ಕರ್ನಾಟಕ

karnataka

ETV Bharat / state

ಹೊಸಬರು, ಹಿರಿಯರನ್ನು ಸೇರಿಸಿ ಸಚಿವ ಸಂಪುಟ ರಚನೆ, ಇಂದು ಅಥವಾ ನಾಳೆ ಖಾತೆ ಹಂಚಿಕೆ ಆಗಲಿದೆ: ಸಿಎಂ ಸಿದ್ದರಾಮಯ್ಯ - congress government cabinet

ಮೊದಲ ಬಾರಿ ಗೆದ್ದವರಿಗೆ ಮಂತ್ರಿ ಮಾಡಿಲ್ಲ, ಮೂರು ಬಾರಿ, ನಾಲ್ಕನೇ ಬಾರಿ ಗೆದ್ದವರನ್ನು ಸಚಿವರನ್ನಾಗಿ ಮಾಡಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

allocation-of-minister-portfolio-will-be-done-today-or-tomorrow-cm-siddaramaiah
ಹೊಸಬರು, ಹಿರಿಯರನ್ನು ಸೇರಿಸಿ ಸಚಿವ ಸಂಪುಟ ರಚನೆ, ಇಂದು ಅಥವಾ ನಾಳೆ ಖಾತೆ ಹಂಚಿಕೆ ಆಗಲಿದೆ: ಸಿಎಂ ಸಿದ್ದರಾಮಯ್ಯ

By

Published : May 27, 2023, 4:56 PM IST

ಇಂದು ಅಥವಾ ನಾಳೆ ಖಾತೆ ಹಂಚಿಕೆ ಆಗಲಿದೆ: ಸಿಎಂ ಸಿದ್ದರಾಮಯ್ಯ

ಬೆಂಗಳೂರು:ಹೊಸ ಮುಖ, ಹಿರಿಯರು ಎಲ್ಲರನ್ನೂ ಸೇರಿಸಿ ಸಚಿವ ಸಂಪುಟ ಮಾಡಿದ್ದೇವೆ. ಖಾತೆ ಹಂಚಿಕೆ ಇವತ್ತು ಅಥವಾ ನಾಳೆ ಖಾತೆ ಹಂಚಿಕೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅನೌಪಚಾರಿಕ ಸಂಪುಟ ಸಭೆ ನಡೆಸಿ ಬಳಿಕ ಮಾತನಾಡಿದ ಅವರು, ಪೂರ್ಣ ಪ್ರಮಾಣದ ಸಂಪುಟ ರಚನೆ ಮಾಡಿದ್ದೇವೆ. ಸಿಎಂ ಬಿಟ್ಟು 33 ಮಂದಿ ಸಂಪುಟ ದರ್ಜೆ ಸಚಿವರನ್ನಾಗಿ ಮಾಡಿದ್ದೇವೆ. ಮೊದಲ ಬಾರಿ ಗೆದ್ದವರಿಗೆ ಮಂತ್ರಿ ಮಾಡಿಲ್ಲ, ಮೂರು ಬಾರಿ, ನಾಲ್ಕನೇ ಬಾರಿ ಗೆದ್ದವರನ್ನು ಸಚಿವರನ್ನಾಗಿ ಮಾಡಿದ್ದೇವೆ. ಮೊದಲ ಬಾರಿಗೆ ಶಾಸಕರಾದವರಿಗೆ ಸಚಿವ ಸ್ಥಾನ ಇಲ್ಲ ಎಂಬ ಮಾನದಂಡ ಮಾಡಿದ್ದೆವು. ಆ ಪ್ರಕಾರ ಕೆಲ ಜಿಲ್ಲೆಗಳಿಗೆ ಸಚಿವ ಸ್ಥಾನ ಕೊಟ್ಟಿಲ್ಲ. ಕೊಡಗು, ಹಾವೇರಿ, ಚಿಕ್ಕಮಗಳೂರಿಗೆ ಸಚಿವ ಸ್ಥಾನ ಕೊಟ್ಟಿಲ್ಲ. ಯಾವುದೇ ಅಸಮಾಧಾನಗಳಿಲ್ಲ. ಸಮಾಧಾನ, ಅಸಮಾಧಾನ ಇರುವುದೇ, ಅಸಮಾಧಾನದ ಜೊತೆ ಸಮಾಧಾನ ಇದೆ. ಎಲ್ಲರು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.

