ಕರ್ನಾಟಕ

karnataka

ETV Bharat / state

ದಂಡ ಭೀತಿಯಿಂದ ಆರ್​ಟಿಒ ಆಫೀಸ್​ಗೆ ಹೋದ್ರೆ... ಅಲ್ಲಿಯೂ ಜನರ ಜೇಬಿಗೆ ಕತ್ತರಿ ಆರೋಪ! - ಆರ್​ಟಿಓ ಇನ್ಸ್​​ಸ್ಪೆಕ್ಟರ್ ಕುಮಾರ್

ಸರ್ಕಾರ ಸಂಚಾರಿ ನಿಯಮ ಉಲ್ಲಂಘನೆಗೆ ಹೆಚ್ಚು ದಂಡ ವಿಧಿಸುತ್ತಿದ್ದ ಹಾಗೆ ಆರ್​ಟಿಒ ಅಧಿಕಾರಿಗಳು ತಮ್ಮ ಸ್ವಂತ ಖಜಾನೆ ತುಂಬಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಕೋರಮಂಗಲ ಆರ್​ಟಿಓ ಇನ್ಸ್​ಸ್ಪೆಕ್ಟರ್ ಮೇಲೆ ಹಣ ವಸೂಲಿ‌ ಆರೋಪ..!

By

Published : Sep 14, 2019, 8:24 AM IST

Updated : Sep 14, 2019, 9:41 AM IST

ಬೆಂಗಳೂರು:ಸರ್ಕಾರ ಸಂಚಾರಿ ನಿಯಮ ಉಲ್ಲಂಘನೆಗೆ ಹೆಚ್ಚು ದಂಡ ವಿಧಿಸುತ್ತಿದ್ದ ಹಾಗೆ ಆರ್​ಟಿಒ ಅಧಿಕಾರಿಗಳು ತಮ್ಮ ಸ್ವಂತ ಖಜಾನೆ ತುಂಬಿಸಿಕೊಳ್ತಿದ್ದಾರೆ. ಕೋರಮಂಗಲ ಆರ್​ಟಿಒ ಇನ್ಸ್​​ಪೆಕ್ಟರ್ ಕುಮಾರ್ ಕೂಡಾ ಜನರಿಂದ ಹಗಲು ದರೋಡೆ ಮಾಡ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಕೋರಮಂಗಲ ಆರ್​ಟಿಓ ಇನ್ಸ್​ಪೆಕ್ಟರ್ ಮೇಲೆ ಹಣ ವಸೂಲಿ‌ ಆರೋಪ..!

ಹೆಚ್ಚು ಫೈನ್ ಕೊಡಬೇಕಾಗುತ್ತೆ ಎಂಬ ಕಾರಣಕ್ಕೆ ಈಗ ಜನ ಎಲ್​ಎಲ್​ಆರ್ ಮತ್ತು ಡಿಎಲ್ ಮಾಡಿಸಿಕೊಳ್ಳೋದಕ್ಕೆ ಆರ್​ಟಿಒ ಆಫೀಸ್​ಗೆ ಹೋಗ್ತಿದ್ದಾರೆ. ಇದನ್ನೆ ಬಂಡವಾಳ ಮಾಡಿಕೊಂಡಿರುವ ಅಧಿಕಾರಿಗಳು, ಜನರಿಂದ ಹಣ ವಸೂಲಿ ಮಾಡ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹಣ ಕೊಟ್ಟರೆ ಮಾತ್ರ ಎಲ್​ಎಲ್​ಆರ್ ಕೊಡುತ್ತಾರೆ. ಇಲ್ಲದಿದ್ರೆ, ಟೆಸ್ಟ್ ಡ್ರೈವ್​ನಲ್ಲೇ ಫೇಲ್ ಮಾಡ್ತಾರೆ. ಅಲ್ಲದೆ, ಜನರಿಂದ ಹಣವನ್ನ ವಸೂಲಿ ಮಾಡೋದಕ್ಕೆ ಏಜೆಂಟರನ್ನು ನೇಮಿಸಿಕೊಂಡಿದ್ದಾರೆ ಎಂದು ವಿಡಿಯೋನ ಸಮೇತ ಜನರು ಆರೋಪಿಸುತ್ತಿದ್ದಾರೆ.

ಕೋರಮಂಗಲ ಆರ್​ಟಿಓ ಇನ್ಸ್​ಪೆಕ್ಟರ್ ಹಣ ವಸೂಲಿ ಮಾಡುತ್ತಿರುವುದನ್ನು ವಿಡಿಯೋ ಮಾಡಿದ್ದಾಗಿ ಸಾರ್ವಜನಿಕರು ಹೇಳಿಕೊಂಡಿದ್ದಾರೆ. ಈ ಬಗ್ಗೆ ಮೇಲಾಧಿಕಾರಿಗಳು ಸೂಕ್ತ ತನಿಖೆ ನಡೆಸಿ ಕ್ರಮಕೈಗೊಳ್ಳಬೇಕಾದ ಅಗತ್ಯ ಇದೆ.

Last Updated : Sep 14, 2019, 9:41 AM IST

ABOUT THE AUTHOR

...view details