ಕರ್ನಾಟಕ

karnataka

ETV Bharat / state

ಬಿಜೆಪಿ ಅಸ್ತ್ರಕ್ಕೆ ಪ್ರತ್ಯಸ್ತ್ರ ಪ್ರಯೋಗಿಸಿದ್ರಾ ಮೈತ್ರಿ ನಾಯಕರು…? - alliance

ಲೋಕಸಭಾ ಚುನಾವಣೆಯಲ್ಲಿ ಜಯಭೇರಿ ಬಾರಿಸಿರುವ ಬಿಜೆಪಿ ರಾಜ್ಯದಲ್ಲೂ ಸರ್ಕಾರ ರಚನೆಗೆ ಕರಸತ್ತು ನಡೆಸುತ್ತಿದೆ. ಬಿಜೆಪಿ ಈ ಅಸ್ತ್ರಕ್ಕೆ ಪ್ರತ್ಯಸ್ತ್ರ ಪ್ರಯೋಗಿಸಲು ಮಾಜಿ ಸಿಎಂ ಸಿದ್ದರಾಮಯ್ಯ ಎಂಟ್ರಿಕೊಟ್ಟಿದ್ದಾರೆ. ಸಿಎಂ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಪ್ರಭಾವಿ ಸಚಿವರೊಬ್ಬರು ರಾತ್ರೋರಾತ್ರಿ ಕಾರ್ಯಾಚರಣೆ ನಡೆಸಿ 14 ಶಾಸಕರ ಪೈಕಿ 12 ಶಾಸಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗ್ತಿದೆ.

ಬಿಜೆಪಿ ಅಸ್ತ್ರಕ್ಕೆ ಪ್ರತ್ಯಸ್ತ್ರ ಪ್ರಯೋಗಿಸಿರುವ ಮೈತ್ರಿಕೂಟ ಸರ್ಕಾರ

By

Published : May 28, 2019, 9:35 PM IST

ಬೆಂಗಳೂರು:ಲೋಕಸಭಾ ಚುನಾವಣಾ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಆಪರೇಷನ್ ಕಮಲಕ್ಕೆ ಚಾಲನೆ ನೀಡಿದ್ದ ಬಿಜೆಪಿಯ ಅಸ್ತ್ರಕ್ಕೆ ಪ್ರತ್ಯಸ್ತ್ರ ಪ್ರಯೋಗಿಸಿರುವ ಮೈತ್ರಿಕೂಟದ ನಾಯಕರು, ಅಸಮಾಧಾನ ಹೊಂದಿರುವ ಶಾಸಕರ ಮನವೊಲಿಸುವಲ್ಲಿ ಬಹುತೇಕ ಯಶಸ್ಸು ಕಂಡಿದ್ದಾರೆ ಎನ್ನಲಾಗ್ತಿದೆ.

