ಕರ್ನಾಟಕ

karnataka

ETV Bharat / state

ಜಿಲ್ಲಾ ಎಸ್ಪಿಗಳಿಗೆ ಟಾಸ್ಕ್ ನೀಡಿದ‌ ಅಲೋಕ್‌ ಕುಮಾರ್: ನಿರ್ಲಕ್ಷ್ಯಿಸಿದರೆ ಶಿಸುಕ್ರಮದ ಎಚ್ಚರಿಕೆ - ಜಿಲ್ಲಾ ಎಸ್ಪಿಗಳಿಗೆ ಟಾಸ್ಕ್ ನೀಡಿದ‌ ಅಲೋಕ್‌ ಕುಮಾರ್

ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಲಾಂಡ್ ಆರ್ಡರ್ ಕಾಪಾಡುವ ಜವಾಬ್ದಾರಿ ಅಲೋಕ್‌‌ ಕುಮಾರ್ ಅವರ ಮೇಲಿದೆ. ಅಧಿಕಾರ ಸ್ವೀಕರಿಸಿದ ಬಳಿಕ ಹಂತ-ಹಂತವಾಗಿ ಜಿಲ್ಲಾ ಎಸ್ಪಿಗಳೊಂದಿಗೆ ವರ್ಚುಯಲ್ ಸಭೆ ನಡೆಸುತ್ತಿದ್ದಾರೆ. ಇನ್ನೂ ಸೂಕ್ಷ್ಮ ಪ್ರದೇಶ ಜಿಲ್ಲೆಗಳಿಗೆ ಖುದ್ದು ಭೇಟಿ‌ ನೀಡಿ‌ ಎಸ್ಪಿಗಳೊಂದಿಗೆ ಸಭೆ ನಡೆಸಿದ್ದಾರೆ‌.

ಅಲೋಕ್‌ ಕುಮಾರ್
ಅಲೋಕ್‌ ಕುಮಾರ್

By

Published : Jun 3, 2022, 10:58 PM IST

ಬೆಂಗಳೂರು: ಕಾನೂನು‌ ಸುವ್ಯವಸ್ಥೆ ಕಾಪಾಡಲು, ಕೋಮು ಸಂಘರ್ಷ ಹಾಗೂ ಹೆಚ್ಚಾಗುತ್ತಿರುವ ಅಪರಾಧ ಪ್ರಕರಣ ತಗ್ಗಿಸುವ ದೃಷ್ಟಿಯಿಂದ ಜಿಲ್ಲಾ ಎಸ್ಪಿಗಳಿಗೆ ರಾಜ್ಯ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್‌ ಕುಮಾರ್ ಹೊಸ ಟಾಸ್ಕ್ ನೀಡಿದ್ದಾರೆ.

ಜಿಲ್ಲಾ ವ್ಯಾಪ್ತಿಯಲ್ಲಿ‌ ನಡೆಯುವ ಅಪರಾಧ ಪ್ರಕರಣಗಳ ಬಗ್ಗೆ ಆಯಾ ಎಸ್ಪಿ‌‌ ಮಾಹಿತಿ‌ ತಿಳಿದುಕೊಂಡಿರಬೇಕು. ಗಂಭೀರ ಅಪರಾಧ ಕೃತ್ಯಗಳು ನಡೆದಾಗ‌ ಕಡ್ಡಾಯವಾಗಿ ಸ್ಥಳಕ್ಕೆ ಹೋಗಬೇಕು. ಅಹಿತಕರ ಘಟನೆ ನಡೆದಾಗ ಸ್ಥಳಕ್ಕೆ ಮಾರ್ಕ್‌ ಮಾಡಿಸಿ ತ್ವರಿತಗತಿಯಲ್ಲಿ‌ ಪ್ರಕರಣ ಬೇಧಿಸಬೇಕು‌ ಎಂದು ತಾಕೀತು ಮಾಡಿದ್ದಾರೆ.

ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಲಾಂಡ್ ಆರ್ಡರ್ ಕಾಪಾಡುವ ಜವಾಬ್ದಾರಿ ಅಲೋಕ್‌‌ ಕುಮಾರ್ ಅವರ ಮೇಲಿದೆ. ಅಧಿಕಾರ ಸ್ವೀಕರಿಸಿದ ಬಳಿಕ ಹಂತ - ಹಂತವಾಗಿ ಜಿಲ್ಲಾ ಎಸ್ಪಿಗಳೊಂದಿಗೆ ವರ್ಚುಯಲ್ ಸಭೆ ನಡೆಸುತ್ತಿದ್ದಾರೆ. ಇನ್ನೂ ಸೂಕ್ಷ್ಮ ಪ್ರದೇಶ ಜಿಲ್ಲೆಗಳಿಗೆ ಖುದ್ದು ಭೇಟಿ‌ ನೀಡಿ‌ ಎಸ್ಪಿಗಳೊಂದಿಗೆ ಸಭೆ ನಡೆಸಿದ್ದಾರೆ‌.

ಅಹಿತಕರ ಘಟನೆ ನಡೆದಾಗ ಎಸ್ಪಿ ಕಡ್ಡಾಯ ಭೇಟಿ..ಜಿಲ್ಲಾ‌ ವ್ಯಾಪ್ತಿಯಲ್ಲಿ‌ ಕೊಲೆ‌ ಸೇರಿದಂತೆ ಗಂಭೀರ ಅಪರಾಧ ನಡೆದಾಗ ಕಡ್ಡಾಯವಾಗಿ ಸ್ಥಳಕ್ಕೆ ಭೇಟಿ ನೀಡಬೇಕು.‌ ಪ್ರಕರಣ ದಾಖಲಿಸಿ‌ ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ದಾಖಲಾಗುವ ಎಫ್ಐಆರ್ ಬಗ್ಗೆ ತಿಳಿದುಕೊಂಡಿರಬೇಕು. ತುರ್ತು ಸಂದರ್ಭ ಹೊರತುಪಡಿಸಿ ನಿತ್ಯ ಎಸ್ಪಿ ಕಚೇರಿಗೆ ಬರಬೇಕು.‌ ಲ್ಯಾಂಡ್ ಲೈನ್ ಮೂಲಕವೇ ಕರೆ‌ ಮಾಡಲು ಆದ್ಯತೆ ನೀಡಬೇಕು.‌ ನಿಯಮ ಮೀರಿದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳಿಗೆ ಬಿಸಿ‌‌ ಮುಟ್ಟಿಸಿದ್ದಾರೆ.

