ಕರ್ನಾಟಕ

karnataka

ETV Bharat / state

ನೂತನ 10 ಸಚಿವರಿಗೆ ಕೊಠಡಿಗಳ ಹಂಚಿಕೆ: ಯಾರಿಗೆ ಯಾವ ಕೊಠಡಿ? - ವಿಕಾಸಸೌಧಲ್ಲಿ ಕೊಠಡಿ ಹಂಚಿಕೆ ಮಾಡಿ ಆದೇಶ

ನೂತನ ಸಚಿವರಿಗೆ ವಿಧಾನಸೌಧ, ವಿಕಾಸಸೌಧಲ್ಲಿ ಕೊಠಡಿ ಹಂಚಿಕೆ ಮಾಡಿ ಆದೇಶ ಹೊರಡಿಸಲಾಗಿದೆ.

Allocation of rooms for 10 new ministers
ವಿಧಾನಸೌಧ, ವಿಕಾಸಸೌಧಲ್ಲಿ ಕೊಠಡಿ ಹಂಚಿಕೆ ಮಾಡಿ ಆದೇಶ

By

Published : Feb 6, 2020, 5:53 PM IST

ಬೆಂಗಳೂರು: ಇಂದು ಪ್ರಮಾಣವಚನ ಸ್ವೀಕರಿಸಿದ ನೂತನ ಸಚಿವರಿಗೆ ವಿಧಾನಸೌಧ, ವಿಕಾಸಸೌಧಲ್ಲಿ ಕೊಠಡಿ ಹಂಚಿಕೆ ಮಾಡಿ ಆದೇಶ ಹೊರಡಿಸಲಾಗಿದೆ.

ಸಚಿವ ಎಸ್​​​. ಟಿ. ಸೋಮಶೇಖರ್​​ಗೆ ವಿಕಾಸಸೌಧ 38-39 ಕೊಠಡಿ ಹಂಚಲಾಗಿದ್ದರೆ, ಸಚಿವ ರಮೇಶ್​ ಜಾರಕಿಹೊಳಿಗೆ ವಿಧಾನಸೌಧದ 342-342ಎ ಕೊಠಡಿಯನ್ನು ಹಂಚಲಾಗಿದೆ. ಇನ್ನು ಸಚಿವ ಆನಂದ ಸಿಂಗ್​​ಗೆ- ವಿಕಾಸಸೌಧದ 36-37 ನಂ. ಕೊಠಡಿಯನ್ನು ನೀಡಲಾಗಿದೆ. ಡಾ. ಸುಧಾಕರ್​​​​ಗೆ 339-339ಎ ಕೊಠಡಿ ನೀಡಲಾಗಿದೆ.

ವಿಧಾನಸೌಧ, ವಿಕಾಸಸೌಧಲ್ಲಿ ಕೊಠಡಿ ಹಂಚಿಕೆ ಮಾಡಿ ಆದೇಶ

ಸಚಿವ ಭೈರತಿ ಬಸವರಾಜುಗೆ ವಿಧಾನಸೌಧದ 337-337ಎ ನಂ. ಕೊಠಡಿಯನ್ನು ಹಂಚಲಾಗಿದೆ‌. ಶಿವರಾಂ ಹೆಬ್ಬಾರ್ ಗೆ ವಿಧಾನಸೌಧದ 258-257ಎ ಕೊಠಡಿಯನ್ನು ಕೊಡಲಾಗಿದೆ‌. ಸಚಿವ ಬಿ‌.ಸಿ. ಪಾಟೀಲ್ ಗೆ ವಿಕಾಸಸೌಧದ 406-407 ಕೊಠಡಿಯನ್ನು ನೀಡಲಾಗಿದ್ದರೆ, ಸಚಿವ ಕೆ.ಗೋಪಾಲಯ್ಯ ಅವರಿಗೆ ವಿಧಾನಸೌಧದ 252-253ಎ ಕೊಠಡಿಯನ್ನು ಹಂಚಲಾಗಿದೆ.

ಇನ್ನು, ಸಚಿವ ನಾರಾಯಣಗೌಡಗೆ ವಿಕಾಸಸೌಧದ 234-235 ಕೊಠಡಿಯನ್ನು ನೀಡಲಾಗಿದ್ದರೆ, ಸಚಿವ ಶ್ರೀಮಂತ್​ ಪಾಟೀಲ್​​ಗೆ ವಿಧಾನಸೌಧದ 301-301ಎ ಕೊಠಡಿಯನ್ನು ಹಂಚಲಾಗಿದೆ.

ABOUT THE AUTHOR

...view details