ಮಾಜಿ ಸಚಿವ ಎಸ್.ಟಿ. ಸೋಮಶೇಖರ್ ಮಾತನಾಡಿದರು. ಬೆಂಗಳೂರು:ಯಾರನ್ನೋ ಸಸ್ಪೆಂಡ್ ಮಾಡಿ, ತೊಂದರೆ ಮಾಡಿ ಎಂದು ನಾನು ಹೇಳಿಲ್ಲ. ನೆಮ್ಮದಿಯಾಗಿ ಕೆಲಸ ಮಾಡಲು ಅವಕಾಶ ನೀಡಿ ಎನ್ನುವುದು ನನ್ನ ಚಿಂತನೆ. ಇಬ್ಬರು ಮುಖಂಡರನ್ನು ಸಸ್ಪೆಂಡ್ ಮಾಡಿದಾಕ್ಷಣಕ್ಕೆ ಒಳ, ಹೊರಗೂ ಇರುವಂತಹದ್ದು ಬದಲಾಗಲ್ಲ ಎಂದು ಮಾಜಿ ಸಚಿವ ಎಸ್. ಟಿ. ಸೋಮಶೇಖರ್ ಹೇಳಿದ್ದಾರೆ.
ತಮ್ಮ ನಿವಾಸದಲ್ಲಿ ಇಂದು (ಸೋಮವಾರ) ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಿಜೆಪಿಯವರು ಎಲ್ಲಾ ವಾಟ್ಸ್ಆ್ಯಪ್ ಗ್ರೂಪ್ನಲ್ಲಿ ವಿಡಿಯೋ ಹಾಕ್ತಿದ್ದಾರೆ. ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ಹೇಳಿರುವಂತೆ ವಲಸೆ ಆಗಿರೋರು, ಬರೋರು ಬರ್ತಾರೆ, ಹೋಗೋರು ಹೋಗ್ತಾರೆ ಎಂಬ ಅಂತ ಹೇಳಿಕೆಗಳನ್ನು ಅವೈಡ್ ಮಾಡಿ ಅನ್ನೋದು ನನ್ನ ಚಿಂತನೆ ಎಂದರು.
''ನಾನಿರಬಹುದು, ಎಲ್ಲಾ ಪಕ್ಷದ ಕಾರ್ಯಕರ್ತರಿರಬಹುದು. ಪಕ್ಷದಲ್ಲಿ ಒಳ್ಳೆಯ ವಾತಾವರಣ ಇತ್ತು. ಚುನಾವಣೆಗೆ ಮೊದಲು ಸೋಮಶೇಖರ್ ಅವರು ಈಗ, ಆಗ ಹೋಗ್ತಾರೆ, ಅಂತೆಲ್ಲಾ ಹೇಳಿದ್ರು. ಬಿಜೆಪಿ ಬಿಡಲ್ಲ, ಕಾಂಗ್ರೆಸ್ ಹೋಗಲ್ಲ ಅಂತ ಹೇಳಿದ್ದೆ. ಸಿಎಂ ಸಿದ್ದರಾಮಯ್ಯ ಜೊತೆ ಮಾತಾಡಿದ್ದೇ ತಪ್ಪಾ.. ಸಿದ್ದರಾಮಯ್ಯ ಅವರ ಜೊತೆ ರಾಜಕಾರಣ ಮಾತನಾಡಿಲ್ಲ. ನಮ್ಮ ಕ್ಷೇತ್ರದ ವಿಚಾರ ಮಾತ್ರ ಮಾತನಾಡಿದ್ದೇನೆ. ಅದಾದ ಮೇಲೆ ಸೋಮಶೇಖರ್ ಕಾಂಗ್ರೆಸ್ ಹೋಗಿ ಲೋಕಸಭೆಗೆ ನಿಲ್ಲುತ್ತಾರೆ. ಮಗ ಎಂಎಲ್‌ಎ ಸ್ಥಾನಕ್ಕೆ ನಿಲ್ಲುತ್ತಾರೆ. ಬಿಜೆಪಿಯಲ್ಲಿ ಅಪ್ಪ ಮಗನಿಗೆ ಟಿಕೆಟ್ ಕೊಡಲ್ಲ ಅಂತೆಲ್ಲಾ ಮಾತುಗಳು ಬಂದಿವೆ. ಒಳ್ಳೆಯ ವಾತಾವರಣ ಸೃಷ್ಟಿ ಮಾಡಿ ಅಂತ ಸಿ.ಟಿ. ರವಿ ಅವರಿಗೆ ಹೇಳಿದ್ದೇನೆ. ಯಾರನ್ನೇ ಸಸ್ಪೆಂಡ್ ಮಾಡಿದರೂ ಪರಿಹಾರ ಅಲ್ಲ ಎಂದು ಕಿಡಿಕಾರಿದರು.