ನಾವು ಎಲ್ಲ ಭರವಸೆ ಈಡೇರಿಸುತ್ತೇವೆ: ನಾವು ಕೊಟ್ಟಿರುವ ಭರವಸೆ ಈಡೇರಿಸಬೇಕು. ಜನ ನಮಗೆ ಬೆಂಬಲ ನೀಡಿದ್ದಾರೆ. ಗ್ಯಾರಂಟಿಗಳನ್ನ ಜನರಿಗೆ ತಲುಪಿಸುವ ಕೆಲಸ ಮಾಡ್ತೀವೆ. ವಿಪಕ್ಷಗಳು ಜನತೆಗೆ ಕೊಟ್ಟ ಭರವಸೆ ಈಡೇರಿಸಿಲ್ಲ. ಆದರೆ, ನಾವು ಎಲ್ಲ ಭರವಸೆ ಈಡೇರಿಸುತ್ತೇವೆ. ಎಲ್ಲ ಅಂಕಿ - ಅಂಶ ಪಡೆಯುತ್ತಿದ್ದೇವೆ. ಮುಂದಿನ ಕ್ಯಾಬಿನೆಟ್​​ನಲ್ಲಿ ಐದು ಭರವಸೆ ಈಡೇರಿಸುತ್ತೇವೆ. ಐದೂ ಗ್ಯಾರಂಟಿಗಳನ್ನು ಈಡೇರಿಸುತ್ತೇವೆ. ಬಿಜೆಪಿಯವರು ಈ ಹಿಂದೆ ಯಾವುದೇ ಗ್ಯಾರಂಟಿ ಈಡೇರಿಸಿಲ್ಲ. ನಾವು ಈಡೇರಿಸಿದ್ದೆವು. ಅಧಿಕಾರಿಗಳಿಗೆ ವಿವರವಾದ ರೂಪುರೇಷೆ ನೀಡುವಂತೆ ಸೂಚನೆ ನೀಡಿದ್ದೇನೆ. ಸಚಿವ ಸಂಪುಟದಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.

ಜಿಲ್ಲೆಗಳಿಗೆ ಪ್ರಾತಿನಿಧ್ಯ ನೀಡಿಲ್ಲ ಎಂಬ ಕೆಲ ಅಸಮಾಧಾನ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಈ ಬಾರಿ ಒಂದು ಮಾನದಂಡ ಪಾಲಿಸಿದ್ದೇವೆ. ಅನೇಕ ಜಿಲ್ಲೆಗಳಿಗೆ ಅವಕಾಶ ಕೊಟ್ಟಿಲ್ಲ. ಮೊದಲ ಬಾರಿ ಗೆದ್ದವರಿಗೆ ಸಚಿವ ಸ್ಥಾನ ನೀಡಿಲ್ಲ. ಅಸಮಾಧಾನಗಳು ಇದ್ದಿದ್ದೆ. ಕೆಲವೊಂದು ಬಾರಿ ಅಸಮಾಧಾನಗಳಲ್ಲಿ ಸಮಾಧಾನ ಇರುತ್ತದೆ. ಸಚಿವ ಸಂಪುಟದಲ್ಲಿ ಹೊಸಬರು ಇದ್ದಾರೆ, ಹಳಬರೂ ಇದ್ದಾರೆ ಎಂದು ತಿಳಿಸಿದರು. ಪುಟ್ಟರಂಗಶೆಟ್ಟಿ ಅಸಮಾಧಾನ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಪುಟ್ಟರಂಗಶೆಟ್ಟಿ ಜೊತೆ ನಿನ್ನೆ ರಾತ್ರಿ ನಾನು ಮಾತನಾಡಿದ್ದೇನೆ. ಅವರು ಒಪ್ಪಿದ ಬಳಿಕವೇ ಉಪಸಭಾಧ್ಯಕ್ಷರನ್ನಾಗಿ ಮಾಡಲಾಗಿದೆ ಎಂದು ತಿಳಿಸಿದರು.

ಖಾತೆ ಹಂಚಿಕೆ ವಿವರ: ಸಿಎಂ ಸಿದ್ದರಾಮಯ್ಯ ಅವರು ತಮ್ಮ ಸಂಪುಟದ ಸದಸ್ಯರಿಗೆ ಖಾತೆಗಳನ್ನು ಹಂಚಿಕೆ ಮಾಡಿದ್ದು, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಬೆಂಗಳೂರು ಅಭಿವೃದ್ಧಿ ಮತ್ತು ಜಲ ಸಂಪನ್ಮೂಲ ಖಾತೆ ನೀಡಲಾಗಿದೆ. ಗೃಹ ಖಾತೆಯನ್ನು ಡಾ. ಜಿ ಪರಮೇಶ್ವರ್ ಅವರಿಗೆ ನೀಡಲಾಗಿದೆ. ಹಿರಿಯ ಸಚಿವರಾದ ಎಂಬಿ ಪಾಟೀಲ್ ಅವರಿಗೆ ಬೃಹತ್ ಕೈಗಾರಿಕೆ, ಹೆಚ್​ಕೆ ಪಾಟೀಲ್ ಅವರಿಗೆ ಕಾನೂನು ಮತ್ತು ಸಂಸದೀಯ ಖಾತೆ ಹಂಚಿಕೆ ಮಾಡಲಾಗಿದೆ. ಖಾತೆ ಹಂಚಿಕೆಯ ಪಟ್ಟಿ ಈಟಿವಿ ಭಾರತ್​ಗೆ ಲಭ್ಯವಾಗಿದೆ.

ಇದನ್ನೂ ಓದಿ:ಸಿದ್ದು ಸಂಪುಟದ ಖಾತೆ ಹಂಚಿಕೆ: ಪರಮೇಶ್ವರ್​ಗೆ ಗೃಹ, ಡಿಕೆಶಿಗೆ ಜಲ, ಜಾರ್ಜ್​ಗೆ ಇಂಧನ... ಖರ್ಗೆಗೆ ಯಾವ ಖಾತೆ?

ABOUT THE AUTHOR

...view details