ಕರ್ನಾಟಕ

karnataka

ETV Bharat / state

ಸಿಲಿಕಾನ್​​ ಸಿಟಿಯ ಎಲ್ಲಾ ಹಿರಿಯ ಪೊಲೀಸ್​​ ಅಧಿಕಾರಿಗಳಿಗೆ ಅಲೋಕ್​​ ಕುಮಾರ್​​ ಬುಲಾವ್​​ - undefined

ನಗರದ ಪೊಲೀಸ್ ಆಯುಕ್ತರಾಗಿ ಅಧಿಕಾರ ಸ್ವೀಕಾರ ಮಾಡಿದ ಅಲೋಕ್ ಕುಮಾರ್ ನಗರದ ಎಲ್ಲಾ ಹಿರಿಯ ಪೊಲೀಸ್​ ಅಧಿಕಾರಿಗಳಿಗೆ ಮಹತ್ವದ ಸಭೆ ಏರ್ಪಡಿಸಿದ್ದಾರೆ. ನಗರದ ಸುರಕ್ಷತೆ ಕುರಿತಾಗಿ ಚರ್ಚೆ ನಡೆರಯುವ ಸಾಧ್ಯತೆ ಇದೆ.

ಅಲೋಕ್ ಕುಮಾರ್

By

Published : Jun 18, 2019, 1:36 PM IST

ಬೆಂಗಳೂರು: ಸಿಲಿಕಾನ್ ಸಿಟಿಯ ಎಲ್ಲಾ ಪೊಲೀಸರಿಗೆ ಅಲೋಕ್ ಕುಮಾರ್ ‌ಮಹತ್ವದ ಸಭೆಗೆ ಆಹ್ವಾನ ನೀಡಿದ್ದಾರೆ.

‌ಕಮಿಷನರ್ ಕಚೇರಿಯಲ್ಲಿ ಮಹತ್ವದ ಸಭೆ ನಡೆಯುತ್ತಿದ್ದು, ನಗರದ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೇ ಹೆಚ್ಚುವರಿ ಪೊಲೀಸ್ ಆಯುಕ್ತರು, ಡಿಸಿಪಿಗಳು, ಸಿಟಿ ಎಸಿಪಿ, ಸಿಸಿಬಿ ಎಸಿಪಿ, ಇನ್ಸ್​ಪೆಕ್ಟರ್​ಗಳು ಸಭೆಯಲ್ಲಿ ಭಾಗಿಯಾಗಲಿದ್ದಾರೆ.

ಕಮಿಷನರ್ ಕಚೇರಿಯಲ್ಲಿ ಪೊಲೀಸ್​ ಅಧಿಕಾರಿಗಳಿಗೆ ಸಭೆ

ಅಲೋಕ್ ಕುಮಾರ್ ನಗರ ಪೊಲೀಸ್ ಆಯುಕ್ತರಾಗಿ ಅಧಿಕಾರ ಸ್ವೀಕಾರ ಮಾಡಿದ ನಂತರ ಇದು ಮೊದಲನೇ ಸಭೆಯಾಗಿದ್ದು, ನಗರದ ಸುರಕ್ಷತೆ ಕುರಿತಾಗಿ ಮಹತ್ವರ ಚರ್ಚೆಗಳು ನಡೆಯುವ ಸಾಧ್ಯತೆ ಇದೆ. ಹಾಗೇ ಮೊದಲ ದಿನವೇ ರೌಡಿಶೀಟರ್​ಗಳ ಮೇಲೆ ಕಣ್ಣಿಟ್ಟ ಕಮಿಷನರ್, ಪ್ರತಿಯೊಬ್ಬ ರೌಡಿಶೀಟರ್ ಬಗ್ಗೆ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಹೀಗಾಗಿ ಅಲರ್ಟ್ ಆದ ಪೊಲೀಸರು, ಎಲ್ಲಾ ರೌಡಿಶೀಟರ್​ಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಆಯುಕ್ತರ ಮುಂದಿಡಲು ಪಟ್ಟಿ ರೆಡಿ‌ ಮಾಡಿದ್ದಾರೆ.

For All Latest Updates

TAGGED:

ABOUT THE AUTHOR

...view details