ಕರ್ನಾಟಕ

karnataka

ETV Bharat / state

ಮಹಿಳಾ ಸಿಎ ಗೆ ಮಂಕು ಬೂದಿ ಎರಚಿದ ಆರೋಪ: ಜ್ಯೋತಿಷಿಗೆ ಬೀದಿಯಲ್ಲೇ ಬಿಡಿಸಿದ್ರು ಗ್ರಹಚಾರ - ಶ್ರೀನಿವಾಸನಗರ ಅಪಾರ್ಟ್​ಮೆಂಟ್​

ಮನೆಯಲ್ಲಿ ವಾಸ್ತುದೋಷ ‌ಸರಿಪಡಿಸಲು ಬಂದ ಜ್ಯೋತಿಷಿವೋರ್ವನಿಗೆ ಸ್ಥಳೀಯರೇ ಗ್ರಹಚಾರ ಬಿಡಿಸಿದ್ದಾರೆ. ಚಾರ್ಟೆಡ್​ ಅಕೌಂಟೆಟ್​ ಆಗಿದ್ದ ಯುವತಿಯೊಂದಿಗೆ ಬಣ್ಣ ಬಣ್ಣದ ಮಾತುಗಳನ್ನಾಡಿದ್ದಲ್ಲದೆ, ಆಕೆಯನ್ನು ನಂಬಿಸಿ, ವಂಚಿಸಿರುವ ಆರೋಪದ ಮೇಲೆ ನಡುಬೀದಿಯಲ್ಲೇ ಜ್ಯೋತಿಷಿ ಗ್ರಹಚಾರ ಬಿಡಿಸಿಕೊಂಡಿದ್ದಾನೆ.

ಡೋಂಗಿ ಜ್ಯೋತಿಷಿಗೆ ಧರ್ಮದೇಟು

By

Published : Aug 21, 2019, 3:54 PM IST

Updated : Aug 21, 2019, 4:06 PM IST

​ಬೆಂಗಳೂರು: ಮನೆಯಲ್ಲಿನ ವಾಸ್ತುದೋಷ ‌ಸರಿಪಡಿಸಲು ಬಂದ ಜ್ಯೋತಿಷಿ ಬಣ್ಣ ಬಣ್ಣದ ಮಾತುಗಳನ್ನಾಡಿ ಯುವತಿವೋರ್ವಳನ್ನು ನಂಬಿಸಿ, ವಂಚಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಅಲ್ಲದೆ, ಆರೋಪಿಯನ್ನು ಈಗ ಹನುಮಂತನಗರ ಪೊಲೀಸರಿಗೆ ಒಪ್ಪಿಸಲಾಗಿದೆ. ವೆಂಕಟ ಕೃಷ್ಣಾಚಾರ್ಯ (28) ಬಂಧಿತ ಆರೋಪಿ.

ಕಳೆದ ಕೆಲ ವರ್ಷಗಳಿಂದ ಜ್ಯೋತಿಷ್ಯ, ವಾಸ್ತು ಹೆಸರಲ್ಲಿ ಜನರನ್ನ ನಂಬಿಸುತ್ತಿದ್ದನೆನ್ನಲಾದ ಈ ಜ್ಯೋತಿಷಿ, ಇಲ್ಲಿನ ಶ್ರೀನಿವಾಸನಗರದ ಅಪಾರ್ಟ್​ಮೆಂಟ್​ನಲ್ಲಿ ವಾಸವಿದ್ದ. ಕಳೆದ ಎರಡು ವರ್ಷಗಳ ಹಿಂದೆ ವಿಜಯನಗರದ ಯುವತಿವೋರ್ವಳ ಮನೆಗೆ ವಾಸ್ತು ನೋಡಲು ತೆರಳಿದ್ದ. ಖಾಸಗಿ ಕಂಪನಿಯಲ್ಲಿ ಚಾರ್ಟೆಡ್ ಅಕೌಂಟೆಂಟ್ ಆಗಿರೋ ಯುವತಿ ಈತನನ್ನು ನಂಬಿ ತನ್ನ ಅಪಾರ್ಟ್​ಮೆಂಟ್​ಗೆ ಕರೆದು, ಹಲವು ಬಾರಿ ಮಂತ್ರ ಪಠನೆ ಮಾಡಿಸಿದ್ದಳಂತೆ. ಆಗ ಜ್ಯೋತಿಷಿ‌ ಆ ಮನೆ ವಾಸ್ತು ಸರಿಯಿಲ್ಲ, ವಾಸ್ತುದೋಷ ಇರುವುದರಿಂದ ಮನೆಯಲ್ಲಿ ಶುಭ ಕಾರ್ಯಗಳು ಆಗ್ತಿಲ್ಲ ಎಂದು ನಂಬಿಸಿದ್ದನಂತೆ.