ಆರಂಭಿಕ ಹಂತದಲ್ಲಿ ಪ್ರಕರಣಕ್ಕೆ‌ ಮುಕ್ತಿ ಹಾಡಿ..ಇತ್ತೀಚೆಗೆ ರಾಜ್ಯದಲ್ಲಿ ನಡೆಯುವ ಸಣ್ಣ ಘಟನೆಗಳು ದೊಡ್ಡ ಅಪರಾಧ ಪ್ರಕರಣಗಳಿಗೆ ಕಾರಣವಾಗುತ್ತಿದೆ.‌‌ ಇದರಿಂದ‌ ಕಾನೂನು‌ ಸುವ್ಯವಸ್ಥೆಗೆ ಧಕ್ಕೆಯಾಗುತ್ತಿರುವ ಬಗ್ಗೆ ಅರಿತಿರುವ ಎಡಿಜಿಪಿ, ನಿರ್ಲಕ್ಷ್ಯ ಮಾಡದೇ ಪ್ರಾರಂಭಿಕ ಹಂತದಲ್ಲಿ‌‌ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳುವತ್ತ ಗಮನಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಧಾರ್ಮಿಕ ಸಂಘರ್ಷಕ್ಕೆ ಎಡೆ‌ಮಾಡಿಕೊಡದೇ ಆರಂಭದಲ್ಲಿ ಬಗೆಹರಿಸಬೇಕು. ಆಯಾ ಠಾಣಾ ವ್ಯಾಪ್ತಿಯಲ್ಲಿ ಗಸ್ತು ಹೆಚ್ಚಿಸಬೇಕು. ಮರಳು ದಂಧೆ,‌ ಮಟ್ಕಾ‌ ದಂಧೆ ಸೇರಿದಂತೆ ಇನ್ನಿತರ ಅವ್ಯವಹಾರಗಳಿಗೆ ಕಡಿವಾಣ ಹಾಕಬೇಕು. ಜಿಲ್ಲಾ ವ್ಯಾಪ್ತಿಯಲ್ಲಿ ಏನೇ ಸಣ್ಣ ಅಪರಾಧವಾಗಿ ಎಫ್ಐಆರ್ ದಾಖಲಾದರೂ ಎಸ್ಪಿಗಳ ಗಮನಕ್ಕೆ ಇರಬೇಕು. ಸ್ಥಳೀಯ ಹಾಗೂ ನಗರ ಪ್ರದೇಶಗಳಲ್ಲಿ ಮಫ್ತಿ ಪೊಲೀಸರ ಸಂಖ್ಯೆ ಹೆಚ್ಚಿಸಬೇಕು ಎಂದು ತಾಕೀತು ಮಾಡಿದ್ದಾರೆ.

ಪ್ರಚೋದನಕಾರಿ‌ ಪೋಸ್ಟ್ ಗಳ ಬಗ್ಗೆ ನಿಗಾವಿರಲಿ:ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಪೋಸ್ಟ್​​ಗಳ ಬಗ್ಗೆ ಹೆಚ್ಚು ನಿಗಾವಹಿಸಲು ಸೂಚಿಸಲಾಗಿದೆ. ಪ್ರಮುಖವಾಗಿ ಧರ್ಮದ ಸೂಕ್ಷ್ಮ ವಿಚಾರಗಳ ಪೋಸ್ಟ್ ಬಗ್ಗೆ ನಿಗಾವಹಿಸಬೇಕು. ಇದಕ್ಕಾಗಿ ನುರಿತ ಸಿಬ್ಬಂದಿ ಮತ್ತು ಉಪಕರಣಗಳ ವ್ಯವಸ್ಥೆ ಹೆಚ್ಚಿಸಬೇಕು. ಈ ಹಿಂದೆ ನಡೆದ ಹುಬ್ಬಳಿ ಸಂಘರ್ಷ, ಮೈಸೂರು ಗ್ಯಾಂಗ್ ರೇಪ್, ಮಂಗಳೂರು ಮಳಲಿ ಮಸೀದಿ ವಿಚಾರ ಸೇರಿ ಹಲವು ಗಂಭೀರ‌ ಘಟನೆಗಳ ಬಗ್ಗೆ ಸಂಪೂರ್ಣವಾಗಿ ಮಾಹಿತಿ‌ ಪಡೆದಿರುವ ಅಲೋಕ್ ಕುಮಾರ್ ಭವಿಷ್ಯದಲ್ಲಿ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ‌ ಕ್ರಮ ಕೈಗೊಳ್ಳಬೇಕು ಎಂದು ಎಸ್ಪಿಗಳಿಗೆ ಟಾಸ್ಕ್ ನೀಡಿದ್ದಾರೆ.

ಓದಿ:ಒಂದು ತಿಂಗಳಲ್ಲಿ ರಾಜಧಾನಿಯಲ್ಲಿ ನಡೆಯುತ್ತಿರುವ ವೈಟ್‌ ಟಾಪಿಂಗ್‌ ಕಾಮಗಾರಿಗಳು ಪೂರ್ಣ: ರವೀಂದ್ರ

For All Latest Updates

TAGGED:

ABOUT THE AUTHOR

...view details