ನಾನು ಪ್ರಬಲ ನಾಯಕ ಅಲ್ಲ: ಕಾಂಗ್ರೆಸ್ ಸಂಪರ್ಕ ಮಾಡ್ತಿದ್ದಾರಾ ಅನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ''ನಾನು ಪ್ರಬಲ ನಾಯಕ ಅಲ್ಲ. ನಾನು ಯಶವಂತಪುರ ಕ್ಷೇತ್ರಕ್ಕೆ ಮಾತ್ರ ಸೀಮಿತ. ಯಶವಂತಪುರ ಹೊರತುಪಡಿಸಿ ಯಾವ ನಾಯಕ ಅಲ್ಲ. ಸಮುದಾಯದ ಪ್ರಬಲ ನಾಯಕನೂ ಅಲ್ಲ ಎಂದರು.
ನನ್ನನ್ನು ಸಂಪರ್ಕ ಮಾಡಿದ್ದು ನಿಜ:''ಸಂಪರ್ಕ ಮಾಡ್ತಾರೆ ಅಂದ್ರೆ ನಾನೂ ಕಾಂಗ್ರೆಸ್‌ನಲ್ಲಿ 20 ವರ್ಷ ಇದ್ದೆ. ಹಾಗಾಗಿ ನನ್ನ ಸಂಪರ್ಕ ಮಾಡಿದ್ದಾರೆ. ಕಳೆದ ಬಾರಿ ಚುನಾವಣೆಗೆ ಮೊದಲು ಸಂಪರ್ಕ ಮಾಡಿದ್ರು. ಹಂಗತಾ ನಾನು ಕಾಂಗ್ರೆಸ್‌ಗೆ ಹೋದೆನಾ? ಹೋಗಲಿಲ್ಲ ಇಲ್ಲೇ ಇದ್ದೆ. ಆದರೂ ಕ್ರಿಯೇಟ್ ಮಾಡ್ತಾರೆ. ಸೋಮಶೇಖರ್ ಈ ವಾರದಲ್ಲಿ ಹೋಗ್ತಾನೆ ಅಂತ ಮಾಡಿದ್ರು. ಭೈರತಿ ಬಸವರಾಜ್ ಕೂಡ ಊರಲ್ಲಿ ಇರಲಿಲ್ಲ. ಯಡಿಯೂರಪ್ಪ ಅವರು ಕೂಡ ಕೇಳಿದ್ರು. ಅವರನ್ನು ನಾನು ಭೇಟಿಯಾಗುತ್ತೇನೆ ಎಂದು ಹೇಳಿದರು. ಲೋಕಸಭಾ ಚುನಾವಣೆಗೆ ಬೆಂಬಲಿಗರು ಹೋದರೆ ಸಮಸ್ಯೆ ಆಗಲ್ಲವೇ ಅನ್ನುವ ವಿಚಾರಕ್ಕೆ ಮಾತನಾಡಿದ ಅವರು, ''ಕಾರ್ಪೊರೇಷನ್ ವಾರ್ಡಿಗೆ ಹಲವರು ಆಕಾಂಕ್ಷಿಗಳು ಇದ್ದಾರೆ. ಹಲವು ಜಾತಿ, ಸಮುದಾಯದವರಿದ್ದಾರೆ. ಸಂಘಟನೆಗೆ ಸಮಸ್ಯೆ ಆಗಲ್ಲ ಎಂದರು