ಡೋಂಗಿ ಜ್ಯೋತಿಷಿಗೆ ಧರ್ಮದೇಟು

ಹೀಗಾಗಿ ಯುವತಿ ‌ಕಳೆದ ಎರಡು ವರ್ಷಗಳಿಂದ ಸುಮಾರು 12 ಬಾರಿ‌ ಮನೆಯಲ್ಲಿ ಯಾಗಗಳನ್ನ ಮಾಡಿ‌ಸಿದ್ದಳು. ಈ ವೇಳೆ ಜನ್ಮ ಜನ್ಮದ ಅನುಬಂಧ ಎಂದು ನಂಬಿಸಿ‌ ನಂತರ ಆಕೆಯ ನಂಬರ್ ಪಡೆದಿದ್ದನಂತೆ. ಈಗಾಗಲೇ ಮದುವೆಯಾಗಿ ಒಂದು ಮಗುವಿರೋ ವಿಚಾರವನ್ನು ಮರೆಮಾಚಿ ಯುವತಿ ಜೊತೆ ಲವ್ವಿ ಡವ್ವಿ ಶುರು ಮಾಡಿದ್ದನಂತೆ.

ಕಳೆದ ಮೂರು ಜನ್ಮದಿಂದ ನಾವಿಬ್ಬರೂ ಗಂಡ-ಹೆಂಡತಿ. ಈ ಜನ್ಮದಲ್ಲಿ ಕಾರಣಾಂತರಗಳಿಂದ ದೂರ ಆಗಿದ್ದೇವೆ. ನೀನು ನನ್ನನ್ನ ಮದುವೆಯಾದಾಗ ಮಾತ್ರ ನಿನಗೆ ಮೋಕ್ಷ ಸಾಧ್ಯ ಅಂತ ಯುವತಿಯನ್ನ ನಂಬಿಸಿದ್ದನಂತೆ. ಇದನ್ನು ನಂಬಿದ ಯುವತಿಯು ಜ್ಯೋತಿಷಿ ಹೇಳಿದ ಹಾಗೆ ಬ್ಯಾಗ್​ನಲ್ಲಿ ನಿಂಬೆಹಣ್ಣು, ತಾಯತ, ಹೆಣ್ಣಿನ ಗೊಂಬೆ, ಕರ್ಪೂರ ಇಟ್ಟುಕೊಂಡು ಕಚೇರಿಗೆ ತೆರಳುತ್ತಿದ್ದಳು ಎನ್ನಲಾಗ್ತಿದೆ.

ಜ್ಯೋತಿಷಿಯನ್ನು ಅತಿಯಾಗಿ ನಂಬಿದ್ದ ಯುವತಿಯು ಆತ ಕೇಳಿದಾಗಲೆಲ್ಲ, ಲಕ್ಷ ಲಕ್ಷ ಹಣ ನೀಡಿದ್ದಳಂತೆ. ಅಷ್ಟು ಮಾತ್ರವಲ್ಲದೆ ಬ್ಯಾಂಕ್​ಗಳಿಂದ ತನ್ನ ಹೆಸರಲ್ಲಿ 30 ಲಕ್ಷಕ್ಕೂ ಹೆಚ್ಚು ಸಾಲ ಕೊಡಿಸಿದ್ದಳಂತೆ. ಬರ ಬರುತ್ತಾ ಜ್ಯೋತಿಷಿ ಮೋಸ ಮಾಡಿರುವ ವಿಚಾರ ತಿಳಿದು ಹಣ ವಾಪಸ್​ ಕೇಳಿದ್ದಳು. ಆದ್ರೆ ಈ ಜ್ಯೋತಿಷಿ ಯುವತಿಗೆ ಬೆದರಿಸಿ ನೀನು‌ ಕಂಪ್ಲೇಂಟ್ ಕೊಟ್ರೆ ಕೈ‌ಕಾಲು ಮುರಿಸ್ತೇನೆ ಅಂತಾ ಬೆದರಿಸಿದ್ದ ಎಂದು ದೂರಲಾಗಿದೆ.

ಇನ್ನು ಯುವತಿ ಒಬ್ಬಳೇ ಮಗಳಾದ ಕಾರಣ ಮಗಳ ಪರಿಸ್ಥಿತಿಯನ್ನು ಕಂಡು ಪೋಷಕರು ಹನುಮಂತನಗರ ಪೊಲೀಸ್ ಠಾಣೆಯಲ್ಲಿ ದೂರು ‌ನೀಡಿದ್ದರು. ಈ ದೂರು ಆಧರಿಸಿ ಪೊಲೀಸರು ಆರೋಪಿಯನ್ನ ಬಂಧಿಸಿ, ತನಿಖೆ ಚುರುಕುಗೊಳಿಸಿದ್ದಾರೆ.

Last Updated : Aug 21, 2019, 4:06 PM IST

ABOUT THE AUTHOR

...view details