ಕರ್ನಾಟಕ

karnataka

ETV Bharat / state

ಸಾರಿಗೆ ಇಲಾಖೆಯಲ್ಲಿ ಅಕ್ರಮ ವರ್ಗಾವಣೆ ದಂಧೆ: ನೌಕರರ ಸಂಘದಿಂದ ದೂರು

ಸಾರಿಗೆ ಇಲಾಖೆಯಲ್ಲಿ ವರ್ಗಾವಣೆ ದಂಧೆ ತೀವ್ರವಾಗಿದೆ. ಚಾಲಕ, ನಿರ್ವಾಹಕರಿಗೆ ಒಂದು ರೇಟ್ ಹಾಗೂ ಇತರ ಸಿಬ್ಬಂದಿಗೆ ಇನ್ನೊಂದು ದರ ನಿಗದಿ ಆಗಿದೆಯಂತೆ.

ಸಾರಿಗೆ ಇಲಾಖೆಯಲ್ಲಿ ನಡೆಯುತ್ತಿದೆ ವರ್ಗಾವಣೆ ದಂಧೆ ?
ಸಾರಿಗೆ ಇಲಾಖೆಯಲ್ಲಿ ನಡೆಯುತ್ತಿದೆ ವರ್ಗಾವಣೆ ದಂಧೆ ?

By

Published : Aug 1, 2022, 9:23 PM IST

ಬೆಂಗಳೂರು: ಸಚಿವ ಶ್ರೀರಾಮುಲು ಸಚಿವರಾದ ಮೇಲೆ ನಿಯಮಬಾಹಿರವಾಗಿ ಸಾಕಷ್ಟು ವರ್ಗಾವಣೆ ನಡೆದಿದೆ. ಕೆಳದ ಕೆಲ ತಿಂಗಳಲ್ಲಿ 714 ಮಂದಿ ವರ್ಗಾವಣೆ ಆಗಿದ್ದು, ಅಕ್ರಮ ನಡೆದಿರುವ ಆರೋಪ ಕೇಳಿ ಬಂದಿದೆ. ಶ್ರೀರಾಮುಲು ಕಚೇರಿಯಿಂದಲೇ ವರ್ಗಾವಣೆಗೆ ಶಿಫಾರಸು ನಡೆಯುತ್ತಿದೆ. ಸೀನಿಯಾರಿಟಿ ಮೇಲೆ ವರ್ಗಾವಣೆಗೆ ಕಾಯುತ್ತಿರುವ ಸಿಬ್ಬಂದಿಗೆ ಅನ್ಯಾಯವಾಗುತ್ತಿದ್ದು, ಈ ಸಂಬಂಧ ಸರ್ಕಾರಕ್ಕೆ ನೌಕರರ ಸಂಘ ದೂರು ನೀಡಿದೆ.


ಸಾರಿಗೆ ಇಲಾಖೆಯಲ್ಲಿ ವರ್ಗಾವಣೆಗೆ ಚಾಲಕ, ನಿರ್ವಾಹಕರಿಗೆ ಒಂದು ರೇಟ್ ಹಾಗೂ ಇತರ ಸಿಬ್ಬಂದಿಗೆ ಇನ್ನೊಂದು ದರ ನಿಗದಿ ಆಗಿದ್ದು, ಲಕ್ಷ ಲಕ್ಷ ರೂ ಹಣವನ್ನು ಸಚಿವರ ಹಿಂಬಾಲಕರು, ಕಚೇರಿ ಸಿಬ್ಬಂದಿ ಮಾಡುತ್ತಿದ್ದಾರೆ ಎಂದು ಸಾರಿಗೆ ನೌಕರರ ಸಂಘ ಗಂಭೀರ ಆಪಾದನೆ ಮಾಡಿದೆ.

ಲಂಚ ಪಡೆಯುವಷ್ಟು ಕ್ರೂರಿ ನಾನಲ್ಲ: ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಾರಿಗೆ ಸಚಿವ ಶ್ರೀರಾಮುಲು, "ನಾನೇನು ಸಾಚಾ ಎಂದು ಹೇಳಲ್ಲ. ನೌಕರರಿಂದ ಲಂಚ ಪಡೆಯುವಷ್ಟು ಕ್ರೂರಿ ನಾನಲ್ಲ" ಎಂದಿದ್ದಾರೆ.

ಇದನ್ನೂ ಓದಿ:ಹರ್ ಘರ್ ತಿರಂಗಾ ಅದ್ಭುತ ಪರಿಕಲ್ಪನೆ, ಅದನ್ನು ಸಾಕಾರಗೊಳಿಸುವಲ್ಲಿ ಸರ್ಕಾರ ತಪ್ಪು ಮಾಡಿದೆ: ರಂಗಕರ್ಮಿ ಪ್ರಸನ್ನ

ABOUT THE AUTHOR

...view details