ಕರ್ನಾಟಕ

karnataka

ETV Bharat / state

ಮಹದೇವಪುರ: ಮತದಾರರ ಪಟ್ಟಿಯಲ್ಲಿ ನಕಲಿ ಹೆಸರು ಸೇರ್ಪಡೆ ಆರೋಪ - Alleged voter inclusion in voter list in Mahadevapur

ಬಿದರಹಳ್ಳಿ ವ್ಯಾಪ್ತಿಯ ಕಾಡಗ್ರಹಾರದಲ್ಲಿ ಮತದಾರರ ಪಟ್ಟಿಯಲ್ಲಿ ನಕಲಿ ಹೆಸರನ್ನು ಸೇರಿಸುವ ಮೂಲಕ ಅಕ್ರಮ ಮಾಡಿದ್ದಾರೆಂದು ಗ್ರಾಮಸ್ಥರು ಆರೋಪ ಮಾಡಿದ್ದಾರೆ.

Voters standing in a row
ಸಾಲಾಗಿ ನಿಂತಿದ್ದ ಮತದಾರರು

By

Published : Dec 27, 2020, 10:11 PM IST

ಮಹದೇವಪುರ: ಕ್ಷೇತ್ರದ 11 ಗ್ರಾ.ಪಂಚಾಯಿತಿಗಳಲ್ಲಿ 2ನೇ ಹಂತದ ಚುನಾವಣೆ ಬಹುತೇಕ ಶಾಂತಿಯುತವಾಗಿ ನಡೆದಿದೆ. ಆದರೆ, ಬಿದರಹಳ್ಳಿ ವ್ಯಾಪ್ತಿಯ ಕಾಡಗ್ರಹಾರದಲ್ಲಿ ಮತದಾನ ವೇಳೆ ಮಾತಿನ ಚಕಮಕಿಯಾದ ಹಿನ್ನೆಲೆ ಪೊಲೀಸರು ಲಾಠಿ ಚಾರ್ಜ್ ಮಾಡಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

ಪೊಲೀಸರ ಸಮ್ಮುಖದಲ್ಲೇ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ

ಮತದಾರರ ಪಟ್ಟಿಯಲ್ಲಿ ನಕಲಿ ಮತದಾರರನ್ನು ಸೇರಿಸುವ ಮೂಲಕ ಅಕ್ರಮ ಮಾಡಿದ್ದಾರೆಂದು ಗ್ರಾಮಸ್ಥರು ಆರೋಪ ಮಾಡಿದ್ದು, ಪೊಲೀಸರ ಸಮ್ಮುಖದಲ್ಲೇ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಪರಿಸ್ಥಿತಿ ಕೈ ಮೀರಿದಾಗ ಲಾಠಿ ಚಾರ್ಜ್​ ಮಾಡಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಉಳಿದಂತೆ ಬೆಂಗಳೂರು ಪೂರ್ವ ತಾಲೂಕಿನಲ್ಲಿ ಶೇ. 70 ರಷ್ಟು ಶಾಂತಿಯುತ ಮತದಾನ ನಡೆದಿದೆ.

ಓದಿ:ಮಂಡ್ಯ ಗ್ರಾ.ಪಂ ಚುನಾವಣೆ: ಅಭ್ಯರ್ಥಿ ಮೇಲೆ ಕಿಡಿಗೇಡಿಗಳಿಂದ ಹಲ್ಲೆ

ಬಿದರಹಳ್ಳಿ ಪಂಚಾಯಿತಿ ವ್ಯಾಪ್ತಿಯ ಆದೂರು, ಹಿರಂಡಳ್ಳಿ‌ ರಾಂಪುರ ಗ್ರಾಮದಲ್ಲಿ‌ ಮತದಾರರ ಸಂಖ್ಯೆ ಹೆಚ್ಚಿದ್ದರೂ ಮತದಾನಕ್ಕೆ ಒಂದು ಬೂತ್​ನಲ್ಲಿ ಮಾತ್ರ ಅನುಮತಿ ಕೊಡಲಾಗಿತ್ತು. ಹಾಗಾಗಿ ಸಂಜೆ 5 ಗಂಟೆಯಾದರೂ ಜನ ಸಾಲಾಗಿ ನಿಂತಿದ್ದು ಕಂಡುಬಂತು.

For All Latest Updates

ABOUT THE AUTHOR

...view details