ಕೇಂದ್ರದಲ್ಲಿ ಬಿಜೆಪಿ ಅಭೂತಪೂರ್ವ ಜಯಸಾಧಿಸಿದ ಬೆನ್ನಲ್ಲೇ ಎರಡನೇ ಬಾರಿಗೆ ನರೇಂದ್ರ ಮೋದಿ ಅವರು ಪ್ರಮಾಣವಚನ ಸ್ವೀಕರಿಸಿದ ನಂತರ ರಾಜ್ಯದಲ್ಲಿ ಆಪರೇಷನ್ ಕಮಲದ ಮೂಲಕ 12 ರಿಂದ 14 ಮಂದಿ ಶಾಸಕರನ್ನು ಸೆಳೆಯಲು ಪ್ಲಾನ್​ ಮಾಡಿತ್ತು ಎಂದು ಹೇಳಲಾಗ್ತಿದೆ. ಇದರ ಮಾಹಿತಿ ಪಡೆದ ಮೈತ್ರಿಕೂಟ ಪ್ರತಿತ್ರಂತ್ರ ಹೆಣೆದಿದೆ. ಮೂಲಗಳ ಪ್ರಕಾರ, ಬಿಜೆಪಿ ಅಸ್ತ್ರಕ್ಕೆ ಪ್ರತ್ಯಸ್ತ್ರ ಪ್ರಯೋಗಿಸಲು ಮಾಜಿ ಸಿಎಂ ಸಿದ್ದರಾಮಯ್ಯ ಎಂಟ್ರಿಕೊಟ್ಟಿದ್ದು, ಸಿಎಂ ಕುಮಾರಸ್ವಾಮಿ, ಹಾಗೂ ಪ್ರಭಾವಿ ಸಚಿವರೊಬ್ಬರು ರಾತ್ರೋರಾತ್ರಿ ಕಾರ್ಯಾಚರಣೆ ನಡೆಸಿ 14 ಶಾಸಕರ ಪೈಕಿ 12 ಶಾಸಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರಂತೆ. ಬಿಜೆಪಿ ತೆಕ್ಕೆಗೆ ಬೀಳಲು ಸಜ್ಜಾಗಿದ್ದ ಇಬ್ಬರು ಪಕ್ಷೇತರರು ಸೇರಿ 9 ಕಾಂಗ್ರೆಸ್ ಶಾಸಕರು ಇದೀಗ ಕಾಂಗ್ರೆಸ್-ಜೆಡಿಎಸ್ ಪಾಳಯದಲ್ಲಿ ಭದ್ರವಾಗಿದ್ದಾರೆ. ಈ ಪೈಕಿ ರೆಬಲ್​ ಶಾಸಕರಾದ ರಮೇಶ್ ಜಾರಕಿಹೊಳಿ, ರೋಷನ್​ ಬೇಗ್​ ಹೊರತುಪಡಿಸಿ ಉಳಿದೆಲ್ಲಾ ಶಾಸಕರನ್ನು ಹಿಡಿದಿಟ್ಟುಕೊಂಡಿದ್ದು, ಇವರಲ್ಲಿ ಇಬ್ಬರಿಂದ ಮೂವರಿಗೆ ಸಚಿವ ಸ್ಥಾನ ಸಿಗಲಿದೆ. ಉಳಿದವರಿಗೂ ‘ಸವಲತ್ತು’ ನೀಡುವ ಭರವಸೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರು ರೂಪಿಸಿರುವ ಸೂತ್ರಕ್ಕೆ ಕಾಂಗ್ರೆಸ್ ಹೈಕಮಾಂಡ್ ಸಮ್ಮತಿಯೂ ಇದ್ದು, ಎಂಥದೇ ಪರಿಸ್ಥಿತಿಯಲ್ಲೂ ಸರ್ಕಾರ ಉಳಿಸಿಕೊಳ್ಳುವಂತೆ ಸೂಚಿಸಿದೆ. ಜೊತೆಗೆ ಎರಡನೇ ಹಂತದಲ್ಲಿ 6 ಸಚಿವರನ್ನು ಸಂಪುಟದಿಂದ ತೆಗೆಯುವಾಗಲೂ ಎಚ್ಚರವಹಿಸಿ ಎಂದು ಹೇಳಿದೆ ಎನ್ನಲಾಗ್ತಿದೆ. 14 ಮಂದಿ ಅತೃಪ್ತರಲ್ಲಿ ಮೂವರಿಗೆ ಸಚಿವಸ್ಥಾನ ಕೊಟ್ಟರೆ ಉಳಿದ 11 ಮಂದಿ ಭರವಸೆಗಳಿಗೆ ಮಾತ್ರ ತೃಪ್ತಿಯಾಗುತ್ತಾರಾ? ಈಗ ಬಿಜೆಪಿಯತ್ತ ಹೋಗುವುದಿಲ್ಲವೆಂದು ಒಪ್ಪಿಕೊಂಡವರು ಮಾತು ಉಳಿಸಿಕೊಳ್ಳುತ್ತಾರಾ? ಎಂಬುದನ್ನು ಕಾದು ನೋಡಬೇಕಾಗಿದೆ.

For All Latest Updates

TAGGED:

alliance

ABOUT THE AUTHOR

...view details