ಬೆಂಗಳೂರು: ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಬಳಸುತ್ತಿರುವ ಪಿಪಿಇ ಕಿಟ್ಗಳಲ್ಲಿನ ಸಾಮಾಗ್ರಿಗಳು ಕಳಪೆ ಗುಣಮಟ್ಟದಿಂದ ಕೂಡಿದ್ದು, ಈ ಬಗ್ಗೆ ತನಿಖೆಗೆ ಆದೇಶಿಸುವಂತೆ ಕೋರಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ನಗರದ ಸಾಮಾಜಿಕ ಕಾರ್ಯಕರ್ತೆ ಹಾಗು ವಕೀಲೆ ಗೀತಾ ಮಿಶ್ರಾ ಚಿಕಿತ್ಸೆ ವೇಳೆ ವೈದ್ಯರು ಮಾಡಿರುವ ಆರೋಪಗಳ ಮೇಲೆ ಈ ಅರ್ಜಿ ಸಲ್ಲಿಸಿದ್ದಾರೆ.
ಅರ್ಜಿಯಲ್ಲಿ, ಕೊರೊನಾ ಹೋಗಲಾಡಿಸಲು ವೈದ್ಯರು, ದಾದಿಯರು ಹಾಗು ಆರೋಗ್ಯ ಕಾರ್ಯಕರ್ತರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಚಿಕಿತ್ಸೆ ಹಾಗೂ ಪರೀಕ್ಷೆ ಸಂದರ್ಭದಲ್ಲಿ ವೈದ್ಯರು ಹಾಗೂ ಸಿಬ್ಬಂದಿಗೆ ಪಿಪಿಇ ಕಿಟ್ಗಳು ಬಹಳ ಅಗತ್ಯ. ಆದರೆ, ರಾಜ್ಯ ಸರ್ಕಾರಕ್ಕೆ ಪೂರೈಸಿರುವ ಪಿಪಿಇ ಕಿಟ್ಗಳಲ್ಲಿನ ಸಾಮಾಗ್ರಿಗಳಾದ ಹೆಡ್ ಕ್ಯಾಪ್, ಗ್ಲೌಸ್, ಗಾಗಲ್ಸ್, ಫುಟ್ ವೇರ್ ಕವರ್‌ಗಳು ಕಳಪೆ ಗುಣಮಟ್ಟದಿಂದ ಕೂಡಿದೆ. ಅವುಗಳ ಪ್ಯಾಕಿಂಗ್ ಸರಿಯಾಗಿಲ್ಲ. ಪ್ಯಾಕಿಂಗ್ ಮೇಲೆ ಯಾವುದೇ ಗುಣಮಟ್ಟ ಸೂಚಿಸುವ ಸೀಲ್ ಕೂಡ ಇಲ್ಲ ಎಂದು ವೈದ್ಯರು ಆರೋಪಿಸಿದ್ದಾರೆ.