ಬೆಂಗಳೂರು: ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣ ಸಂಬಂಧ ಮಹಿಳಾ ವಿಭಾಗದಲ್ಲಿ ಟಾಪರ್ ಆಗಿರುವ ರಚನಾ ಅವರನ್ನು ಸಿಐಡಿ ಬಂಧಿಸಿ ವಿಚಾರಣೆ ನಡೆಸುತ್ತಿದೆ. ಮತ್ತೊಂದೆಡೆ ಈಗಾಗಲೇ ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಜ್ ಶೀಟ್ ನಲ್ಲಿ ಆರೋಪಿಗಳು ನಡೆಸಿದ್ದ ಗುಪ್ತ ಸಭೆ ಬಗ್ಗೆ ಉಲ್ಲೇಖವಾಗಿದೆ ಎಂದು ಹೇಳಲಾಗ್ತಿದೆ.
ನೇಮಕಾತಿ ವಿಭಾಗದ ಎಡಿಜಿಪಿಯಾಗಿದ್ದ ಅಮೃತ್ ಪಾಲ್ ನೇತೃತ್ವದಲ್ಲಿ ಸಹೋದ್ಯೋಗಿಗಳ ಜೊತೆ ನಡೆದ ಸಭೆಯಲ್ಲಿ ವಿ ಆರ್ ಸೇಫ್ ಎಂದೇ ಭಾವಿಸಿದ್ದರಂತೆ. ಕಲಬುರಗಿಯಲ್ಲಿ ಪಿಎಸ್ಐ ಪರೀಕ್ಷಾ ಅಕ್ರಮ ಬೆಳಕಿಗೆ ಬರುತ್ತಿದ್ದಂತೆ ಆತಂಕದಿಂದಲೇ ಬೆಂಗಳೂರಿನಲ್ಲಿ ಎಡಿಜಿಪಿ ಅಮೃತ್ ಪಾಲ್ ನೇತೃತ್ವದಲ್ಲಿ ನೇಮಕಾತಿ ವಿಭಾಗದಲ್ಲೇ ಕೆಲಸ ಮಾಡುತ್ತಿದ್ದ ಡಿಎಸ್ಪಿ ಶಾಂತಕುಮಾರ್ ಸಿಬ್ಬಂದಿಯಾದ ಶ್ರೀಧರ್, ಶ್ರೀನಿವಾಸ್ ಮತ್ತು ಹರ್ಷ ಸಭೆ ನಡೆಸಿದ್ದರು ಎನ್ನಲಾಗ್ತಿದೆ. ಪರೀಕ್ಷಾ ಅಕ್ರಮ ಕಲಬುರಗಿಯಲ್ಲಿ ನಡೆದಿದ್ದು, ಇದಕ್ಕೂ ಬೆಂಗಳೂರಿಗೂ ಏನು ಸಂಬಂಧವಿಲ್ಲ. ಹೀಗಾಗಿ ನಾವೆಲ್ಲಾ ಸೇಫ್ ಅಗಿದ್ದೇವೆ. ಅಲ್ಲದೇ ಮುಂದೆಯೂ ಸೇಫ್ ಆಗಿಯೇ ಇರುತ್ತೇವೆ ಎಂದು ಭಾವಿಸಿದ್ದರಂತೆ.