ಬೆಂಗಳೂರು:ತೃತೀಯ ಲಿಂಗಿಗಳ ಕಲ್ಯಾಣಕ್ಕೆ 2021-22 ಸಾಲಿನ ಬಜೆಟ್ನಲ್ಲಿ 6 ಕೋಟಿ ರೂ ಮೀಸಲಿಟ್ಟರೂ 1 ರೂಪಾಯಿಯೂ ಬಳಕೆಯಾಗದೆ ರದ್ದಾಗಿದೆ. ಕಳೆದ ಎರಡು ಮೂರು ವರ್ಷದಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅನುದಾನದಲ್ಲಿ ಲೈಂಗಿಕ ಅಲ್ಪಸಂಖ್ಯಾತರ ಕಲ್ಯಾಣಕ್ಕೂ ಅನುದಾನ ಮೀಸಲಿಡಲಾಗುತ್ತಿದೆ ಎಂದು ಬಿಬಿಎಂಪಿ ಕಲ್ಯಾಣ ವಿಭಾಗದ ವಿಶೇಷ ಅಧಿಕಾರಿ ಶರತ್ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಕಳೆದ ವರ್ಷ ಮೊದಲ ಬಾರಿಗೆ 6 ಕೋಟಿ ರೂ. ಅನುದಾನ ಮೀಸಲಿಡಲಾಗಿತ್ತು. ತೃತೀಯ ಲಿಂಗಿಗಳು ಕೆಲಸವಿಲ್ಲದೆ ಸಿಗ್ನಲ್ಗಳಲ್ಲಿ ಭಿಕ್ಷೆ ಬೇಡುವುದು, ವೇಶ್ಯೆ ವೃತ್ತಿಯಿಂದ ಹೊರಗೆ ಬಂದು ಗೌರವಯುತವಾಗಿ ಸ್ವಯಂ ಉದ್ಯೋಗದಲ್ಲಿ ತೊಡಗಬೇಕು. ಇದಕ್ಕೆ ಸಹಾಯಧನ ಕೊಡಬೇಕು ಎಂಬ ಉದ್ದೇಶದಿಂದ ಅನುದಾನ ಮೀಸಲಿಡಲಾಗಿದೆ. ಕಳೆದ ಬಾರಿ ಅನುದಾನಕ್ಕಾಗಿ 450 ಅರ್ಜಿಗಳು ಸಹ ಸಲ್ಲಿಕೆಯಾಗಿದ್ದವು. ಬ್ಯಾಂಕ್ ಮೂಲಕ ಸ್ವಯಂ ಉದ್ಯೋಗಕ್ಕಾಗಿ 3 ಲಕ್ಷ ರೂಪಾಯಿ ಸಾಲ ಸೌಲಭ್ಯ, ಈ ಪೈಕಿ 1.50 ಲಕ್ಷ ಪಾಲಿಕೆಯಿಂದ ಸಬ್ಸಿಡಿಯಾಗಿದೆ ಎಂದಿದ್ದಾರೆ.