ ನಡೆಸಿ ವಾರ ಕಳೆಯುವಷ್ಟರಲ್ಲೇ ಎರಡನೇ ಬಾರಿಗೆ ರಾಜ್ಯದಲ್ಲಿ ಪಿಎಫ್​ಐ ಮುಖಂಡರ ಮೇಲೆ ಪೊಲೀಸರು ದಾಳಿ ನಡೆಸಿ 40ಕ್ಕೂ ಹೆಚ್ಚು ಮುಖಂಡರನ್ನ ಬಂಧಿಸಿದ್ದರು. ಇನ್ನು ಕಾನೂನು ಬಾಹಿರ ಚಟುವಟಿಕೆ ಬಾಹಿರ ತಡೆ ಕಾಯ್ದೆ ಅಡಿಯಲ್ಲಿ ಪಿಎಫ್​ಐ ಸಂಘಟನೆಯನ್ನ ನಿನ್ನೆ ಬೆಳಗ್ಗೆ ಕೇಂದ್ರ ಸರ್ಕಾರ ನಿಷೇಧಿಸಿ ಮಹತ್ವದ ಆದೇಶ ಹೊರಡಿಸಿತ್ತು.

ಇದನ್ನೂ ಓದಿ:ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಯುಎಪಿಎ ಕಾಯ್ದೆಯಡಿ ಬ್ಯಾನ್​.. ಇಲ್ಲಿದೆ ಸಂಪೂರ್ಣ ವಿವರ

ABOUT THE AUTHOR

...view details