'ಬಾ ಮನೆಗೆ ಅಂತ ಯಡಿಯೂರಪ್ಪ ಕರೆದಿದ್ದಾರೆ':''ಯಡಿಯೂರಪ್ಪ ಸಭೆಗೆ ಗೈರು ವಿಚಾರಕ್ಕೆ ಪ್ರತಿಕ್ರಿಯಿಸಿದ ಸೋಮಶೇಖರ್ ಅವರು, ''ಯಡಿಯೂರಪ್ಪ ಅವರು ನನ್ನ ಜೊತೆ ಮಾತನಾಡಿದ್ರು. ನನಗೆ ತಡವಾಗಿ ಮೆಸೇಜ್ ಸಿಕ್ಕಿದೆ ಅಂತ ಹೇಳಿದೆ. ಯಡಿಯೂರಪ್ಪ ಅವರು ನಮ್ಮ ನಾಯಕರು. ನನ್ನನ್ನು ಬಿಜೆಪಿಗೆ ಕರೆತಂದವರು ಅವರೇ. ಸಹಕಾರ ಸಚಿವರನ್ನಾಗಿ ಮಾಡಿ, ಮೈಸೂರು ಉಸ್ತುವಾರಿ ಕೂಡ ನೀಡಿದ್ರು. ಕೆಲಸ ಪ್ರಾಮಾಣಿಕವಾಗಿ ಮಾಡ್ತಾರೆ ಅಂತ ಹೇಳಿದ್ರು. ಯಡಿಯೂರಪ್ಪ ಹೊರತಾಗಿ ನಾನು ಏನೂ ಮಾಡಲ್ಲ. ಬಾ ಮನೆಗೆ ಅಂತ ಕರೆದಿದ್ದಾರೆ. ಹೋಗಿ ಭೇಟಿಯಾಗಿ ಮಾತಾಡ್ತೇನೆ. ದುಡುಕಿ ನಿರ್ಧಾರ ಮಾಡಬೇಡ ಅಂತ ಹೇಳಿದ್ದಾರೆ. ಏನಾಗಿದೆ ಅಂತ ಮಾಹಿತಿ ಕೊಡುತ್ತೇನೆ'' ಎಂದು ಸೋಮಶೇಖರ್ ಸ್ಪಷ್ಟನೆ ನೀಡಿದರು.
ಸಿಎಂ ಭೇಟಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸೋಮಶೇಖರ್, ''ಸಿಎಂ ಭೇಟಿಗೆ ಅಪಾಯಿಂಟ್ಮೆಂಟ್ ಬೇಕಿಲ್ಲ. ಶಾಸಕರಿಗೆ ಯಾವ ಅಪಾಯಿಂಟ್ಮೆಂಟ್ ಬೇಕಿಲ್ಲ. ಕ್ಷೇತ್ರದ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಿದ್ದೇನೆ. ಪೇಪರ್ಸ್ ತರಬೇಕು ಅಂತ ಹೇಳಿದ್ರು. ಬಿಡಿಎ ಚೇರ್ಮನ್, ಕಾರ್ಪೋರೇಷನ್ ಕಮೀಷನರ್ ಕರೆಸಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಹೇಳಿದ್ದಾರೆ'' ಎಂದು ಎಸ್ ಟಿ ಸೋಮಶೇಖರ್ ಹೇಳಿದರು.
ಇದನ್ನೂ ಓದಿ:ಬಿಜೆಪಿ ಕೋರ್ ಕಮಿಟಿ ಸಭೆ ಆರಂಭ: ಲೋಕಸಭೆ ಚುನಾವಣೆ ಸೇರಿ ಮಹತ್ವದ ವಿಷಯಗಳ ಚರ್ಚೆ